`ಗೂಢಚಾರಿ 116` ಸಿನಿಮಾ ಸೆಟ್‌ಗೆ ಜಯಲಲಿತಾ ಜೊತೆಗೆ ಅವರ ತಾಯಿ ಕೂಡ ಬಂದಿದ್ದರು. ಹೀರೋ ಯಾರು ಎಂದು ಕೇಳಿದಾಗ, ಆಗ ತಾನೇ ಏನೋ ಕೆಲಸ ಮಾಡಿ ಬಂದಿದ್ದ ಶೋಭನ್‌ಬಾಬು ಅವರನ್ನು ತೋರಿಸಿದರು ನಿರ್ಮಾಪಕ ದೂಂಡಿ. ಆ ಸಮಯದಲ್ಲಿ ಶೋಭನ್‌ಬಾಬು ಎಣ್ಣೆ ಮುಖದಿಂದ ಇದ್ದರಂತೆ, ಬಿಸಿಲಿಗೆ ಸ್ವಲ್ಪ ಬಣ್ಣ ಕಡಿಮೆ ಕಾಣುತ್ತಿದ್ದರಂತೆ. ಹೀಗೆ ಶೋಭನ್‌ಬಾಬುವನ್ನು ನೋಡಿದ ಜಯಲಲಿತಾ ತಾಯಿ ನನ್ನ ಮಗಳ ಬಣ್ಣ ಏನು? ಅವರ ಬಣ್ಣ ಏನು? ಅವರ ಜೊತೆ ನನ್ನ ಮಗಳು ನಾಯಕಿ ಆಗುವುದೇನು? ಎಂದು ಕೆಟ್ಟದಾಗಿ ಮಾತನಾಡಿದರಂತೆ.
ಅಷ್ಟೇ ಅಲ್ಲ ಹೀರೋ ಬದಲಿಸಿದರೆ ಮಾತ್ರ ನಮ್ಮ ಹುಡುಗಿ ನಟಿಸುತ್ತಾಳೆ, ಇಲ್ಲದಿದ್ದರೆ ಬೇರೆ ನಾಯಕಿ ನೋಡಿ ಎಂದು ತೀಕ್ಷ್ಣವಾಗಿ ಹೇಳಿದರಂತೆ. ಅದು ಕೂಡ ಶೋಭನ್‌ಬಾಬು ಮುಂದೆಯೇ. ಹೀಗಾಗಿ ಹೀರೋ ಆಗುತ್ತಿದ್ದೇನೆ ಎಂಬ ಬಹಳ ಆಸೆಗಳಿಂದ ಕಾದಿದ್ದ ಶೋಭನ್‌ಬಾಬುಗೆ ಒಮ್ಮೆಲೆ ನೀರಲ್ಲಿ ಮುಳುಗಿದಂತ ಅನುಭವವಾಗಿ ತೀವ್ರ ನಿರಾಸೆ ಅನುಭವಿಸಿದರಂತೆ