ರಶ್ಮಿಕಾ ಮಂದಣ್ಣ ಹ್ಯಾಂಡ್‌ಬ್ಯಾಗ್‌ನಲ್ಲಿ ಈ ವಸ್ತು ಮಿಸ್ಸೇ ಆಗೋದಿಲ್ವಂತೆ..!

Published : Jan 03, 2024, 07:39 PM ISTUpdated : Jan 03, 2024, 07:48 PM IST

ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಮೂಲಕವೇ ದೇಶದ ಗಮನಸೆಳೆದಿರುವ ರಶ್ಮಿಕಾ ಮಂದಣ್ಣ, ಎಲ್ಲಿಯೀ ಹೋದರು ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಮಿಸ್ಸೇ ಆಗದಂತೆ ಒಂದು ವಸ್ತುವನ್ನು ಇರಿಸಿಕೊಳ್ಳುತ್ತಾರಂತೆ

PREV
114
ರಶ್ಮಿಕಾ ಮಂದಣ್ಣ ಹ್ಯಾಂಡ್‌ಬ್ಯಾಗ್‌ನಲ್ಲಿ ಈ ವಸ್ತು ಮಿಸ್ಸೇ ಆಗೋದಿಲ್ವಂತೆ..!

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಮೋಸ್ಟ್ ವಾಂಟೆಡ್ ನಾಯಕಿ. ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ರಶ್ಮಿಕಾ, ಪುಷ್ಪಾ ಸಿನಿಮಾದ ಮೂಲ ಪ್ಯಾನ್ ಇಂಡಿಯಾ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಹಿಂದಿಯಲ್ಲೂ ಅವರ ಯಶಸ್ಸಿನ ಓಟ ಸಾಗಿದೆ

214


ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

314

ಪುಷ್ಪಾ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ಪಾಲಿಗೆ ಅವಕಾಶಗಳು ಹೆಚ್ಚಾದವು. ಆದರೆ, ಸಿನಿಮಾ ರಂಗವೇ ಹಾಗೆ. ಇಲ್ಲಿ ಸೌಂದರ್ಯ ಇದ್ದರೆ ಮಾತ್ರವೇ ಬೆಲೆ. ಆರಂಭದಲ್ಲಿ ಮಸಾಲಾ ಚಿತ್ರಗಳಲ್ಲಿ ನಟಿಸುತ್ತಿದ್ದ ರಶ್ಮಿಕಾ, ಪುಷ್ಪಾ ಸಿನಿಮಾದ ಬಳಿಕ ಅಚ್ಚರಿ ಮೂಡಿಸಿದ್ದರು.

414


ಪುಷ್ಪಾದಲ್ಲಿ ಡಿ ಗ್ಲಾಮರ್‌ ಪಾತ್ರದ ಮೂಲಕ ಮಿಂಚಿದ್ದ ರಶ್ಮಿಕಾ ಬಾಲಿವುಡ್‌ನ ಆನಿಮಲ್‌ ಚಿತ್ರದಲ್ಲಿ ತಮ್ಮ ಹಾಟ್‌ ನಟನೆಯಿಂದ ಗಮನಸೆಳೆದಿದ್ದರು.

514

ಅದರೊಂದಿಗೆ ರಶ್ಮಿಕಾ ಮಂದಣ್ಣ ಅವರ ಸೌಂದರ್ಯದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ರಶ್ಮಿಕಾ ಮಂದಣ್ಣ ಇಷ್ಟು ಸುಂದರವಾಗಿರಲು ಕಾರಣವೇನು? ಅವರು ಏನು ಮಾಡುತ್ತಾರೆ? ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

614

ರಶ್ಮಿಕಾ ಮಂದಣ್ಣ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆಕೆಯೊಂದಿಗೆ ಶೂಟಿಂಗ್ ಗೆ ಪ್ರಯಾಣಿಸಿದವರಿಗೆ ಈ ವಿಷಯ ಚೆನ್ನಾಗಿ ಅರ್ಥವಾಗದೆ. ಏಕೆಂದರೆ ಆಕೆ ತನ್ನ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ.

714

ರಶ್ಮಿಕಾ ತಮ್ಮ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಾರೆ. ತಮ್ಮ ಬೇಸರದ ಸಮಯವನ್ನು ಜಿಮ್‌ನಲ್ಲುಯೇ ಕಳೆಯೋದು ಇಷ್ಟ ಎಂದು ಅವರೂ ಬಹಳ ಸಾರಿ ಹೇಳಿದ್ದಾರೆ. ಅದರೊಂದಿಗೆ ತಮ್ಮ ಇಷ್ಟದ ಆಹಾರವನ್ನೇ ಹೆಚ್ಚಾಗಿ ಅವರು ಸೇವಿಸುತ್ತಾರೆ.
 

814

ಇದೇ ಕಾರಣಕ್ಕಾಗಿ ಅವರ ತೂಕ ಕೂಡ ನಿಯಂತ್ರಣದಲ್ಲಿ ಹೊರಾಂಗಣ ಶೂಟಿಂಗ್‌ಗೆ ಹೋದಾಗಲೂ ಅವರು ಜಿಮ್‌ ವರ್ಕೌಟ್‌ ಬಿಡೋದಿಲ್ಲ. ಶೂಟಿಂಗ್‌ ಸ್ಥಳದಲ್ಲಿಯೇ ಜಿಮ್‌ ಅಥವಾ ವರ್ಕ್‌ಔಟ್‌ಗೆ ವ್ಯವಸ್ತೆ ಮಾಡಿಕೊಳ್ಳುತ್ತಾರೆ.

914

ಇನ್ನು ರಶ್ಮಿಕಾ ಫಿಟ್‌ನೆಸ್‌ ಬಗ್ಗೆ ಲೇಡಿ ಸೂಪರ್‌ಸ್ಟಾರ್‌ ವಿಜಯಶಾಂತಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸರಿಲೇರು ನೀಕೆವ್ವರು ಚಿತ್ರದಲ್ಲಿ ವಿಜಯಶಾಂತಿ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. 

1014

ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮಂದಣ್ಣ ಅವರ ಸ್ಕಿನ್‌ ಯಾವಾಗಲೂ ಹೊಳೆಯುತ್ತಿರುತ್ತದೆ. ಇದಕ್ಕೆ ನಿಜವಾದ ಕಾರಣವೇನು ಎಂದು ಅಭಿಮಾನಿಗಳು ವಿಚಾರಿಸಿದಾಗ ಅವರು ತಮ್ಮ ಗ್ಲಾಮರ್‌ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

1114


ಹೌದು ರಶ್ಮಿಕಾ ಮಂದಣ್ಣ ತಮ್ಮ ಗ್ಲಾಮರ್‌ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ತಮ್ಮ ಗ್ಲಾಮರ್‌ಗೆ ನೀರು ಕಾರಣ ಎಂದು ಹೇಳುವ ರಶ್ಮಿಕಾ ತಾವು ದಿನಕ್ಕೆ 7 ಲೀಟರ್‌ ನೀರು ಕಡ್ಡಾಯವಾಗಿ ಕುಡಿಯುತ್ತೇನೆ ಎಂದಿದ್ದಾರೆ.

1214

ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ವೇಳೆ ಒಂದಿಂಚೂ ತಪ್ಪದೇ 7 ಲೀಟರ್‌ ನೀರು ಕುಡಿಯುತ್ತೇನೆ. ತಾನು ಎಲ್ಲಿಯೂ ಹೋದರೂ, ತಮ್ಮೊಂದಿಗೆ ಇರುವ ಕೈಚೀಲದಲ್ಲಿ ನೀರಿನ ಬಾಟಲ್‌ ಇದ್ದೇ ಇರುತ್ತದೆ ಎಂದಿದ್ದಾರೆ.

1314

ಬಹುಶಃ ಅವರ ತ್ವಚೆ ಹೊಳೆಯಲು ಇದೇ ಕಾರಣ ಎನ್ನಲಾಗಿದೆ. ಈ ವಿಚಾರ ತಿಳಿದ ಅಭಿಮಾನಿಗಳು ಹಾಗೂ ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಎಷ್ಟೇ ಕ್ರೀಂ ಹಚ್ಚಿದರೂ... ಮೇಕಪ್ ಮಾಡಿ... ನೈಸರ್ಗಿಕ ಸೌಂದರ್ಯ ಪಡೆಯಲು ಪ್ರಕೃತಿಯನ್ನು ನಂಬಲೇಬೇಕು. ಎಂದಿದ್ದಾರೆ.

1414
rashmika mandanna


ಒಬ್ಬ ನಾಯಕಿ ಇಂತಹ ಒಳ್ಳೆಯ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು, ಆದರೆ ಅವಳು ಈ ವಿಷಯವನ್ನು ಸ್ವಯಂಪ್ರೇರಣೆಯಿಂದ ಪ್ರಚಾರ ಮಾಡಬೇಕು ಎಂದಿದ್ದಾರೆ.

Read more Photos on
click me!

Recommended Stories