ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಆದರೆ, ಈ ಜೋಡಿಯ ಮದುವೆ ಪ್ಲಾನ್‌ನಲ್ಲಿ ಈಗ ದಿಢೀರ್ ಬದಲಾವಣೆಯಾಗಿದೆ ಎಂಬ ಬಿಸಿಬಿಸಿ ಸುದ್ದಿ ಹೊರಬಿದ್ದಿದೆ.
ಕಾಲಿವುಡ್‌ನಲ್ಲಿ ಈಗ ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಮದುವೆಯದ್ದೇ ಹಾಟ್ ಟಾಪಿಕ್. ನವೆಂಬರ್ 11ರಂದು ಈ ಜೋಡಿ ಹಸೆಮಣೆ ಏರಲಿದೆ. ಚೆನ್ನೈನಲ್ಲಿ ನವೆಂಬರ್ 21ರಂದು ಅದ್ದೂರಿ ಆರತಕ್ಷತೆ ನಡೆಯಲಿದೆ. ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಿನಿಮಾ ತಾರೆಯರು ಮಾತ್ರವಲ್ಲದೆ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.
24
ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ
ಅನಿರುದ್ಧ್-ಕಾವ್ಯಾ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಲೇ ಇದೆ. ಮದುವೆಗೆ ಕೇವಲ ಆಪ್ತರು ಹಾಗೂ ಕುಟುಂಬಸ್ಥರು ಮಾತ್ರ ಹಾಜರಾಗಲಿದ್ದಾರೆ. ನವೆಂಬರ್ 21ರಂದು ನಡೆಯುವ ಆರತಕ್ಷತೆಯಲ್ಲಿ ಸಿನಿಮಾ ತಾರೆಯರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಆರತಕ್ಷತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು.
34
ಗೆಟ್-ಟುಗೆದರ್ ಪ್ಲಾನ್
ಹೊಸ ಮಾಹಿತಿಯ ಪ್ರಕಾರ, ಚೆನ್ನೈನಲ್ಲಿ ನಡೆಯುವ ಬೃಹತ್ ಆರತಕ್ಷತೆಯಲ್ಲಿಯೇ ಸಿನಿಮಾ ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಅನಿರುದ್ಧ್ ಕಡೆಯಿಂದಲೂ ಪ್ರತ್ಯೇಕ ಆರತಕ್ಷತೆ ನಡೆಯಲಿದೆ ಎನ್ನಲಾಗಿತ್ತು. ಆದರೆ, ಅದು ಆರತಕ್ಷತೆಯಲ್ಲ. ಅನಿರುದ್ಧ್ ತಮ್ಮ ಆಪ್ತ ಸ್ನೇಹಿತರಿಗಾಗಿ ಮಾತ್ರ ಒಂದು ಗೆಟ್-ಟುಗೆದರ್ ಪ್ಲಾನ್ ಮಾಡಿದ್ದಾರೆ. ನವೆಂಬರ್ 22ರಂದು ಐಟಿಸಿ ಚೋಳ ಹೋಟೆಲ್‌ನಲ್ಲಿ ಈ ಪಾರ್ಟಿ ನಡೆಯಲಿದೆ.
ಕಲಾನಿಧಿ ಮಾರನ್ ತಮ್ಮ ಸನ್ ಗ್ರೂಪ್ ಉದ್ಯೋಗಿಗಳಿಗಾಗಿ ಪ್ರತ್ಯೇಕ ಆರತಕ್ಷತೆ ಆಯೋಜಿಸಲಿದ್ದಾರೆ ಎಂಬ ಮಾತುಗಳಿದ್ದವು. ಆದರೆ, ಇದು ಇನ್ನೂ ಖಚಿತವಾಗಿಲ್ಲ. ಬಹುಶಃ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಕಲಾನಿಧಿ ಮಾರನ್ ಭರ್ಜರಿ ಔತಣಕೂಟ ಏರ್ಪಡಿಸುವ ಸಾಧ್ಯತೆಯಿದೆ. ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಮದುವೆಯಾಗುತ್ತಿರುವುದರಿಂದ, ಕಲಾನಿಧಿ ಮಾರನ್ ಅವರು ರಜನಿಕಾಂತ್‌ಗೆ ಸಂಬಂಧಿಯಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.