ದಕ್ಷಿಣದ ಈ ಜನಪ್ರಿಯ ರೋಮ್ಯಾಂಟಿಕ್‌ ಸಿನಿಮಾಗಳು ಈಗ ಓಟಿಟಿಯಲ್ಲೂ ಲಭ್ಯ

Published : Jan 03, 2024, 04:57 PM IST

ದಕ್ಷಿಣ ಭಾರತದ ಚಿತ್ರರಂಗವು ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ ಹಾಗೂ ದಕ್ಷಿಣ ಭಾರತದ ಚಲನಚಿತ್ರಗಳು ದಾಖಲೆಗಳನ್ನು ಮುರಿಯುತ್ತಿವೆ,  ಬಹಳಷ್ಟು ಚಲನಚಿತ್ರಗಳು ಬಾಲಿವುಡ್‌ನಲ್ಲಿ ರೀಮೇಕ್ ಆಗಿರುತ್ತವೆ, ವಿಶೇಷವಾಗಿ ರೋಮ್ಯಾಂಟಿಕ್‌ ಸಿನಿಮಾಗಳು. ಸೌತ್‌ನ  ಅತ್ಯುತ್ತಮ ರೋಮ್ಯಾಂಟಿಕ್  ಚಲನಚಿತ್ರಗಳು ಈಗ ಓಟಿಟಿಯಲ್ಲೂ ಲಭ್ಯವಿದೆ.

PREV
110
ದಕ್ಷಿಣದ ಈ ಜನಪ್ರಿಯ ರೋಮ್ಯಾಂಟಿಕ್‌ ಸಿನಿಮಾಗಳು ಈಗ ಓಟಿಟಿಯಲ್ಲೂ ಲಭ್ಯ

ಸೀತಾ ರಾಮಂ: ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ಸೀತಾ ರಾಮಂ, ಭಾರತದಾದ್ಯಂತ ಜನರ ಮೆಚ್ಚುಗೆ ಮತ್ತು ಹೃದಯಗಳನ್ನು ಗೆದ್ದಿದೆ. ಸುಂದರವಾದ ಕಥಾಹಂದರ ಈ ರೋಮ್ಯಾಂಟಿಕ್‌ ಸಿನಿಮಾ  ಅಮೆಜಾನ್‌ ಪ್ರೈಮ್‌ನಲ್ಲಿ  ಲಭ್ಯವಿದೆ.

210

ಗೀತಾ ಗೋವಿಂದಂ: ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವಕೊಂಡ ಅಭಿನಯದ ಸೂಪರ್‌ ಹಿಟ್‌  ಗೀತಾ ಗೋವಿಂದಂ ಸೌತ್‌ನ ಜನಪ್ರಿಯ ರೋಮ್ಯಾಂಟಿಕ್‌ ಸಿನಿಮಾವಾಗಿದೆ. ಈ ಚಿತ್ರ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸ್ತುತ ಲಭ್ಯವಿದೆ. 

310

ನಿನ್ನು ಕೋರಿ: ನಿನ್ನು ಕೋರಿ ಒಂದು ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿದ್ದು ನಾನಿ, ನಿವೇತಾ ಥಾಮಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ  ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. 

410

ಓಕೆ ಕಣ್ಮಣಿ: ದುಲ್ಕರ್ ಸಲ್ಮಾನ್, ನಿತ್ಯಾ ಮೆನನ್ ಅಭಿನಯದ ತಮಿಳು ಚಿತ್ರ ಓಕೆ ಕಣ್ಮಣಿ ಬಾಲಿವುಡ್‌ನಲ್ಲಿ  ಓಕೆ ಜಾನು ಆಗಿ ರಿಮೇಕ್‌ ಆಗಿದೆ. ಮಣಿರತ್ನಂ ಅವರು ಬರೆದು ನಿರ್ದೇಶನ ಮಾಡಿರುವ ಈ ರೋಮ್ಯಾಂಟೀಕ್‌ ಚಿತ್ರ ಈಗ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

510

ಡಿಯರ್‌ ಕಾರ್ಮೆಡ್: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯ ಮತ್ತೊಂದು ಫೇಮಸ್‌ ಸಿನಿಮಾ. ಭರತ್ ಕಮ್ಮ ನಿರ್ದೇಶನದ ಈ ಚಿತ್ರ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸ್ತುತ ಲಭ್ಯವಿದೆ.

