ನಟಿ, ಫ್ಯಾಶನ್ ಡಿಸೈನರ್, ಟಿವಿ ನಿರೂಪಕಿ ಬಹುಶಃ ನಟಿ ಮಂದಿರಾ ಬೇಡಿ ಮಾಡದ ಕೆಲಸಗಳೇ ಇಲ್ಲ. ಇಂದಿಗೂ ಯುವ ಜನಾಂಗದ ಮಹಿಳೆಯರಿಗೆ ಸ್ಪೂರ್ತಿಯಾಗುವ ಸಾಕಷ್ಟು ರೋಲ್‌ಗಳಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ.
51 ವರ್ಷದ ಮಂದಿರಾ ಬೇಡಿ ಜೀವನದಲ್ಲಿ 2021ರ ಜೂನ್ 30ರಂದು ಬಹುದೊಡ್ಡ ಆಘಾತ ಎದುರಾಗಿತ್ತು. 21 ವರ್ಷಗಳ ಕಾಲ ಸಂಗಾತಿಯಾಗಿದ್ದ ರಾಜ್ ಕೌಶಲ್ ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವು ಕಂಡಿದ್ದರು.
ರಾಜ್ ಕೌಶಾಲ್ ನಿಧನರಾದ ಬಳಿಕ ಮಂದಿರಾ ಬೇಡಿ ಕೆಲವೊಂದು ದಿನ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ, ದಿನಗಳು ಕಳೆದ ಹಾಗೆ ಮಂದಿರಾ ಬೇಡಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.
ತಮ್ಮ ಸೋಶಿಯಲ್ ಮೀಡಿಯಾ ಪುಟಗಳಲ್ಲಿ ಫಿಟ್‌ನೆಸ್ ಕುರಿತಾದ, ಟ್ರಿಪ್‌ಗಳಿಗೆ ಹೋಗಿರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಇತ್ತೀಚೆಗೆ ಅವರು ಮಾಲ್ಡಿವ್ಸ್ ವೆಕೇಶನ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಮಂದಿರಾ ಬೇಡಿಯ ಜೊತೆ ಮೋಟ್ವಾನೆ ವೆಡ್ಡಿಂಗ್ಸ್‌ನ ನಿರ್ದೇಶಕ ಆದಿತ್ಯ ಮೋಟ್ವಾನೆ ಕಾಣಿಸಿಕೊಂಡಿದ್ದಾರೆ.
ಆದಿತ್ಯ ಮೋಟ್ವಾನೆ ಹಾಗೂ ಮಂದಿರಾ ಬೇಡಿ ಚಿಕ್ಕ ವಯಸ್ಸಿನಿಂದಲೇ ಸ್ನೇಹಿತರು. ರಾಜ್ ಕೌಶಾಲ್ ನಿಧನದ ಬಳಿಕ ಮಂದಿರಾಗೆ ಜೀವನದ ಕುರಿತಾಗಿ ಮತ್ತಷ್ಟು ಭರವಸೆ ನೀಡಿದ್ದು ಆದಿತ್ಯ ಮೋಟ್ವಾನೆ.
ಇನ್ನು ಆದಿತ್ಯ ಮೋಟ್ವಾನೆ ಜೊತೆಗಿನ ಚಿತ್ರವನ್ನು ಮಂದಿರಾ ಹಂಚಿಕೊಂಡ ಬಳಿಕ, ಇಬ್ಬರದು ಬರೀ ಸ್ನೇಹ ಮಾತ್ರವಲ್ಲ. ಅದಕ್ಕಿಂತ ಮಿಗಿಲಾಗಿದ್ದು ಇನ್ನೇನೋ ಇದೆ ಎಂದು ಪ್ರತಿಕ್ರಿಯೆಗಳು ಬರುತ್ತಿವೆ.
