ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ ನಟಿಯ ಮದುವೆ?

Published : Sep 25, 2023, 06:21 PM IST

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆಗೆ ಬಂದಿದ್ದೇ ಇದಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಇವರಿಬ್ಬರ ಲವ್‌ ಅಫೇರ್‌ ಬಹಳ ಜೋರಾಗಿ ನಡೆಯುತ್ತಿದೆಯಂತೆ..

PREV
117
 ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ  ನಟಿಯ ಮದುವೆ?

ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದರ ನಡುವೆ ಇತ್ತೀಚಿನ ದಿನಗಳ ಅವರ ವಿಚಾರವಾಗಿ ಕೆಲವೊಂದು ವಿವಾದಗಳ ಬಗ್ಗೆಯೂ ವರದಿಯಾಗಿದ್ದವು.

217

ನಟಿ ರಶ್ಮಿಕಾ ಮಂದಣ್ಣ ಹಾಗೂ ಶ್ರೀಲೀಲಾ ಜೊತೆಗೆ ಪೂಜಾ ಹೆಗ್ಡೆ ಕಿತ್ತಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳ ನಡುವೆ, ತೆಲುಗಿ ಚಿತ್ರರಂಗದಲ್ಲಿ ಪೂಜಾ ಹೆಗ್ಡೆಗೆ ದೊಡ್ಡ ಮಟ್ಟದ ಅವಕಾಶಗಳು ಬರುತ್ತಿಲ್ಲ ಎನ್ನುವುದು ಸುದ್ದಿಯಾಗಿದೆ.

317

ಈ ನಡುವೆ ಮತ್ತೊಮ್ಮೆ ಪೂಜಾ ಹೆಗ್ಡೆ ಮದುವೆ ಹಾಗೂ ಲವ್‌ ಅಫೇರ್‌ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದೆ. ಅದರಲ್ಲೂ ಪೂಜಾ ಹೆಸರು ಕೇಳಿಸಿಕೊಂಡಿರುವುದು ಸ್ಟಾರ್‌ ಕ್ರಿಕೆಟಿಗನ ಜೊತೆ.

417

ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆಗೆ ಲವ್‌ ಅಫೇರ್‌ ಇದೆ ಎಂದು ಸುದ್ದಿಯಾಗಿದೆ. ಈ ವಿಚಾರವಾಗಿ ಬಿ ಟೌನ್‌ನಲ್ಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

517

ಬಾಲಿವುಡ್ ನಲ್ಲಿ ಹಲವು ನಾಯಕಿಯರ ಪ್ರೇಮ ಪ್ರಕರಣಗಳು ವೈರಲ್ ಆಗಿವೆ. ಸದ್ಯ ಪೂಜಾ ಹೆಗ್ಡೆ ಕುರಿತಾದ ಸುದ್ದಿ ನಿಜವೋ ಅಥವಾ ಯಾರೋ ಸೃಷ್ಟಿಸಿದ್ದಾರೋ ಗೊತ್ತಿಲ್ಲ, ಆದರೆ ಈ ವದಂತಿಗಳು ಮಾತ್ರ ಹರಿದಾಡುತ್ತಿವೆ.

617

ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಪೂಜಾ ಹೆಗ್ಡೆ ತನ್ನ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದರು. ಇದು ಇದ್ದಕ್ಕಿದ್ದಂತೆ ಆಕೆಯ ಮದುವೆಯ ವಿಷಯವನ್ನು ಹಾಟ್ ಟಾಪಿಕ್ ಮಾಡಿದೆ. ಆದರೆ ಆ ಕ್ರಿಕೆಟಿಗ ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ.

717

ಮುಂಬೈನ ಬಹುತೇಕ ಎಲ್ಲಾ ಎಂಟರ್‌ಟೇನ್‌ಮೆಂಟ್‌ ಪತ್ರಿಕೆಗಳು ಹಾಗೂ ವೆಬ್‌ಸೈಟ್‌ಗಳು ಈ ಸುದ್ದಿ ಪ್ರಕಟಿಸಿದ್ದು, ಪೂಜಾ ಹೆಗ್ಡೆ ಹಾಗೂ ಕ್ರಿಕೆಟಿಗನ ಪ್ರೀತಿ ಗಾಢವಾಗಿದೆ ಎನ್ನಲಾಗಿದೆ.

