ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಯಾರೆಲ್ಲಾ ಕೈ ಬಿಟ್ರು? ಏನೆಲ್ಲಾ ಆಯ್ತು ಲೈಫಲ್ಲಿ ಗೊತ್ತಾ?

Published : Jul 28, 2026, 04:52 PM IST

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು, ಮಧ್ಯಮ ವರ್ಗದ ಪೋಷಕರ ಎದುರು ‘ನಾನು ನಟಿ ಆಗ್ತೀನಿ’ ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಮುಂದೆ..?

PREV
17

'ಲೇನಿನ್' ಸುಂದರಿ ಭಾಗ್ಯಶ್ರೀ ಬೋರ್ಸೆ ಬದುಕಿನ ಈ 'ಟ್ವಿಸ್ಟ್' ಯಾರಿಗೂ ಗೊತ್ತಿಲ್ಲ!

ಬಣ್ಣದ ಲೋಕದ ಮಿಂಚಿನ ಹಿಂದೆ ಅಡಗಿದೆ ಕಣ್ಣೀರಿನ ಕಥೆ! ಸಿನಿಮಾ ರಂಗ ಅಂದಮೇಲೆ ಅಲ್ಲಿ ಗ್ಲಾಮರ್ ಇರುತ್ತೆ, ಹಣ ಇರುತ್ತೆ, ಪ್ರಸಿದ್ಧಿ ಇರುತ್ತೆ. ಆದರೆ ಆ ಸ್ಥಾನಕ್ಕೆ ಬಂದು ನಿಲ್ಲುವವರೆಗೆ ಒಬ್ಬ ನಟಿ ಪಡುವ ಕಷ್ಟ ಯಾರಿಗೂ ಕಾಣಿಸುವುದಿಲ್ಲ. ಸದ್ಯ ತೆಲುಗಿನ 'ಲೇನಿನ್' ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಮರಾಠಿ ಬೆಡಗಿ ಭಾಗ್ಯಶ್ರೀ ಬೋರ್ಸೆ (Bhagyashri Borse) ಲೈಫ್ ಸ್ಟೋರಿ ಕೇಳಿದರೆ ನೀವು ಅಚ್ಚರಿಪಡುತ್ತೀರಿ. ಯಶಸ್ಸಿನ ಉತ್ತುಂಗದಲ್ಲಿರುವ ಈ ಸುಂದರಿಯನ್ನು ಅವಳ ಸ್ವಂತ ತಾಯಿಯೇ ಆರು ತಿಂಗಳು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದರಂತೆ! ಯಾಕೆ ಗೊತ್ತಾ?

27

ಮನೆ ಮಂದಿಯೆಲ್ಲಾ ವಿರೋಧಿಸಿದ ಆ ಒಂದು ನಿರ್ಧಾರ!

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು ಮಧ್ಯಮ ವರ್ಗದ ಪೋಷಕರಿಗೆ ಒಂದು ರೀತಿಯ ಭಯ. "ನಾನು ನಟಿ ಆಗ್ತೀನಿ" ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು.

37

ಮೊದಲು ತಾಯಿಗೆ ಫೋನ್ ಮಾಡಿದರೆ, "ಅದೆಲ್ಲಾ ನಮಗೆ ಬೇಡ" ಎಂದು ಖಡಕ್ ಆಗಿ ಹೇಳಿಬಿಟ್ಟರು. ಸರಿ, ಅಪ್ಪನನ್ನಾದರೂ ಒಪ್ಪಿಸೋಣ ಎಂದು ತಂದೆಗೆ ಕರೆ ಮಾಡಿದರೆ, "ನಿಮ್ಮ ಅಮ್ಮ ಬೇಡ ಅಂದ್ಮೇಲೆ ನಾನೂ ಏನೂ ಮಾಡೋಕೆ ಆಗಲ್ಲ" ಎಂದು ತಂದೆ ಕೂಡ ಕೈ ತೊಳೆದುಕೊಂಡರು. ಕೊನೆಗೆ ಅಕ್ಕನಾದರೂ ಸಾಥ್ ಕೊಡುತ್ತಾಳೆ ಎಂದು ನಂಬಿದ್ದ ಭಾಗ್ಯಶ್ರೀಗೆ ಅಲ್ಲಿಯೂ ನಿರಾಸೆಯೇ ಕಾದಿತ್ತು!

47

6 ತಿಂಗಳ ಕಾಲ ಮೌನ ಮತ್ತು ಬ್ಲಾಕ್ ಲಿಸ್ಟ್!

ಯಾರು ಏನೇ ಅಂದರೂ ಪರವಾಗಿಲ್ಲ, ನನ್ನ ಕನಸು ನನಸಾಗಬೇಕು ಎಂದು ಭಾಗ್ಯಶ್ರೀ ಹಠಕ್ಕೆ ಬಿದ್ದು ಆಡಿಷನ್ ನೀಡಲು ಶುರು ಮಾಡಿದರು. ಇದರಿಂದ ತೀವ್ರ ಕೋಪಗೊಂಡ ಅವರ ತಾಯಿ, ಬರೋಬ್ಬರಿ ಆರು ತಿಂಗಳು ಮಗಳ ಮುಖವನ್ನೂ ನೋಡಲಿಲ್ಲ, ಮಾತು ಆಡಲಿಲ್ಲ. ಅಷ್ಟೇ ಅಲ್ಲ, ಮಗಳು ಮೆಸೇಜ್ ಮಾಡಬಾರದು ಎಂದು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿಬಿಟ್ಟಿದ್ದರು! "ಇಂದು ನಾನು ಈ ವಿಷಯವನ್ನು ನಗುತ್ತಾ ಹೇಳುತ್ತಿರಬಹುದು, ಆದರೆ ಅಂದು ಅಮ್ಮ ನನ್ನನ್ನು ಬ್ಲಾಕ್ ಮಾಡಿದಾಗ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ" ಎಂದು ಭಾಗ್ಯಶ್ರೀ ಇತ್ತೀಚೆಗೆ ಕಾಲೇಜು ಸಂವಾದವೊಂದರಲ್ಲಿ ಕಣ್ಣಾಲಿಗಳು ಒದ್ದೆಯಾಗುವಂತೆ ಹೇಳಿಕೊಂಡಿದ್ದಾರೆ.

57

200 ರೂಪಾಯಿಯ ಚಪ್ಪಲಿ ಕಲಿಸಿದ ಪಾಠ!

ಭಾಗ್ಯಶ್ರೀ ಅವರ ಈ ಛಲದ ಹಿಂದೆ ಒಂದು ಬಲವಾದ ಕಾರಣವಿದೆ. ಚಿಕ್ಕವಳಿದ್ದಾಗ ಒಮ್ಮೆ ಅಪ್ಪನ ಜೊತೆ ಮಾರ್ಕೆಟ್‌ನಲ್ಲಿ ಹೋಗುತ್ತಿದ್ದಾಗ 200 ರೂಪಾಯಿಯ ಒಂದು ಸಾದಾ ಚಪ್ಪಲಿ ಇಷ್ಟವಾಗಿತ್ತು. ಆದರೆ ಅಪ್ಪ ಅದನ್ನು ಕೊಡಿಸಲಿಲ್ಲ. "ಬರೀ 200 ರೂಪಾಯಿಯ ಚಪ್ಪಲಿ ಕೂಡ ನನಗೆ ಸಿಗುತ್ತಿಲ್ಲವಲ್ಲ" ಎಂದು ಆವತ್ತು ಆ ಹುಡುಗಿ ಅನುಭವಿಸಿದ ಸಂಕಟ, ಇಂದು ಅವಳನ್ನು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸ್ಟಾರ್ ನಟಿಯನ್ನಾಗಿ ಮಾಡಿದೆ. "ಜೀವನದಲ್ಲಿ ಇನ್ನೊಬ್ಬರ ಮುಂದೆ ಹಣಕ್ಕಾಗಿ ಕೈ ಚಾಚಬಾರದು ಎಂಬುದು ನನಗೆ ಅಂದೇ ಅರ್ಥವಾಯಿತು" ಎನ್ನುತ್ತಾರೆ ಭಾಗ್ಯಶ್ರೀ.

67

ಹುಡುಗಿಯರೇ ಕೇಳಿ... ನಿಮ್ಮ ಹತ್ತಿರ ಒಂದು ಬ್ಯಾಂಕ್ ಅಕೌಂಟ್ ಇರಲಿ!

ಇವತ್ತು ಸ್ಟಾರ್ ಆಗಿ ಮೆರೆಯುತ್ತಿರುವ ಭಾಗ್ಯಶ್ರೀ ಯುವತಿಯರಿಗೆ ಒಂದು ಕಿವಿಮಾತು ಹೇಳಿದ್ದಾರೆ. "ಪ್ರತಿ ಹುಡುಗಿಗೂ ತನ್ನದೇ ಆದ ಪ್ರತ್ಯೇಕ ಬ್ಯಾಂಕ್ ಅಕೌಂಟ್ ಮತ್ತು ಒಂದು ಸ್ವಂತ ಮನೆ ಇರಬೇಕು. ನೀವು ನಿಮ್ಮ ಸ್ವಂತ ಹಣದಲ್ಲಿ ಒಂದು ಸಣ್ಣ ಚಪ್ಪಲಿ ಖರೀದಿಸಿದರೂ ಅದರಲ್ಲಿರುವ ಖುಷಿಯೇ ಬೇರೆ.

77

ಜೀವನದಲ್ಲಿ ಯಾವುದಕ್ಕೇ ಆಗಲಿ ಪಶ್ಚಾತ್ತಾಪ ಪಡಬೇಡಿ, ನಿಮ್ಮ ಕನಸಿನ ಹಿಂದೆ ಓಡಿ" ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಸದ್ಯ ಭಾಗ್ಯಶ್ರೀ ಅವರ ಈ ಜರ್ನಿ ಕೇಳಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಮ್ಮ ಅಂದು ಬ್ಲಾಕ್ ಮಾಡಿರಬಹುದು, ಆದರೆ ಇಂದು ಇಡೀ ಜಗತ್ತೇ ಇವಳನ್ನು 'ಅನ್ ಬ್ಲಾಕ್' ಮಾಡಿ ಪ್ರೀತಿಯಿಂದ ಆರಾಧಿಸುತ್ತಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories