ನಟಿ ರಿಷಿಕಾ ಸಿಂಗ್, ಯಶ್ ಅವರ 'ಟಾಕ್ಸಿಕ್' ಚಿತ್ರದ ನೋಟವನ್ನು 'ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ' ಎಂದು ಕಟುವಾಗಿ ಟೀಕಿಸಿದ್ದಾರೆ. ಯಶ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿರುವ ಅವರ ವಿಡಿಯೋ, ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್ ಯಶ್ ಅವರ ‘ಟಾಕ್ಸಿಕ್’ ಟ್ರೇಲರ್ ವಿರುದ್ಧ ವಾಚಾಮಗೋಚರವಾಗಿ ಮಾತು ಹರಿಯಬಿಟ್ಟಿದ್ದಾರೆ. ಇದು ಯಶ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್ಗಳ ಜೊತೆ ನಿನ್ನ ಚಕ್ಕಂದ ಕಂದ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ. ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ಟಾಕ್ಸಿಕ್’ಎಂದು ವಿಚಿತ್ರ ರೀತಿಯಲ್ಲಿ ರಿಷಿಕಾ ಸಿಂಗ್ ಮಾತನಾಡಿದ್ದಾರೆ.
ಟ್ರೇಲರ್ ಲಾಂಚ್ ವೇಳೆ ಯಶ್, ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್ ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್ ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು. ದಾರಿ ಯಾವುದೇ ಇರಬಹುದು, ಗುರಿ ಮುಟ್ಟಬೇಕು ಎಂದು ಹೇಳಿದ್ದರು.
55
200 ದಿನ ಶೂಟಿಂಗ್
ಕಾಲಕ್ಕೆ ತಕ್ಕ ಹಾಗೆ ಕುಣಿಯಬೇಕು. ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕು. ಸಿನಿಮಾ ನಿರ್ಮಾಣ ಮಾಡುವುದು ಇಡೀ ಜಗತ್ತಿನ ವಿರುದ್ಧ ಮಾಡಿದಂತೆ. ಎಷ್ಟೋ ಸಲ ಒಂದೊಳ್ಳೆ ಸಿನಿಮಾ ಶುರುವಾದ ಹತ್ತಿಪ್ಪತ್ತು ದಿನಗಳಲ್ಲೇ ಚಿತ್ರ ಸ್ಥಗಿತಗೊಂಡಿದೆ ಎಂಬ ಸುಳ್ಳು ಸುದ್ದಿ ಬರುತ್ತದೆ. ಇದನ್ನೆಲ್ಲ ಅರಗಿಸಿಕೊಳ್ಳುವುದು ಕಷ್ಟ. ಟಾಕ್ಸಿಕ್ ಸಿನಿಮಾಕ್ಕೆ ಎರಡು ವರ್ಷನ್‌ಗಳಲ್ಲಿ 200 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ ಎಂಬ ಮಾಹಿತಿಯನ್ನು ಯಶ್ ಹಂಚಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.