ಮುಂಬೈ(ಏ. 13) ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ಶೋ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ರಾಮನವಮಿಯನ್ನು ವಿಶೇಷವಾಗಿ ಆಚರಿಸಲು ವಾಹಿನಿ ಸಿದ್ಧತೆ ಮಾಡಿಕೊಂಡಿದ್ದು ಯೋಗಗುರು ಬಾಬಾ ರಾಮ್ ದೇವ್ ಗೆಸ್ಟ್ ಆಗಿ ಆಗಮಿಸಲಿದ್ದಾರೆ. ಮ್ಯೂಸಿಕ್ ರಿಯಾಲಿಟಿ ಶೋ ನಲ್ಲಿ ರಾಮ್ ದೇವ್ ಕಾಣಿಸಿಕೊಳ್ಳಲಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಯುವ ಗಾಯಕರು ಸಂಗೀತ ಪ್ರಚುರಪಡಿಸಲಿದ್ದಾರೆ. ಇಂಡಿಯನ್ ಐಡಲ್ 12 ವೀಕೆಂಡ್ ನಲ್ಲಿ ಮೆಚ್ಚುಗೆ ಪಡೆದುಕೊಳ್ಳಲಿದೆ. ಸ್ಪರ್ಧಿಗಳಿಗೂ ರಾಮ್ ದೇವ್ ಯೋಗ ಟಿಪ್ಸ್ ನೀಡಲಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿಯೂ ರಾಮ್ ದೇವ್ ಭಾಗವಹಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಪತಂಜಲಿ ಸಂಸ್ಥೆಯನ್ನು ಮುಂದೆ ನಡೆಸುತ್ತಿರುವ ರಾಮ್ ದೇವ್ ಸ್ವದೇಶಿ ಉತ್ಪನ್ನಗಳ ಮೌಲ್ಯ ಸಾರುತ್ತಲೇ ಬಂದಿದ್ದಾರೆ. ಕಳೆದ ವಾರ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಭಾಗವಹಿಸಿದ್ದರು. Indian Idol 12 is all set to celebrate Ram Navami with a special episode. ಇಂಡಿಯನ್ ಐಡಲ್ ನಲ್ಲಿ ಬಾಬಾ ರಾಮ್ ದೇವ್.. ಸಖತ್ ಟಿಪ್ಸು!