ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್‌ಬಸ್ಟರ್ ‘They Call Him OG’ ಚಿತ್ರದ ಸೀಕ್ವೆಲ್ OG 2 ಬಗ್ಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ತಕ್ಷಣ ಶೂಟಿಂಗ್ ಆರಂಭವಾಗಲಿದೆ.
ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾದ 'They Call Him OG' (ಒ.ಜಿ) ಸೀಕ್ವೆಲ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. 'ಸಾಹೋ' ಚಿತ್ರದ ಮೂಲಕ ದೇಶದ ಗಮನ ಸೆಳೆದಿದ್ದ ನಿರ್ದೇಶಕ ಸುಜೀತ್, ಈ ಆ್ಯಕ್ಷನ್-ಗ್ಯಾಂಗ್‌ಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದರು.
24
ಸ್ಟೈಲಿಶ್ ಗ್ಯಾಂಗ್‌ಸ್ಟರ್
ಮುಂಬೈ ಮಾಫಿಯಾ ಹಿನ್ನೆಲೆಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, ಕೇವಲ ಬ್ಲಾಕ್‌ಬಸ್ಟರ್ ಆಗದೆ, ಪವನ್ ಕಲ್ಯಾಣ್ ಅವರನ್ನು ಮತ್ತೆ ಸ್ಟೈಲಿಶ್ ಗ್ಯಾಂಗ್‌ಸ್ಟರ್ ಆಗಿ ತೆರೆಮೇಲೆ ಅಬ್ಬರಿಸುವಂತೆ ಮಾಡಿತ್ತು. ಹೀಗಾಗಿಯೇ, ಈ ಚಿತ್ರದ ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲ ಮನೆಮಾಡಿತ್ತು.
34
ಚಿತ್ರದ ಶೂಟಿಂಗ್ ಶುರು
ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಸಂಸ್ಥೆ ಇತ್ತೀಚೆಗೆ ಒಂದು ಮಹತ್ವದ ಹೇಳಿಕೆ ನೀಡಿದೆ. ಪವನ್ ಕಲ್ಯಾಣ್ ಅವರು ತಮ್ಮ ವಿದೇಶ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ 'OG 2' ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಪ್ರೊಡಕ್ಷನ್ ಹೌಸ್ ಖಚಿತಪಡಿಸಿದೆ. ಮೊದಲ ಭಾಗಕ್ಕೆ ಸಿಕ್ಕ ಅಭೂತಪೂರ್ವ ಸ್ವಾಗತ ಮತ್ತು ಈಗಲೂ ಇರುವ ಜನಪ್ರಿಯತೆಯನ್ನು ಗಮನಿಸಿದರೆ, 'OG 2' ಪವನ್ ಕಲ್ಯಾಣ್ ಅವರ ಕೆರಿಯರ್‌ನ ಮತ್ತೊಂದು ಬೆಸ್ಟ್ ಸಿನಿಮಾ ಆಗಲಿದೆ ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಭಾಗದಲ್ಲಿ ತಮನ್ ಎಸ್. ನೀಡಿದ್ದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಯಾರೂ ಮರೆಯಲು ಸಾಧ್ಯವಿಲ್ಲ. 'OG 2' ಚಿತ್ರಕ್ಕೂ ಅವರೇ ಸಂಗೀತ ನೀಡಲಿದ್ದು, ಅವರ ಎನರ್ಜಿಟಿಕ್ ಬಿಜಿಎಂ ಚಿತ್ರದ ಹೃದಯ ಬಡಿತವಾಗಲಿದೆ. ಪವನ್ ಕಲ್ಯಾಣ್ ಅವರ ಕಮಾಂಡಿಂಗ್ ಸ್ಕ್ರೀನ್ ಪ್ರೆಸೆನ್ಸ್, ಸುಜೀತ್ ಅವರ ವಿಷನರಿ ನಿರ್ದೇಶನ ಮತ್ತು ತಮನ್ ಅವರ ಸ್ಫೋಟಕ ಸಂಗೀತ ಸೇರಿದರೆ, ಪ್ರೇಕ್ಷಕರಿಗೆ ಒಂದು ಪಕ್ಕಾ ಬ್ಲಾಕ್‌ಬಸ್ಟರ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.