ಸಿನಿಮಾ ಸ್ಟಾರ್‌ಗಳ ಸಂಭಾವನೆ ಬಗ್ಗೆ ಎಲ್ಲರಿಗೂ ಕುತೂಹಲ. ಈ ಮಧ್ಯೆ ಹೀರೋಯಿನ್‌ಗಳಿಗೆ ಒಳ್ಳೆಯ ಸಂಭಾವನೆ ಇಲ್ಲ ಅನ್ನುವ ಚರ್ಚೆಯೂ ನಡೆಯುತ್ತದೆ. ಇಂಥಾ ಸಂದರ್ಭದಲ್ಲಿ ಪರಭಾಷೆ ಹೀರೋಯಿನ್‌ಗಳು ಒಂದು ಸಿನಿಮಾಗೆ ಎಷ್ಟುಸಂಭಾವನೆ ಪಡೆಯುತ್ತಾರೆ ಅನ್ನುವ ಕುತೂಹಲ ಸಹಜ. ಇದರಲ್ಲಿ ಬಾಲಿವುಡ್ ನಟಿಯರ ಸಂಭಾವನೆಯಂತೂ ಸಾಮಾನ್ಯ ಸಿನಿಮಾಗಳ ಬಜೆಟ್‌ಗಿಂತ ಅದೆಷ್ಟೋ ಪಾಲು ಜಾಸ್ತಿ ಇದೆ. ಬಾಲಿವುಡ್ಡೇ ಹಾಗೆ. ಮಾರುಕಟ್ಟೆಯೂ ದೊಡ್ಡದು, ದುಡ್ಡೂ ದೊಡ್ಡದೇ. ನೀವು ಆರಾಧಿಸುವವರು ಎಷ್ಟುಸಂಭಾವನೆ ಪಡೆಯುತ್ತಾರೆ ಅಂತ ನೋಡಿ ಒಮ್ಮೆ.