ಇವೇ ನೋಡಿ ಕನ್ನಡಿಗರ ನೆಚ್ಚಿನ ಯೂಟ್ಯೂಬ್ ಚಾನೆಲ್‌ಗಳು

First Published | Nov 10, 2024, 4:26 PM IST

ಕನ್ನಡ ವೀಕ್ಷಕರ ಮನ ಮೆಚ್ಚಿದ ಹಾಗೂ ಕನ್ನಡಿಗರದ್ದೇ ಆದ ಕೆಲ ಫೇಮಸ್‌ ಯೂಟ್ಯೂಬರ್‌ಗಳು ಹಾಗೂ ಅವರ ಚಾನೆಲ್‌ಗಳ ವಿವರ ಇಲ್ಲಿದೆ

ರೇಖಾ ಅಡುಗೆ: 
ಯುಟ್ಯೂಬ್‌ನಲ್ಲಿ 2.67 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿರುವ ರೇಖಾ ಅಡುಗೆ ಯೂಟ್ಯೂಬ್ ಚಾನೆಲ್‌ ವಿಶೇಷವಾಗಿ ಆಹಾರದ ರೆಸಿಪಿಗಳನ್ನು  ಮಾಡಿ ತೋರಿಸುವ ಯೂಟ್ಯೂಬ್ ಚಾನೆಲ್ ಆಗಿದ್ದು, ವಿಶೇಷವಾಗಿ ಹೊಸದಾಗಿ ಆಹಾರದ ತಯಾರಿಸುವ ಉತ್ಸಾಹಿಗಳಿಗೆ ಒಳ್ಳೆ ಮಾರ್ಗದರ್ಶನ ನೀಡುತ್ತದೆ.

ಮೀಡಿಯಾ ಮಾಸ್ಟರ್‌: 
ಮೊದಲನೇಯದಾಗಿ ಮೀಡಿಯಾ ಮಾಸ್ಟರ್‌, ಈ ಯೂಟ್ಯೂಬ್‌ ಚಾನೆಲ್‌ 2.71 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದೆ, ಮನೋರಂಜನೆ, ನ್ಯೂಸ್ ಸೇರಿದಂತೆ ವಿಭಿನ್ನವಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹೀಗಾಗಿ ಕರ್ನಾಟಕದ ಅನೇಕ ವೀಕ್ಷಕರಿಗೆ ಇದು ಮಾಹಿತಿಗಳ ಮೂಲವಾಗಿದೆ. 

Tap to resize

ಮಾಯಾ ಲೋಕ: 
ಯೂಟ್ಯೂಬ್‌ನಲ್ಲಿ 2.32 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಮಾಯಾ ಲೋಕ ಈ ಚಾನೆಲ್ ಕರ್ನಾಟಕದ ಜೀವನ ಮತ್ತು ಸಂಸ್ಕೃತಿಯ ವಿಭಿನ್ನ ಅಂಶಗಳನ್ನು ಅನ್ವೇಷಿಸುವ ವ್ಲಾಗ್‌ಗಳನ್ನು ಒಳಗೊಂಡಿದೆ, ಇದು ವೈವಿಧ್ಯಮಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

ಮಸ್ತ್‌ ಮಗಾ: ನ್ಯೂಸ್ ಆಂಕರ್ ಆಗಿ ಕೆಲಸ ಮಾಡಿದ ಅನುಭವ ಇರುವ ಅಮರ್ ಪ್ರಸಾದ್ ಅವರ ಯೂಟ್ಯೂಬ್ ಚಾನೆಲ್ ಇದಾಗಿದ್ದು, ಅಮರ್ ಪ್ರಸಾದ್ ಅವರು ಮಾಧ್ಯಮದಲ್ಲಿನ ತಮ್ಮ ಅನುಭವವನ್ನು ಮನರಂಜನಯೊಂದಿಗೆ ಮಿಳಿತಗೊಳಿಸಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾದ ಮತ್ತೊಂದು ಯೂಟ್ಯೂಬ್ ಚಾನೆಲ್ ಇದಾಗಿದ್ದು, 2.31 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದೆ. 

ಕೆಕೆ ಟಿವಿ: 2.03 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಕೆಕೆ ಟಿವಿ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸಿದ ಕನ್ನಡ ಯೂಟ್ಯೂಬ್ ಚಾನೆಲ್ ಆಗಿದ್ದು, ಗ್ಯಾಜೆಟ್‌ಗಳು ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಅಪ್‌ಡೇಟ್‌ಗಳು, ಸಲಹೆಗಳು ಮತ್ತು ತಂತ್ರಗಳನ್ನು ನೀಡುತ್ತದೆ. 

ಭಟ್ & ಭಟ್‌:  ಕನ್ನಡದ ಮತ್ತೊಬ್ಬ ಸಸ್ಯಹಾರಿ ಪಾಕ ಪ್ರವೀಣ ಭಟ್ & ಭಟ್ ಖ್ಯಾತಿಯ ಸುದರ್ಶನ್ ಭಟ್‌ ಅವರ ಯೂಟ್ಯೂಬ್ ಚಾನೆಲ್ ಕೂಡ ಕನ್ನಡಿಗರ ನೆಚ್ಚಿನ ಚಾನೆಲ್‌ಗಳಲ್ಲಿ ಒಂದು. 1.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಇವರ ಯೂಟ್ಯೂಬ್ ಚಾನೆಲ್‌ನಲ್ಲಿ ತರಹೇವಾರಿ ಅಡುಗೆ ರೆಸಿಪಿಗಳನ್ನು ನೋಡಬಹುದು.

ಡಾಕ್ಟರ್‌ ಬ್ರೋ: 2.64 ಫಾಲೋವರ್ಸ್‌ಗಳನ್ನು ಹೊಂದಿರುವ ಡಾಕ್ಟರ್ ಬ್ರೋ ಯೂಟ್ಯೂಬ್ ಚಾನೆಲ್ ಮೂಲಕ ಕನ್ನಡಿಗ ಗಗನ ಶ್ರೀನಿವಾಸ್ ಅವರು ಇಡೀ ಪ್ರಪಂಚವನ್ನು ಕನ್ನಡಿಗರಿಗೆ ತೋರಿಸುತ್ತಿದ್ದಾರೆ. ಪ್ರಪಂಚದ ಯಾವುದು ಮೂಲೆಯ ಬಗ್ಗೆ ವಿವರವಾಗಿ ಕನ್ನಡದಲ್ಲಿ ಇವರು ಮಾಹಿತಿ ನೀಡುವುದರಿಂದ ಕನ್ನಡಿಗರ ಅತ್ಯಂತ ಪ್ರೀತಿಯ ಯೂಟ್ಯೂಬರ್ ಎನಿಸಿದ್ದಾರೆ ಡಾಕ್ಟರ್ ಬ್ರೋ, 

Kannada Famous Youtube channel

ಕನ್ನಡ ಟೆಕ್:ಈ ಚಾನೆಲ್‌ ತಂತ್ರಜ್ಞಾನದ ವಿಮರ್ಶೇ, ಮಾಹಿತಿ ಮೇಲೆ ಕೇಂದ್ರೀಕರಿಸಲ್ಪಟ್ಟಿದ್ದು, ತಂತ್ರಜ್ಞಾನದ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ವೀಕ್ಷಕರನ್ನು ಸೆಳೆಯುತ್ತದೆ. 1.86 ಮಿಲಿಯನ್ ಫಾಲೋವರ್ಸ್‌ಗಳನ್ನು ಇದು ಹೊಂದಿದೆ.

Latest Videos

click me!