610

ತೊಲಿ ಪ್ರೇಮ: ತೊಲಿ ಪ್ರೇಮ, ದಕ್ಷಿಣದ ಜನಪ್ರಿಯ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ. ವರುಣ್ ತೇಜ, ರಾಶಿ ಖನ್ನಾ, ನರೇಶ್, ಸುಹಾಸಿನಿ ಮಣಿರತ್ನಂ ಮುಖ್ಯ ಪಾತ್ರವರ್ಗದಲ್ಲಿರುವ  ಸಿನಿಮಾವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.

710

ಪ್ರೇಮಮ್: ಪ್ರೇಮಮ್ ದಕ್ಷಿಣ ಭಾರತದ ಜನಪ್ರಿಯ ರೊಮ್ಯಾಂಟಿಕ್  ಚಲನಚಿತ್ರವಾಗಿದೆ. ಈ ಸೂಪರ್‌ ಹಿಟ್‌ ಸಿನಿಮಾದಲ್ಲಿ  ನಿವಿನ್ ಪೌಲಿ, ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿದ್ದಾರೆ.  ಈ ಚಿತ್ರ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸ್ತುತ ಲಭ್ಯವಿದೆ.

810

NINNILA NINNILA

ನ್ನಿಲಾ ನಿನ್ನಿಲಾ: ಅಶೋಕ್ ಸೆಲ್ವನ್, ನಿತ್ಯಾ ಮೆನೆನ್‌ ಅಭಿನಯದ  ರೊಮ್ಯಾಂಟಿಕ್ ಸಿನಿಮಾ ಝೀ5ನಲ್ಲಿ ಪ್ರಸ್ತುತ ಲಭ್ಯವಿದೆ.

910
ఈ అందగత్తె ఎత్తు అక్షరాలా 5 అడుగులా 5 అంగుళాలు. మన హార్దిక్ పాండ్య ఏమో 6 అడుగుల ఆజానుబాహుడు. అప్పుడప్పుడు ముద్దుపెట్టుకోవడానికి ఈ అమ్మడిని హార్దిక్ ఎత్తుకుంటాడట. అలా అయితే తప్ప అందడేమో...

ಫಿಧಾ: ಫಿದಾ ದಕ್ಷಿಣ ಭಾರತದ ಅತ್ಯಂತ ಸುಂದರವಾದ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ, ಅದು ನಿಮಗೆ ಹೆಚ್ಚಿನದನ್ನು ಬಯಸುತ್ತದೆ. ಸಾಯಿ ಪಲ್ಲವಿ ಮತ್ತು ವರುಣ್ ತೇಜ್, ಅವರ ಜೊತೆ ಸಾರಾ ಉರಿಯಾರ್ತೆ ಬೆರ್ರಿ, ಹರ್ಷವರ್ಧನ್ ರಾಣೆ  ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಲಭ್ಯವಿದೆ.

1010

96: ಪ್ರತಿಯೊಂದು ಅಪೂರ್ಣ ಪ್ರೇಮಕಥೆಯು ಸುಖಾಂತ್ಯಕ್ಕೆ ಅರ್ಹವಾಗಿದೆ ಮತ್ತು 96 ಅದಕ್ಕೆ ಉದಾಹರಣೆಯಾಗಿರುವ ಈ ಸಿನಿಮಾದಲ್ಲಿ  ವಿಜಯ್ ಸೇತುಪತಿ ಮತ್ತು ತ್ರಿಶಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಸೋನಿ ಲಿವ್‌ನಲ್ಲಿ ನೋಡಲು ಸಾಧ್ಯ.

Read more Photos on
click me!

Recommended Stories