ಪತ್ನಿ ಮತ್ತು ಮಗಳೊಂದಿಗೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್: ಸ್ಪೆಷಲ್ ಫೋಟೋಸ್ ಇಲ್ಲಿವೆ!

First Published | Sep 2, 2023, 8:43 PM IST

ಸುದೀಪ್ ಜನ್ಮ ದಿನಕ್ಕೆ ಮಗಳು ಸಾನ್ವಿ ಮತ್ತು ಪ್ರಿಯಾ ಸುದೀಪ್ ಬಂದಿದ್ದರು. ಅಪ್ಪನ ಫ್ಯಾನ್ಸ್ ಜೊತೆಗೆ ಮಗಳು ಸಾನ್ವಿ ಸುದೀಪ್ ಕೂಡ ಹುಟ್ಟುಹಬ್ಬವನ್ನ ಸಂಭ್ರಮಿಸಿದರು. ಅಪ್ಪನ ಫ್ಯಾನ್ಸ್ ಕೇಳುವ ಸೆಲ್ಫಿಯನ್ನ ಕೊಟ್ಟು ಖುಷಿಪಟ್ಟರು.

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 50 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಧ್ಯೆ ರಾತ್ರಿ12 ಗಂಟೆಗೆ ಹಬ್ಬದ ಸೆಲೆಬ್ರೇಷನ್ ಆಗಿದೆ. 

ಈ ಮೂಲಕ ಅಭಿಮಾನಿಗಳು ದೊಡ್ಡಹಬ್ಬ ಮಾಡಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. 

Tap to resize

ರಾತ್ರಿಯಿಡಿ ಕಿಚ್ಚನ ಹುಟ್ಟುಹಬ್ಬವನ್ನ ಹಬ್ಬದಂತೆ ಆಚರಿಸಿದ್ದಾರೆ. ಪತ್ನಿ ಪ್ರಿಯಾ ಕೂಡ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಕಿಚ್ಚನ ಮಗಳು ಸಾನ್ವಿ ಸುದೀಪ್ ಫ್ಯಾನ್ಸ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. 

ಮತ್ತೊಂದು ಕಡೆಗಡೆ ಕಿಚ್ಚನ K-46 ಚಿತ್ರದ ಟೈಟಲ್ ರಿವೀಲ್ ಆಗಿದೆ. ಕಿಚ್ಚ ಸುದೀಪ್ 50 ನೇ ಜನ್ಮ ದಿನಕ್ಕೆ ಪತ್ನಿ ಪ್ರಿಯಾ ಸುದೀಪ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. 

ತಮ್ಮ ಪತಿಯ ಅಡಿ ಕಟೌಟ್‌ ಅನ್ನ ಬಾನಂಗಳದಲ್ಲಿ ಇರೋ ಹಾಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಈ ಗಿಫ್ಟ್‌ಗಾಗಿಯೇ ಸಾವಿರ ಡ್ರೋನ್ ಕ್ಯಾಮರಾಗಳ ಬಳಕೆ ಆಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಕಿಚ್ಚನ ಹುಟ್ಟುಹಬ್ಬವನ್ನ ಅದ್ಧೂರಿಯಾಗಿಯೇ ಆಚರಿಸಲಾಗಿದೆ. 

ಅಭಿಮಾನಿಗಳು ಸಾಗರೋಪಾದಿಯಲ್ಲಿಯೇ ಹರಿದು ಬಂದಿದ್ದಾರೆ. ಪ್ರತಿ ಅಭಿಮಾನಿಯೂ ಕಿಚ್ಚನ ಜನ್ಮ ದಿನವನ್ನ ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ದಾರೆ. 

ಸುದೀಪ್ ಜನ್ಮ ದಿನಕ್ಕೆ ಮಗಳು ಸಾನ್ವಿ ಮತ್ತು ಪ್ರಿಯಾ ಸುದೀಪ್ ಬಂದಿದ್ದರು. ಅಪ್ಪನ ಫ್ಯಾನ್ಸ್ ಜೊತೆಗೆ ಮಗಳು ಸಾನ್ವಿ ಸುದೀಪ್ ಕೂಡ ಹುಟ್ಟುಹಬ್ಬವನ್ನ ಸಂಭ್ರಮಿಸಿದರು. ಅಪ್ಪನ ಫ್ಯಾನ್ಸ್ ಕೇಳುವ ಸೆಲ್ಫಿಯನ್ನ ಕೊಟ್ಟು ಖುಷಿಪಟ್ಟರು.

ಸುದೀಪ್ ಅವರು ಬೆಸ್ಟ್ ನಟ ಮಾತ್ರವಲ್ಲ, ದಿ ಬೆಸ್ಟ್ ಡೈರೆಕ್ಟರ್ ಅನ್ನೋದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಕೆಂಪೇಗೌಡ, ಮಾಣಿಕ್ಯ, ಮೈ ಆಟೋಗ್ರಾಫ್ ಸೇರಿದಂತೆ ಹಲವು ಸಿನಿಮಾಗಳ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. 

Latest Videos

click me!