817

ಹಾಗಂತ ಪೂಜಾ ಹೆಗ್ಡೆ ಡೇಟಿಂಗ್‌ ಸುದ್ದಿ ವೈರಲ್‌ ಆಗಿರುವುದು ಇದು ಮೊದಲೇನಲ್ಲ. ಸಲ್ಮಾನ್‌ ಖಾನ್‌ ಜೊತೆ ಕಿಸೀ ಕಾ ಭಾಯ್‌, ಕಿಸೀ ಕಾ ಜಾನ್‌ ಚಿತ್ರೀಕರಣದ ಸಮಯದಲ್ಲಿಪೂಜಾ ಹೆಗ್ಡೆ ಹಾಗೂ ಸಲ್ಮಾನ್‌ ಖಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.

917

ಅದಕ್ಕೆ ಕಾರಣ ಏನೆಂದರೆ, ಆ ಸಮಯದಲ್ಲಿ ಸಲ್ಮಾನ್‌ ಖಾನ್‌ ಹಾಗೂ ಪೂಜಾ ಹೆಗ್ಡೆ ಬಹುತೇಕ ಚಿತ್ರದ ಹೊರತಾದ ಎಲ್ಲಾ ಸಮಾರಂಭಗಳಲ್ಲೂ ಜೊತೆಯಾಗಿ ಭಾಗವಹಿಸಿದ್ದರು. ಆದರೆ, ಕೊನೆಗೆ ಸ್ವತಃ ಪೂಜಾ ಹೆಗ್ಡೆ ಈ ಗಾಸಿಪ್‌ಅನ್ನು ನಿರಾಕರಿಸಿದ್ದರು.

1017

ಈಗ ನಟಿಯ ಬಗ್ಗೆ ಹೊಸ ಡೇಟಿಂಗ್‌ ವದಂತಿಗಳು ಬಿ ಟೌನ್‌ನಲ್ಲಿ ಹರಿದಾಡುತ್ತಿದೆ. ಮುಂಬೈನ ಕ್ರಿಕೆಟಿಗನೊಂದಿಗೆ ಪೂಜಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಹೊಸ ಸುದ್ದಿ ಹಬ್ಬಿದೆ. ಆದರೆ ಈ ಕ್ರಿಕೆಟಿಗ ಯಾರು ಎನ್ನುವುದನ್ನು ಸುದ್ದಿ ಮಾಡಿರುವ ಬಾಲಿವುಡ್ ತಾಣಗಳು ಹೇಳುತ್ತಿಲ್ಲ.

1117

ಇತ್ತೀಚೆಗೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕ್ರಿಕೆಟಿಗ ಮತ್ತು ಪೂಜಾ ಜೊತೆಯಲ್ಲಿದ್ದರು ಎಂದು ವರದಿ ಮಾಡಿದೆ. ಪೂಜಾ ಕ್ರಿಕೆಟಿಗನನ್ನು ಮದುವೆಯಾಗಬಹುದು ಎಂದು ಸಿನಿಜೋಶ್ ವರದಿ ಮಾಡಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಸ್ವತಃ ಪೂಜಾ ಹೆಗ್ಡೆ ತಿಳಿಸಿದ್ದಾರೆ ಎಂದೂ ಬರೆದುಕೊಂಡಿದೆ.

1217

ಇನ್ನು ಚಿತ್ರರಂಗದಲ್ಲೂ ಪೂಜಾ ಸದ್ಯ ಹೇಳಿಕೊಳ್ಳುವಂಥ ಅವಕಾಶಗಳು ಹೊಂದಿಲ್ಲ.  ತೆಲುಗಿನಲ್ಲಿ ಮಹೇಶ್ ಬಾಬು ಅಭಿನಯದ ಗುಂಡೂರ್ ಕಾರಂ ಚಿತ್ರದಿಂದ ಪೂಜಾ ಹೆಗ್ಡೆ ಹಿಂದೆ ಸರಿದಿರುವುದು ಚಿತ್ರರಂಗದಲ್ಲಿ ಚರ್ಚೆಯಾಗಿತ್ತು.

1317


ಚಿತ್ರದ ಶೂಟಿಂಗ್ ಶೆಡ್ಯೂಲ್ ಮತ್ತು ಸ್ಕ್ರಿಪ್ಟ್‌ನಲ್ಲಿ ಪ್ರಮುಖ ಬದಲಾವಣೆಗಳಿಂದಾಗಿ ಪೂಜಾ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ತೆಲುಗಿನಲ್ಲಿ ಪೂಜಾ ನಟಿಸಿದ ರಾಧೆ ಶ್ಯಾಮ್ ಮತ್ತು ಆಚಾರ್ಯ ಚಿತ್ರಗಳು ಭಾರೀ ಸೋಲು ಕಂಡವು. ವಿಜಯ್ ಜೊತೆ ಅಭಿನಯಿಸಿದ್ದ ತಮಿಳು ಚಿತ್ರ ಬೀಸ್ಟ್ ಕೂಡ ಸೋಲು ಕಂಡಿತ್ತು.

1417

ಅದೇ ಸಮಯದಲ್ಲಿ, ಬಾಲಿವುಡ್‌ನತ್ತ ಗಮನಹರಿಸಲು ಪೂಜಾ ಮಹೇಶ್ ಬಾಬು ಅಭಿನಯದ ಗುಂಟೂರ್ ಕಾರಮ್‌ ಅನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಅದೇನೇ ಇರಲಿ, ಇತ್ತೀಚಿನ ದಿನಗಳಲ್ಲಿ ಪೂಜಾ ಹೆಸರಿನಲ್ಲಿ ನಾಯಕಿಯಾಗಿ ಬೇರೆ ಯಾವುದೇ ಪ್ರಾಜೆಕ್ಟ್ ಗಳು ಅನೌನ್ಸ್ ಆಗಿಲ್ಲ.

1517

ಮಂಗಳೂರು ಮೂಲದ ಪೂಜಾ, ಮುಂಬೈನಲ್ಲಿ ಹುಟ್ಟಿ ಬೆಳೆದವರು. ಮಿಸ್ ಇಂಡಿಯಾ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಇದರಿಂದ ಮಾಡೆಲಿಂಗ್ ಮಾಡುವ ಅವಕಾಶವೂ ಸಿಕ್ಕಿತು.

 

1617

ಸಾಲು ಸಾಲು ಸೋಲುಗಳ ಪಟ್ಟಿಗೆ ಸಲ್ಮಾನ್‌ ಖಾನ್‌ ಅಭಿನಯಯದ ಕಿಸೀ ಕೀ ಭಾಯ್‌, ಕಿಸೀ ಕಾ ಜಾನ್‌ ಕೂಡ ಸೇರಿದ್ದರಿಂದ, ಪೂಜಾ ಹೆಗ್ಡೆ ಅವರನ್ನು ಐರನ್‌ ಲೆಗ್‌ ಎನ್ನುವಂತೆ ಚಿತ್ರರಂಗದಲ್ಲಿ ಬಿಂಬಿಸಲಾಗುತ್ತಿದೆ.

1717

ಇದರ ನಡುವೆ ಪೂಜಾ ಹೆಗ್ಡೆ ಸದ್ಯ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದೇ ಇರಲು, ಅವರು ಮದುವೆಯ ಬಗ್ಗೆ ಗಮನ ನೀಡಿರುವುದೇ ಕಾರಣ ಎನ್ನಲಾಗುತ್ತಿದೆ.

Read more Photos on
click me!

Recommended Stories