ಆದಿತ್ಯ ಮೋಟ್ವಾನೆ ಜೊತೆಗಿನ ಸಾಕಷ್ಟು ಚಿತ್ರಗಳನ್ನು ಮಂದಿರಾ ಬೇಡಿ ಹಂಚಿಕೊಂಡಿದ್ದರೂ, ಕೆಲವೊಂದು ಚಿತ್ರಗಳನ್ನು ಅವರು ಡಿಲೀಟ್ ಮಾಡಿದ್ದಾರೆ.
ಪೋಸ್ಟ್ ಮಾಡಿರುವ ಒಂದು ಚಿತ್ರದಲ್ಲಿ ಮಂದಿರಾ ಬೇಡಿ, ಆದಿತ್ಯ ಮೋಟ್ವಾನೆಯ ಮೂಗಿಗೆ ಬೆರಳು ಇಟ್ಟಿದ್ದರೆ, ಇನ್ನೊಂದು ಚಿತ್ರದಲ್ಲಿ ಮೋಟ್ವಾನೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಂದಿರಾರನ್ನು ಆಪ್ತವಾಗಿ ತಬ್ಬಿಕೊಂಡಿದ್ದಾರೆ.
ಇನ್ನು ಮಂದಿರಾ ಬೇಡಿ ಹಂಚಿಕೊಂಡ ಚಿತ್ರಗಳಿಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಅದರ ಬೆನ್ನಲ್ಲಿಯೇ ಮಂದಿರಾ ಬೇಡಿ ಆ ಪೋಸ್ಟ್‌ಗೆ ಕಾಮೆಂಟ್ ಸೆಕ್ಷನ್‌ಅನ್ನು ಬಂದ್ ಮಾಡಿದ್ದಾರೆ.
ಇದು ಆಕೆಯ ಆಯ್ಕೆ. ಒಬ್ಬಂಟಿಯಾಗಿ ಜೀವನಪೂರ್ತಿ ಬದುಕೋದು ಸಾಧ್ಯವಿಲ್ಲ. ನೋವನ್ನು ಮರೆತು ಆಕೆ ಹೊಸ ಸಂಗಾತಿಯನ್ನು ಹುಡುಕಿಕೊಂಡಿದ್ದರಲ್ಲಿ ತಪ್ಪೇನಿದೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮಂದಿರಾ ಬೇಡಿಗೆ ಇಬ್ಬರು ಮಕ್ಕಳಿದ್ದಾರೆ. 2011ರ ಜೂನ್ 19ಕ್ಕೆ ವೀರ್ ಎನ್ನುವ ಪುತ್ರನಿಗೆ ಮಂದಿರಾ ಬೇಡಿ ಮುಂಬೈನಲ್ಲಿ ಜನ್ಮ ನೀಡಿದ್ದರು.
ಅದಾದ ಬಳಿಕ ಒಂದು ಹೆಣ್ಣು ಮಗುವನ್ನು ಮಂದಿರಾ ಬೇಡಿ ಹಾಗೂ ರಾಜ್ ಕೌಶಲ್ ದತ್ತು ಪಡೆದುಕೊಳ್ಳಲು 2013ರಲ್ಲಿ ಅರ್ಜಿ ಸಲ್ಲಿಸಿದ್ದರು.
ಅದರಂತೆ 2020ರ ಜುಲೈ 28 ರಂದು ಮಂದಿರಾ ಬೇಡಿ ಹಾಗೂ ರಾಜ್ ಕೌಶಾಲ್ 4 ವರ್ಷದ ಹೆಣ್ಣುಮಗುವನ್ನು ದತ್ತು ತೆಗೆದುಕೊಂಡು, ತಾರಾ ಬೇಡಿ ಕೌಶಾಲ್ ಎಂದು ಹೆಸರಿಟ್ಟಿದ್ದರು. ಅದಾದ ಒಂದು ವರ್ಷಕ್ಕೆ ರಾಜ್ ಕೌಶಾಲ್ ನಿಧನರಾಗಿದ್ದರು.