Published : Jun 06, 2019, 05:25 PM ISTUpdated : Jun 06, 2019, 05:36 PM IST
ಬಹುಭಾಷಾ ನಟಿ ಸುಮನ್ ರಂಗನಾಥನ್ ಅವರು ಉದ್ಯಮಿ ಸಜನ್ ಅವರ ಜೊತೆ ಸೋಮವಾರದಂದು ಸರಳವಾಗಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಖಾಸಗಿಯಾಗಿ ಮದುವೆಯಾದ ಸುಮನ್ ತಮ್ಮ ಲವ್ ಸ್ಟೋರಿಯನ್ನೂ ಬಿಚ್ಚಿಟ್ಟಿದ್ದಾರೆ...
ಬಹುಭಾಷಾ ನಟಿ, ಸುಮನ್ ರಂಗನಾಥನ್ ಉದ್ಯಮಿ ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

218
ಕನ್ನಡ, ತೆಲಗು, ತಮಿಳು, ಹಿಂದಿ, ಭೋಜ್‍ಪುರಿ ಹೀಗೆ ಬಹುಭಾಷೆಗಳಲ್ಲಿ ಸಿನಿಮಾ ಮಾಡಿ ಮಿಂಚಿರುವ ಚಂದನವನದ ಚೆಲುವೆ ಸುಮನ್, ಉದ್ಯಮಿ ಸಜನ್ ಅವರನ್ನು ವರಿಸಿದ್ದಾರೆ.

318
ಮೂಲತಃ ಕೊಡಗಿನವರಾದ ಸಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

418
ತಮ್ಮ ಪ್ರೀತಿ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಡದ ಸುಮನ್ ಮದುವೆಯ ಬಳಿಕವಷ್ಟೇ ಮಾಧ್ಯಮಗಳಿಗೆ ತಮ್ಮ ಲವ್ ಸ್ಟೋರಿ ಹೇಳಿದ್ದಾರೆ

518
ಸೋಮವಾರ ಖಾಸಗಿಯಾಗಿ ತಮ್ಮ ಆತ್ಮೀಯ ವೃಂದ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ಆಗಿ ಸಜನ್ ಜೊತೆ ಸುಮನ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

618
ಸುಮನ್ ಮ್ಯಾರೇಜ್ ಸ್ಟೋರಿ ತಿಳಿದು ಈ ಕುರಿತಾಗಿ ಅವರನ್ನು ಕೇಳಿದಾಗಲೇ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.

718
ಸುಮನ್ ಹಾಗೂ ಸಜನ್ ಪರಸ್ಪರ ಪರಿಚಯವಾಗಿದ್ದು 8 ತಿಂಗಳ ಹಿಂದೆ.

818
ಬಳಿಕ ಸ್ನೇಹವಾಗಿ, ಒಬ್ಬರನ್ನೊಬ್ಬರು ಭೇಟಿಯಾಗಲಾರಂಭಿಸಿದ್ದರು. ಈ ಒಡನಾಟ ಪ್ರೀತಿಗೆ ತಿರುಗಿತ್ತು.

918
ಇಬ್ಬರೂ ಮದುವೆಯಾಗಲು ಯೋಚಿಸಿ, ತಮ್ಮ ಪ್ರೀತಿ ವಿಚಾರವನ್ನು ಕುಟುಂದವರಿಗೆ ತಿಳಿಸಿ ಒಪ್ಪಿಗೆ ಪಡೆದರು.

1018
ಒಪ್ಪಿಗೆ ಪಡೆದ ಬಳಿಕ ಆತ್ಮೀಯರ ಸಮ್ಮುಖದಲ್ಲಿ ಹಿರಿಯರ ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

1118
ಪತಿ ಸುಜನ್ ಕುರಿತಾಗಿ ಹೇಳಿಕೊಂಡಿರುವ ಸುಮನ್, ಅವರೊಬ್ಬ ಸಿಂಪಲ್ ವ್ಯಕ್ತಿ. ನಮ್ಮಿಬ್ಬರ ಆಲೋಚನೆಗಳೂ ಮ್ಯಾಚ್ ಆಗುತ್ತವೆ. ಹೀಗಾಗಿ ನಾವು ಬೆರೆಯಲು ಸುಲಭವಾಯ್ತು ಎಂದಿದ್ದಾರೆ.

1218
ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಹೀಗೆ ಕನ್ನಡದ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಸುಮನ್ ಭೇಷ್ ಎನಿಸಿಕೊಂಡಿದ್ದಾರೆ.

1318
ಇಷ್ಟೇ ಅಲ್ಲದೇ ಬಿಂದಾಸ್, ಬುದ್ಧಿವಂತ, ಸಿದ್ಲಿಂಗು, ಸವಾರಿ, ಕಟಾರಿ ವೀರ ಸುರ ಸುಂದರಾಂಗಿ, ನೀರ್ ದೋಸೆ ಹೀಗೆ ಇತ್ತೀಚಿಗೆ ತೆರೆಕಂಡ ಚಿತ್ರಗಳಲ್ಲಿಯೂ ನಟಿಸಿ ಅಭಿಮಾನಿಗಳ ಮನ ಕದ್ದಿದ್ದಾರೆ.

ಬಾಲಿವುಡ್‌ನ ಫರೀಬ್, ಕುರುಕ್ಷೇತ್ರ, ಏಕ್ ಸ್ತ್ರೀ ಹೀಗೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

1618
2012ರಲ್ಲಿ ತೆರೆಕಂಡ ಲೂಸ್ ಮಾದ ಯೋಗಿ ಹಾಗೂ ರಮ್ಯಾ ಅಭಿನಯದ `ಸಿದ್ಲಿಂಗು’ ಚಿತ್ರದಲ್ಲಿ ಆಂಡಾಳಮ್ಮ ಪಾತ್ರದಲ್ಲಿ ಸುಮನ್ ನಟಿಸಿದ್ದರು. ಈ ಚಿತ್ರಕ್ಕಾಗಿ ಫಿಲಂ ಫೇರ್ ಅವಾರ್ಡ್‍ನಲ್ಲಿ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನೂ ಪಡೆದಿದ್ದರು

1718
2016ರಲ್ಲಿ ತೆರೆಕಂಡ `ನೀರ್ ದೋಸೆ’ ಚಿತ್ರಕ್ಕಾಗಿ ಕನ್ನಡದ ಉತ್ತಮ ಪೋಷಕ ನಟಿ ಎಂದು ಸೈಮಾ ಅವಾರ್ಡ್ ಕೂಡ ಗಳಿಸಿದ್ದಾರೆ.

1818
ಸದ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತಕಧಿಮಿತಾ' ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿಯೂ ಸುಮನ್ ಮಿಂಚಿದ್ದಾರೆ.