Rashmika Mandanna: 'ನನ್ನ ಜೀವನದ ಬೆಸ್ಟ್ ನಿರ್ಧಾರ ಇದೇ': ರಶ್ಮಿಕಾ ಬಹಿರಂಗಪಡಿಸಿದ ಸತ್ಯ ಕೇಳಿ ಫ್ಯಾನ್ಸ್ ಶಾಕ್!

Published : Jun 15, 2026, 08:05 PM IST

Instagram Q&A ವೇಳೆ ವಿಜಯ್ ದೇವರಕೊಂಡ ಬಗ್ಗೆ ಮನದಾಳದ ಮಾತು ಹಂಚಿಕೊಂಡ ರಶ್ಮಿಕಾ ಮಂದಣ್ಣ, ತಮ್ಮ ಜೀವನದ ಅತ್ಯಂತ ಸಂತೋಷದ ನಿರ್ಧಾರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಉತ್ತರ ಈಗ ವೈರಲ್ ಆಗಿದೆ.

PREV
14
ಮದುವೆಯ ಮುದ್ರೆ

ಏಳು ವರ್ಷಗಳ ಪ್ರೀತಿಗೆ ಈ ವರ್ಷ ಫೆಬ್ರವರಿಯಲ್ಲಿ ಮದುವೆಯ ಮುದ್ರೆ ಬಿದ್ದಿತ್ತು. ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಾಂಪತ್ಯ ಜೀವನದಲ್ಲಿ ಖುಷಿಯಾಗಿದ್ದು, ಪರಸ್ಪರರ ಮೇಲಿನ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ.

24
ಮನದಾಳದ ಮಾತು

ಇದೀಗ ರಶ್ಮಿಕಾ ಮತ್ತೊಮ್ಮೆ ತಮ್ಮ ಪತಿ ವಿಜಯ್ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ (Q&A) ನಡೆಸಿದ ರಶ್ಮಿಕಾ, ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದರು.

34
ಸ್ನೇಹಿತನನ್ನೇ ಮದುವೆಯಾಗಿರುವುದು

ಈ ವೇಳೆ ಅಭಿಮಾನಿಯೊಬ್ಬರು, "ನೀವು ಜೀವನದಲ್ಲಿ ಮಾಡಿದ ಅತ್ಯಂತ ಸಂತೋಷದ ಕೆಲಸ ಯಾವುದು?" ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, "ನಾನು ಮಾಡಿರುವ ಅತ್ಯಂತ ಸಂತೋಷದ ಕೆಲಸ ಎಂದರೆ ನನ್ನ ಅತ್ಯುತ್ತಮ ಸ್ನೇಹಿತನನ್ನೇ ಮದುವೆಯಾಗಿರುವುದು" ಎಂದು ಉತ್ತರಿಸಿದ್ದಾರೆ.

44
ಸೋಶಿಯಲ್ ಮೀಡಿಯಾದಲ್ಲಿ ವೈರಲ್

ರಶ್ಮಿಕಾ ಅವರ ಈ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಮೇಲಿನ ಅವರ ಪ್ರೀತಿ ಮತ್ತು ಬಾಂಧವ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮದುವೆಯ ನಂತರವೂ ಈ ಸ್ಟಾರ್ ಜೋಡಿ ಅಭಿಮಾನಿಗಳ ಮೆಚ್ಚಿನ ಜೋಡಿಯಾಗಿ ಮುಂದುವರಿದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories