ಬಟ್ಟೆ ಹಾಕಿದ್ರೂ, ಹಾಕದಿದ್ರೂ ಟ್ರೋಲ್: ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ದರ್ಶನ ಪಡೆದ ಉರ್ಫಿ

First Published | Sep 19, 2023, 3:24 PM IST

ಉರ್ಫಿ ಜಾವೇದ್‌, ತನ್ನದೇ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಚ್‌ಚಲ್‌ ಎಬ್ಬಿಸುತ್ತಿರುವ ಚೆಲುವೆ. ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ.

ಉರ್ಫಿ ಜಾವೇದ್‌, ತನ್ನದೇ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಚ್‌ಚಲ್‌ ಎಬ್ಬಿಸುತ್ತಿರುವ ಚೆಲುವೆ. ಸದಾ ಅರೆಬರೆ ಬಟ್ಟೆ ತೊಟ್ಟು ಪಡ್ಡೆ ಸದಾ ಟ್ರೋಲ್ ಆಗುವ ಉರ್ಫಿ ಇಂದು ಮೈ ತುಂಬಾ ಬಟ್ಟೆ ಧರಿಸಿ ಸಿದ್ದಿವಿನಾಯಕ ಗಣೇಶನ ದರ್ಶನ ಪಡೆದಿದ್ದಾಳೆ.

ಪ್ರತಿಬಾರಿಯೂ ಅರೆಬರೆ ಬಟ್ಟೆಯ ಕಾರಣಕ್ಕೆ ಟ್ರೋಲ್ ಆಗುವ ಉರ್ಫಿ ಈ ಬಾರಿ ಬಟ್ಟೆ ಧರಿಸಿರುವ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಮೈ ತುಂಬಾ ಬಟ್ಟೆ ತೊಟ್ಟ ಉರ್ಫಿಯ ನೋಡಿದ ಜನ ನಿಜಕ್ಕೂ ತಾವು ಶಾಕ್ ಆಗಿದ್ದಾಗಿ ಕಾಮೆಂಟ್ ಮಾಡಿದ್ದಾರೆ. 

Tap to resize


ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬ ಜೋರಾಗಿದ್ದು, ಉರ್ಫಿ ಜಾವೇದ್‌ ಹಾಗೂ  ನಟ ಪ್ರತೀಕ್ ಸೆಜ್ಪಾಲ್ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದರು. ಅಲ್ಲದೇ ದೇಗುಲದ ಹೊರಭಾಗದಲ್ಲಿ ಪಪಾರಾಜಿ ಗಳಿಗೆ ಪೋಸ್‌ ನೀಡಿದರು. 

ಉರ್ಫಿ ಜಾವೇದ್‌ ಹಾಗೂ  ನಟ ಪ್ರತೀಕ್ ಸೆಜ್ಪಾಲ್ ಇವರಿಬ್ಬರು ಹಿಂದಿ ಬಿಗ್‌ಬಾಸ್‌ ಒಟಿಟಿ ಸೀಸನ್‌ ಒಂದರಿಂದಲೂ ಪರಸ್ಪರ ಪರಿಚಿತರಾಗಿದ್ದು, ಇಬ್ಬರೂ ಆಗಿನಿಂದಲೂ ಸ್ನೇಹಿತರಾಗಿದ್ದಾರೆ. 

ಈ ವೇಳೆ ಉರ್ಫಿಯ ಬಟ್ಟೆ ಮಾತ್ರವಲ್ಲದೇ ಆಕೆ ಧರಿಸಿದ ಗೋಲ್ಡನ್‌ ಪ್ರೇಮ್‌ನ ವಿಭಿನ್ನ ಶೈಲಿಯ ಕನ್ನಡಕ ಎಲ್ಲರ ಗಮನ ಸೆಳೆಯಿತು. ಕೆಂಪು ಬಣ್ಣದ ಸಂಪ್ರದಾಯಿಕ ಧಿರಿಸು ಧರಿಸಿದ್ದ ಉರ್ಫಿ ಹೆಗಲಿನ ಸುತ್ತ ಶಾಲು ಧರಿಸಿದ್ದರು, ಇದರ ಜೊತೆಗೆ ಅವರು ಹಾಕಿದ್ದ ಈ ಕನ್ನಡಕ ಎಲ್ಲರನ್ನು ಸೆಳೆದಿದ್ದು, ಮುಖಕ್ಕೆ ಹಾಕಿದ ಆಭರಣದಂತೆ ಕಾಣಿಸುತ್ತಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಉರ್ಫಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಉರ್ಫಿ ವಿಚಿತ್ರ ಹಾಗೂ ವಿಲಕ್ಷಣ ಧಿರಿಸು ಧರಿಸುವುದಕ್ಕೆ ಖ್ಯಾತಿ ಗಳಿಸಿದ್ದು, ಇವರು ತಮ್ಮ ಧಿರಿಸಿಗಾಗಿ ಬಳಸದ ವಸ್ತುಗಳಿಲ್ಲ.

ಉರ್ಫಿ ಮೈ ತುಂಬಾ ಬಟ್ಟೆ ಧರಿಸಿರುವುದಕ್ಕೆ ಅನೇಕರು ಶ್ಲಾಘನೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಉರ್ಫಿ ಜಾವೇದ್ ಫ್ಯಾಶನ್ ಊಹೆಗೂ ನಿಲುಕದ್ದು. ಪ್ರತಿ  ಭಾರಿ ಹೊಸ ಹೊಸ ಫ್ಯಾಶನ್ ಮೂಲಕ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಅವರು ಜೀವಂತ ಮೀನುಗಳಿರುವ ಅಕ್ವೇರಿಯಂ ಬ್ರಾ ಧರಿಸಿ ಸುದ್ದಿಯಾಗಿದ್ದರು. 

ಪ್ರತಿ ಭಾರಿ  ಹೊಸ ಹೊಸ ಫ್ಯಾಶನ್ ಮೂಲಕ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸುತ್ತಾರೆ. ಉರ್ಫಿಯ ಉಡುಗೆ ತೊಡಗೆ ಸಖತ್  ಹಾಟ್ ಮಾತ್ರವಲ್ಲ, ಅದರಾಚೆಗಿನ ಲೋಕವನ್ನು ತೆರೆದಿಡುತ್ತದೆ.

ಉರ್ಫಿ ಜಾವೇದ್ ಈ ರೀತಿಯ ಭಿನ್ನ ಫ್ಯಾಶನ್ ಇದೇ ಮೊದಲಲ್ಲ. ಇತ್ತೀಚೆಗೆ ಟಾಯ್ಸ್ ಕಾರುಗಳ ಮೂಲಕ ಬ್ರಾ ಮಾಡಿಕೊಂಡು ಫೋಸ್ ನೀಡಿದ್ದರು. ಉರ್ಫಿಯ ಒಂದೊಂದು ಅವತರವೂ ಭಿನ್ನ.  ಒಂದೊಂದು ಫ್ಯಾಶನ್ ಕೂಡ ಹಾಟ್ ಆಗಿರುತ್ತದೆ. 

Latest Videos

click me!