'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ತಮ್ಮ ಪತಿಯೊಂದಿಗೆ ಪ್ರವಾಸದಲ್ಲಿದ್ದು, ಸಮುದ್ರದಾಳದಲ್ಲಿ ಡೈವಿಂಗ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ಈ 5 ಸೆಕೆಂಡಿನ ಸಾಹಸಕ್ಕೆ 5 ನಿಮಿಷ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿರುವ ನಟಿ, ಸಮುದ್ರದಲ್ಲಿ ಈಜುವ ಅನುಭವವನ್ನು ಬಣ್ಣಿಸಿದ್ದಾರೆ.
ನಟಿ ಸಂಜನಾ ಬುರ್ಲಿ ಅರ್ಥಾತ್ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್ ಮಾಡುತ್ತಿದ್ದಾರೆ.
26
ಸಮುದ್ರಕ್ಕೆ ಹಾರಿದ ನಟಿ
ಇದೀಗ ಪತಿಯ ಜೊತೆ ಟ್ರಿಪ್ ಮೂಡ್ನಲ್ಲಿ ಇರುವ ನಟಿ ಸಂಜನಾ ಬುರ್ಲಿ ಅವರು ಸಮುದ್ರದೊಳಗೆ ಡೈವಿಂಗ್ ಮಾಡಿದ್ದು, ಅದರ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಮುದ್ರದೊಳಗೆ ಧುಮುಕಿರುವ ನಟಿ, ಕೊನೆಗೆ ಮೀನುಗಳ ನಡುವೆ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
36
ಐದು ಸೆಕೆಂಡ್ಗಾಗಿ ಐದು ನಿಮಿಷ
ನಟಿಯ ಜೊತೆಗೆ ಪತಿ ಕೂಡ ನೋಡಬಹುದು. ಈ 5 ಸೆಕೆಂಡುಗಳ ಸಾಹಸಕ್ಕಾಗಿ ನನ್ನನ್ನು ನಾನು ಮನವೊಲಿಸಿಕೊಳ್ಳಲು 5 ನಿಮಿಷಗಳನ್ನು ತೆಗೆದುಕೊಂಡೆ! ಆದಾಗ್ಯೂ, ತೆರೆದ ಸಮುದ್ರದ ನೀರಿನಲ್ಲಿ ಈಜುವಾಗ ನೀವು ಅನುಭವಿಸುವ ಸ್ವಾತಂತ್ರ್ಯವು ಅವಾಸ್ತವಿಕ ಮತ್ತು ಭರಿಸಲಾಗದ್ದು ಎಂದು ನಟಿ ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾರೆ.
ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
56
ನಟಿಯ ಕುರಿತು
ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
66
ಸೀರಿಯಲ್ ಬಿಟ್ಟಿದ್ದ ನಟಿ
ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ನಟಿ ಹೇಳಿದ್ದರು. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿತ್ತು. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.