6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ

Published : Apr 19, 2026, 02:29 PM IST

2006ರಲ್ಲಿ ಬಿಡುಗಡೆಯಾದ ಚಿತ್ರದ 6 ನಿಮಿಷದ ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ, ಚಿತ್ರಕ್ಕೆ ಹೊಂದಿಕೆಯಾಗದ ಕಾರಣ ಈ ದುಬಾರಿ ದೃಶ್ಯವನ್ನು ಸಿನಿಮಾದಿಂದ ಅಂತಿಮವಾಗಿ ತೆಗೆದುಹಾಕಲಾಯಿತು, ಇದು ಹಾಲಿವುಡ್‌ನ ಅತ್ಯಂತ ದುಬಾರಿ ಡಿಲೀಟೆಡ್ ದೃಶ್ಯವೆನಿಸಿದೆ.

PREV
15
6 ನಿಮಿಷ ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು

ನಿರ್ದೇಶಕರು ಒಂದೊಂದು ದೃಶ್ಯವೂ ತೆರೆ ಮೇಲೆ ಅದ್ಭುತವಾಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣದಲ್ಲಿ ಎಲ್ಲವೂ ಅಚ್ಚುಕಟ್ಟಾಗಿರಬೇಕೆಂದು ಬಯಸುತ್ತಾರೆ. ನಿರ್ದೇಶಕರ ಕಲ್ಪನೆಯಂತೆ ಸಿನಿಮಾ ಮಾಡಲು ನಿರ್ಮಾಪಕರು ಸಹ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಒಂದು ಸಿನಿಮಾದಲ್ಲಿ ಕೇವಲ 6 ನಿಮಿಷ ದೃಶ್ಯಕ್ಕಾಗಿ 90 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದ್ರೆ ಅಂತಿಮವಾಗಿ ಈ ದೃಶ್ಯವನ್ನು ಸಿನಿಮಾದಿಂದಲೇ ಡಿಲೀಟ್ ಮಾಡಲಾಯ್ತು.

25
2006ರಂದು ಬಿಡುಗಡೆಯಾದ ಸಿನಿಮಾ

28ನೇ ಜೂನ್ 2006ರಂದು ಬಿಡುಗಡೆಯಾದ ಸಿನಿಮಾ ನಿರೀಕ್ಷೆಯಷ್ಟು ಯಶಸ್ಸು ಗಳಿಸಲಿಲ್ಲ. 270 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 390 ಕೋಟಿ ಕಲೆಕ್ಷನ್ ಮಾಡಿತ್ತು. ಬಿಡುಗಡೆಗೂ ಮುನ್ನ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 1000 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದ್ರೆ ಜನರು ಸಿನಿಮಾ ಒಪ್ಪಿಕೊಳ್ಳದ ಹಿನ್ನೆಲೆ ಬಜೆಟ್‌ಗಿಂತ 120 ಕೋಟಿ ಅಧಿಕ ಕಲೆಕ್ಷನ್ ಮಾಡುವಲ್ಲಿ ಸಕ್ಸಸ್ ಆಯ್ತು. ಯಾವುದು ಈ ಸಿನಿಮಾ?

35
ಸೂಪರ್‌ಮ್ಯಾನ್ ರಿಟರ್ನ್ಸ್‌

2006ರಲ್ಲಿ ಬಿಡುಗಡೆಯಾದ ಸೂಪರ್‌ಮ್ಯಾನ್ ರಿಟರ್ನ್ಸ್‌ ಚಿತ್ರದಲ್ಲಿ ಬ್ರಾಂಡನ್ ರೌತ್ ನಟಿಸಿದ್ದರು. ಭಾರಿ ಪ್ರಚಾರ ಮತ್ತು ಹೆಚ್ಚಿನ ನಿರೀಕ್ಷೆಗಳ ನಡುವೆ ಬಿಡುಗಡೆಯಾದ ಸೂಪರ್‌ಮ್ಯಾನ್ ರಿಟರ್ನ್ಸ್‌, ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಸೂಪರ್‌ಹೀರೋ ಆಗಿ ಬ್ರಾಂಡನ್ ರೌತ್, ಲೋಯಿಸ್ ಲೇನ್ ಆಗಿ ಕೇಟ್ ಬೋಸ್ವರ್ತ್ ಮತ್ತು ಖಳನಾಯಕ ಲೆಕ್ಸ್ ಲೂಥರ್ ಆಗಿ ಕೆವಿನ್ ಸ್ಪೇಸಿ ನಟಿಸಿದ್ದರು.

45
ಬಹುದೊಡ್ಡ ಸೆಟ್

ಚಿತ್ರದ ಆರು ನಿಮಿಷ ದೃಶ್ಯಕ್ಕಾಗಿ ಸುಮಾರು 90 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಈ ದೃಶ್ಯಕ್ಕಾಗಿ ಬಹುದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಈ ಸೀನ್‌ನಲ್ಲಿ ಸೂಪರ್‌ಮ್ಯಾನ್ ತನ್ನ ತವರು ಗ್ರಹವಾದ ಕ್ರಿಪ್ಟಾನ್‌ನ ಅವಶೇಷಗಳನ್ನು ಹುಡುಕಲು ಹೋಗುತ್ತಾನೆ. ಈ ದೃಶ್ಯಕ್ಕಾಗಿ ಬಹುದೊಡ್ಡ ಸೆಟ್ ಹಾಕಲಾಗಿತ್ತು ಮತ್ತು ಚಿತ್ರೀಕರಣ ಸಹ ನಡೆಸಲಾಗಿತ್ತು.

ಇದನ್ನೂ ಓದಿ: 13 ನಿಮಿಷ, 30 ಲಕ್ಷ ವ್ಯೂವ್; ಮಲಯಾಳಂನ 3 ಪಾತ್ರಗಳ ಥ್ರಿಲ್ಲರ್ ಶಾರ್ಟ್ ಫಿಲಂ

55
ದುಬಾರಿ ಡಿಲೀಟ್ ದೃಶ್ಯ

ಅಂತಿಮವಾಗಿ ಸಿನಿಮಾ ಸಿದ್ಧಗೊಂಡಾಗ ಈ ಆರು ನಿಮಿಷ ದೃಶ್ಯ ಚಿತ್ರಕ್ಕೂ ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ಸಿನಿಮಾದಿಂದಲೇ ಈ ಸೀನ್ ಡಿಲೀಟ್ ಮಾಡಲಾಯ್ತು. ಮುಂದೆ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಸೂಪರ್‌ಮ್ಯಾನ್ ರಿಟರ್ನ್ಸ್‌ ಬಿಡುಗಡೆಯಾದಾಗ ಡಿಲೀಟ್ ಮಾಡಲಾಗಿದ್ದ ದೃಶ್ಯವನ್ನು ಸೇರಿಸಲಾಯ್ತು. ಇದು ಹಾಲಿವುಡ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಡಿಲೀಟ್ ದೃಶ್ಯ ಎಂದೆನಿಸಿಕೊಂಡಿದೆ.

ಇದನ್ನೂ ಓದಿ: ಕಾರಣವಿಲ್ಲದೇ ಸಾಯುವ ಯೋಚನೆ ಬರ್ತಿದೆಯಾ? ಹಾಗಿದ್ರೆ ಈ ಶಾರ್ಟ್ ಮೂವಿ ನೋಡಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories