ಮುಂಬೈ(ಏ. 13) ನಟಿ., ನಿರೂಪಕಿ ಮಂದಿರಾ ಬೇಡಿ ಮತ್ತು ಅವರ ಪತಿ ರಾಜ್ ಕುಶಾಲ್ ಕಳೆದ ವರ್ಷ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ತಾರಾ ಬೇಡಿ ಕುಶಾಲ್ ಎಂದು ನಾಮಕರಣ ಮಾಡಿದ್ದರು. ಆದರೆ ಸೋಶಿಯಲ್ ಮೀಡಿಯಾ ಇದನ್ನೇ ಇಟ್ಟುಕೊಂಡು ಟ್ರೋಲ್ ಮಾಡಿತ್ತು. ದತ್ತು ಪಡೆದ ಮಗುವನ್ನು ಬೀದಿ ಬದಿಯ ಬಾಲಕಿ ಎಂದು ಆಡಿಕೊಂಡಿದ್ದವರಿಗೆ ಮಂದಿರಾ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ. ತಮ್ಮ ಇಸ್ಟಾ ಗ್ರ್ಯಾಮ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಕೆಲವು ಹೆಸರಿಲ್ಲದ ಯೂಸರ್ ಗಳು ಮಾಡಿದ ಕಮೆಂಟ್ ನ ಸ್ಕ್ರೀನ್ ಶಾಟ್ ಮಂದಿರಾ ಶೇರ್ ಮಾಡಿಕೊಂಡಿದ್ದಾರೆ. ಯಾವ ಸ್ಲಮ್ ಡಾಗ್ ಸೆಂಟರ್ ನಿಂದ ಈ ಮಗುವನ್ನು ಕರೆದುಕೊಂಡು ಬಂದ್ರಿ ಎಂದು ಕೆಟ್ಟದಾಗಿ ಕೇಳಲಾಗಿದೆ. ಹೇಡಿಗಳಂತೆ ಎಲ್ಲಿಯೀ ಕುಳಿತು ಯಾಕೆ ಇಂಥ ಕಮೆಂಟ್ ಮಾಡುತ್ತೀರಿ ಎಂದು ಮಂದಿರಾ ಕಿಡಿ ಕಾರಿದ್ದಾರೆ. ಸುಮ್ಮನೆ ಬಂದು ಅವರುವುದಲ್ಲ.. ನಿಮ್ಮ ಬಾಯಿ ಮುಚ್ಚಿಕೊಳ್ಳಿ ಎಂದು ಮಂದಿರಾ ಠಕ್ಕರ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕುಹಕವಾಡಿವರಿಗೆ ಮಂದಿರಾ ಕೊಟ್ಟ ತಿರುಗೇಟು Actress Mandira Bedi slams troll who calls her adopted daughter street kid from slumdog centre