Nagabandham ಸಿನಿಮಾದಲ್ಲಿ ಗರುಡ ರಾಮ್ 8 ಗಂಟೆ ಮೇಕಪ್ ಮಾಡಿಕೊಂಡು ನಟಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ರಹಸ್ಯ ಆಧಾರಿತ ಈ ಪ್ಯಾನ್ ಇಂಡಿಯಾ ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.
‘ನಾಗಬಂಧಂ ಸಿನಿಮಾದಲ್ಲಿ ಗರುಡ ರಾಮ್ ಪಾತ್ರದ ಭೀಕರತೆಯೇ ಬೇರೆ. ಇದಕ್ಕಾಗಿ ಅವರು ಬೆಳಗ್ಗಿನಿಂದ ಸಂಜೆಯವರೆಗೆ 8 ಗಂಟೆ ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ರಾತ್ರಿ ನಿರಂತರವಾಗಿ ಅವರ ಭಾಗದ ಶೂಟಿಂಗ್ ನಡೆಯುತ್ತಿತ್ತು. ಊಟ, ನಿದ್ದೆ ಎಲ್ಲಾ ಅವರಿಗೆ ಕನಸಾಗಿತ್ತು.’
25
ಬೈರಾಗಿ ಪಾತ್ರ
ಇದು ಪ್ಯಾನ್ ಇಂಡಿಯಾ ಸಿನಿಮಾ ‘ನಾಗಬಂಧಂ’ನ ನಾಯಕ ನಟ ವಿರಾಟ್ ಕರ್ಣ ಮಾತು. ಚಿತ್ರದಲ್ಲಿ ಗರುಡ ರಾಮ್ ಬೈರಾಗಿ ಪಾತ್ರ ಮಾಡಿದ್ದಾರೆ.
35
ಕಠಿಣ ವ್ರತ
‘ನಾನು ಮಾಡಿದ ಶಿವನ ಪಾತ್ರಕ್ಕಾಗಿ ಸಾಕಷ್ಟು ಬಾಡಿ ಟ್ರಾನ್ಸ್‌ಫರ್ಮೇಶನ್ ಮಾಡಬೇಕಾಯ್ತು. ಶಿವಮಾಲಾ ಧಾರಣೆ ಸೇರಿ ಒಂದಿಷ್ಟು ಕಠಿಣ ವ್ರತಗಳನ್ನೂ ಮಾಡಿದ್ದೆ. ಇಲ್ಲವಾದರೆ ಪಾತ್ರಕ್ಕೆ ಬೇಕಾದ ಎನರ್ಜಿ, ಫೀಲ್ ತರೋದು ಸಾಧ್ಯವಾಗುತ್ತಿರಲಿಲ್ಲ’ ಎಂದೂ ವಿರಾಟ್ ಹೇಳಿದರು.
ಈ ಚಿತ್ರವನ್ನ ಅಭಿಷೇಕ್ ನಾಮಾ ಡೈರೆಕ್ಷನ್ ಮಾಡಿದ್ದಾರೆ. ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ 'ನಾಗಬಂಧಂ' ರಹಸ್ಯ ಮತ್ತು ಹಿಮಾಲಯದ ಹಿನ್ನೆಲೆಯಲ್ಲಿ ಈ ಚಿತ್ರ ಸಾಗುತ್ತದೆ.
55
ಜುಲೈ 3ರಂದು ಬಿಡುಗಡೆ
ನಾಯಕಿ ನಭಾ ನಟೇಶ್ ಸಿನಿಮಾ ಹಾಡಿಗೆ ನೃತ್ಯ ಮಾಡಿದರು. ಗರುಡ ರಾಮ್, ಭಜರಂಗಿ ಪ್ರಸನ್ನ, ವಿನಯ್ ಬಿದ್ದಪ್ಪ ಸುದ್ದಿಗೋಷ್ಠಿಯಲ್ಲಿದ್ದರು. ಈ ಸಿನಿಮಾ ಜುಲೈ 3ರಂದು ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.