ನವೆಂಬರ್‌ನಲ್ಲಿ ಮದುವೆಯಾಗಲಿದ್ದ Sidhu Moose Wala ಅವರ ಫಿಯಾನ್ಸಿ ಯಾರು ಗೊತ್ತಾ?

Published : May 31, 2022, 05:08 PM IST

28 ವರ್ಷದ ಪಂಜಾಬಿ ಸಂಗೀತಗಾರ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸ್ ವಾಲಾ (Sidhu Moose Wala) ಅವರನ್ನು ಮೇ 29 ರ ಭಾನುವಾರದಂದು ಗುಂಡಿಕ್ಕಿ ಕೊಲ್ಲಲಾಗಿದೆ.  ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ರಾಜಕಾರಣಿಯಾದ ಸಿಧು ಮೂಸ್ ವಾಲಾ ಹತ್ಯೆ ದೇಶಕ್ಕೆ ಆಘಾತವನ್ನುಂಟುಮಾಡಿದೆ. ಸಿಧು ಮೂಸ್ ವಾಲಾ ಅವರು ನವೆಂಬರ್‌ನಲ್ಲಿ ಮದುವೆಯಾಗಲು ಯೋಜಿಸುತ್ತಿದ್ದರು.  

PREV
16
 ನವೆಂಬರ್‌ನಲ್ಲಿ ಮದುವೆಯಾಗಲಿದ್ದ  Sidhu Moose Wala ಅವರ  ಫಿಯಾನ್ಸಿ ಯಾರು ಗೊತ್ತಾ?

ಮೇ 29 ರ ಭಾನುವಾರ, ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದಾಳಿಕೋರರು ಪಂಜಾಬಿ ಸಂಗೀತಗಾರ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಕೊಂದರು.  

26

ಬೆಳಿಗ್ಗೆ 8.30 ಕ್ಕೆ ಸಿಧು ಮೂಸ್ವಾಲಾ ಅವರ   ಅಂತಿಮ ದರ್ಶನ ಪ್ರಾರಂಭವಾಯಿತು. ಸಿಧು ಮೂಸ್ ವಾಲಾ ಅವರ ಕುಟುಂಬವು ಮಾನ್ಸಾ ಸಿವಿಲ್ ಆಸ್ಪತ್ರೆಗೆ ಆಗಮಿಸುತ್ತದೆ. ಅಲ್ಲಿ ಅವರ ಶವವನ್ನು ಇಡಲಗಿದೆ .

36

ಜೂನ್ 17 ರಂದು 29 ವರ್ಷಕ್ಕೆ ಕಾಲಿಡುತ್ತಿದ್ದ  ಸಿಧು ಅವರು ಏಪ್ರಿಲ್‌ನಲ್ಲಿ ಮದುವೆಯಾಗಲು ಯೋಜಿಸಿದ್ದರು. ಆದರೆ ಮಾರ್ಚ್‌ನಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಸೋತ ನಂತರ, ವಿವಾಹವನ್ನು ನವೆಂಬರ್‌ಗೆ ಮುಂದೂಡಲಾಯಿತು.
 

46

ಇಂಡಿಯಾ ಟುಡೇ ವರದಿಯ ಪ್ರಕಾರ, ಗಾಯಕ ಸಾಂಗರ್ಡ್ಡಿ ಗ್ರಾಮದ ಅಮಂಡೀಪ್ ಕೌರ್ ಅವರನ್ನು ಮದುವೆಯಾಗಬೇಕಿತ್ತು ಎಂದು ಮೂಸ್ ವಾಲಾ ಅವರ ಕುಟುಂಬ ತಿಳಿಸಿದೆ. ಅಮಂದೀಪ್ ಕೌರ್ ಕೆನಡಾದ ಪಿಆರ್ಮ ತ್ತು ಈ ಜೋಡಿ  ಎರಡು ವರ್ಷಗಳ ಹಿಂದೆ ಭೇಟಿಯಾದರು.
 

56

ಅಸೆಂಬ್ಲಿ ಚುನಾವಣೆಯ ನಂತರ ಗಾಯಕ ಮದುವೆಯಾಗುವುದಾಗಿ ಮೂಸ್ ವಾಲಾ ಅವರ ತಾಯಿ ಚರಣ್ ಕೌರ್ ಕೆಲವು ತಿಂಗಳ ಹಿಂದೆ ಘೋಷಿಸಿದರು ಮತ್ತು ವಿವಾಹ ಸಿದ್ಧತೆಗಳು ಪ್ರಾರಂಭವಾಗಿದ್ದವು.  

66

'ಇನ್ನೂ ಸ್ವಲ್ಪ ಸಮಯ  ಮತ್ತು ಅವನು ಇನ್ನು ಮುಂದೆ ಬ್ಯಾಚುಲರ್‌ ಆಗಿ ಇರುವುದಿಲ್ಲ. ನಾವು ಅವರ ಮದುವೆಗೆ ತಯಾರಾಗುತ್ತಿದ್ದೇವೆ, ಅದು ಈ ವರ್ಷದ ಚುನಾವಣೆಯ ನಂತರ ನಡೆಯಲಿದೆ' ಎಂದು ಗಾಯಕನ ತಾಯಿ ಹೇಳಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories