ಹಳೆಯ ಗೆಳೆಯನನ್ನು ಬೈಯ್ಯುತ್ತಿರುವ ಅನುಪಮಾರ ಹೊಸ ಸುದ್ದಿ.. ಮತ್ತೊಬ್ಬನ ಜೊತೆ ಡೇಟಿಂಗ್?!

Published : Aug 22, 2026, 11:35 AM IST

ಬೆಳ್ಳಿತೆರೆಯ ಮೇಲೆ ಸದಾ ನಗುನಗುತ್ತಾ, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಈ ನಟಿಯ ಮನಸ್ಸಿನ ಆಳದಲ್ಲಿ ಒಂದು ಕರಾಳ ಅಧ್ಯಾಯ ಅಡಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಅವರು ಬಿಚ್ಚಿಟ್ಟ ಸತ್ಯಗಳು ಅಭಿಮಾನಿಗಳ ಎದೆಯನ್ನು ಝಲ್ಲೆನಿಸಿವೆ. ಅದೇನು ನೋಡಿ..

PREV
18

Anupama Parameswaran dating news-Chiyaan Vikram son Dhruv Vikram and Anupama Parameswaran Dating News:

ಸಿನೆಮಾ ತೆರೆಯ ಮೇಲೆ ನಗು, ನಿಜ ಜೀವನದಲ್ಲಿ ಕಣ್ಣೀರು!? ಅನುಪಮಾ ಪರಮೇಶ್ವರನ್ ಹಳೆಯ ಸ್ಟೋರಿ ಮುಗಿಯುತ್ತಿದ್ದಂತೆ ಹೊಸ ಸ್ಟೋರಿ ಶುರು?

ಈ ಸ್ಟೋರಿ ನೋಡಿ..

28

ಟಾಲಿವುಡ್‌ನ 'ಲಿಲಿ' ಎಂದೇ ಖ್ಯಾತರಾಗಿರುವ ಅನುಪಮಾ ಪರಮೇಶ್ವರನ್, ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. 'ಕಾರ್ತಿಕೇಯ 2' ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್ 'ಟಿಲ್ಲು ಸ್ಕ್ವೇರ್' ಮೂಲಕ ಬಾಕ್ಸ್ ಆಫೀಸ್ ಸುಲ್ತಾನಿಯಾಗಿ ಮೆರೆಯುತ್ತಿರುವ ಈ ನಟಿಯ ಕ್ರೇಜ್ ಈಗ ಗಗನಕ್ಕೇರಿದೆ. ಆದರೆ, ಬೆಳ್ಳಿತೆರೆಯ ಮೇಲೆ ಸದಾ ನಗುನಗುತ್ತಾ, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಈ ನಟಿಯ ಮನಸ್ಸಿನ ಆಳದಲ್ಲಿ ಒಂದು ಕರಾಳ ಅಧ್ಯಾಯ ಅಡಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಅವರು ಬಿಚ್ಚಿಟ್ಟ ಸತ್ಯಗಳು ಅಭಿಮಾನಿಗಳ ಎದೆಯನ್ನು ಝಲ್ಲೆನಿಸಿವೆ.

38

ಪ್ರೀತಿಯ ಹೆಸರಿನಲ್ಲಿ ನರಕದ ದರ್ಶನ!

ಅನುಪಮಾ ಹಂಚಿಕೊಂಡಿರುವ ಆ ನೋವಿನ ಕಥೆ ಯಾವುದೇ ಸಿನಿಮಾದ ಹಾರರ್ ಸ್ಟೋರಿಗಿಂತ ಕಡಿಮೆಯಿಲ್ಲ. ಸುಮಾರು ಎರಡು ವರ್ಷಗಳ ಹಿಂದೆ ಅವರು ಒಂದು 'ಟಾಕ್ಸಿಕ್ ರಿಲೇಶನ್‌ಶಿಪ್' (ವಿಷಕಾರಿ ಸಂಬಂಧ) ನಲ್ಲಿದ್ದರಂತೆ. ಪ್ರೀತಿ ಎನ್ನುವುದು ನಂಬಿಕೆ ಮತ್ತು ಗೌರವದ ಮೇಲೆ ನಿಂತಿರುತ್ತದೆ, ಆದರೆ ಅನುಪಮಾ ಪಾಲಿಗೆ ಆ ಸಂಬಂಧ ಕೇವಲ ಮಾನಸಿಕ ಮತ್ತು ದೈಹಿಕ ಯಾತನೆಯ ಆಗರವಾಗಿತ್ತು. ತಮ್ಮ ಮಾಜಿ ಗೆಳೆಯನಿಂದ ಅವರು ಅನುಭವಿಸಿದ 'ನಾರ್ಸಿಸಿಸ್ಟಿಕ್ ನಿಂದನೆ' (Narcissistic abuse) ಅವರನ್ನು ಕುಗ್ಗಿಸಿ ಹಾಕಿತ್ತು. "ಅವನು ನನ್ನನ್ನು ಒಬ್ಬ ನಟಿಯಾಗಿ ಮಾತ್ರವಲ್ಲ, ಒಬ್ಬ ಮಹಿಳೆಯಾಗಿಯೂ ಕೀಳಾಗಿ ಕಾಣುವಂತೆ ಮಾಡಿದ," ಎಂದು ಹೇಳುವಾಗ ಅವರ ಕಣ್ಣಾಲಿಗಳು ತೇವವಾಗಿದ್ದವು.

48

ಪಿರಿಯಡ್ಸ್ ಬಗ್ಗೆಯೂ ಅವಹೇಳನ!

ಇಂದಿನ ಆಧುನಿಕ ಯುಗದಲ್ಲೂ ಒಬ್ಬ ಮಹಿಳೆಗೆ ತನ್ನ ಪಿರಿಯಡ್ಸ್ ಸಮಯದಲ್ಲಿ ಸಿಗಬೇಕಾದ ಕನಿಷ್ಠ ಗೌರವವೂ ಆಕೆಗೆ ಸಿಕ್ಕಿರಲಿಲ್ಲ. "ನನ್ನ ಪಿರಿಯಡ್ಸ್ ಬಗ್ಗೆಯೂ ಅವನು ನನ್ನನ್ನು ನಾಚಿಕೆಪಡುವಂತೆ ಮಾಡುತ್ತಿದ್ದ. ನನಗೆ ನೋವಾದಾಗಲೆಲ್ಲಾ, 'ಓಹ್ ನಿನಗೆ ಪಿರಿಯಡ್ಸ್ ಆಗಿದ್ಯಾ? ಮೂಡ್ ಸ್ವಿಂಗ್ಸ್ ಅಲ್ವಾ?' ಎಂದು ಹೇಳಿ ನನ್ನ ನೋವನ್ನು ತಮಾಷೆ ಮಾಡುತ್ತಿದ್ದ. ಒಬ್ಬ ಹೆಣ್ಣಾಗಿರುವುದಕ್ಕೆ ನನಗೆ ಅಸಹ್ಯ ಹುಟ್ಟುವಂತೆ ಮಾಡಿದ್ದ," ಎಂದು ಅನುಪಮಾ ಆಕ್ರೋಶ ಮತ್ತು ದುಃಖದಿಂದ ಹೇಳಿಕೊಂಡಿದ್ದಾರೆ.

58

11 ಮಕ್ಕಳ ಕನಸು ಕಂಡವಳಿಗೆ ಇಂದು ಮಕ್ಕಳೇ ಬೇಡ!

ಈ ಸಂಬಂಧದ ಕಹಿ ಎಷ್ಟು ಗಾಢವಾಗಿದೆ ಎಂದರೆ, ಅದು ಅನುಪಮಾ ಅವರ ತಾಯ್ತನದ ಕನಸನ್ನೇ ಭಸ್ಮ ಮಾಡಿದೆ. ಒಂದು ಕಾಲದಲ್ಲಿ "ನನಗೆ 11 ಮಕ್ಕಳಿರಬೇಕು" ಎಂದು ಕನಸು ಕಾಣುತ್ತಿದ್ದ ಈ ನಟಿ, ಈ ಕ್ರೂರ ಅನುಭವಗಳ ನಂತರ "ನನಗೆ ಮಕ್ಕಳೇ ಬೇಡ" ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಮಾತುಗಳು ಕೇಳುಗರ ಕಣ್ಣಲ್ಲಿ ನೀರು ತರಿಸುವಂತಿತ್ತು.

68

ಯಾರು ಆ ಮಿಸ್ಟರಿ ಮ್ಯಾನ್?

ಪ್ರಸ್ತುತ ಕಾಲಿವುಡ್ ಸ್ಟಾರ್ ವಿಕ್ರಮ್ ಅವರ ಪುತ್ರ ಧ್ರುವ್ ವಿಕ್ರಮ್ ಅವರೊಂದಿಗೆ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಬಲವಾದ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ನಡುವೆ ಅನುಪಮಾ ಹಳೆಯ ಬ್ರೇಕಪ್ ಬಗ್ಗೆ ಮಾತಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಆ ಇಷ್ಟೊಂದು ಕಾಟ ಕೊಟ್ಟ ಮಾಜಿ ಗೆಳೆಯ ಯಾರು ಎಂಬುದು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

78

ನೇರವಾಗಿ ಹೆಸರು ಹೇಳದಿದ್ದರೂ, ಅನುಪಮಾ ತಮ್ಮ ನೋವನ್ನು ಹಂಚಿಕೊಂಡ ರೀತಿ ಮಾತ್ರ ಅದ್ಭುತವಾಗಿದೆ. ಕೇವಲ ಗ್ಲಾಮರ್ ಗೊಂಬೆಯಾಗಿರದೇ, ಸಮಾಜದಲ್ಲಿ ಅನೇಕ ಹೆಣ್ಣುಮಕ್ಕಳು ಅನುಭವಿಸುವ ಟಾಕ್ಸಿಕ್ ಸಂಬಂಧಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ನೆಟ್ಟಿಗರು ಅವರನ್ನು 'ರಿಯಲ್ ಹೀರೋಯಿನ್' ಎಂದು ಕೊಂಡಾಡುತ್ತಿದ್ದಾರೆ.

88

ಆದರೆ ಕೆಲವರು, 'ದಿನಬೆಳಗಾದರೆ ಇಂತಹ ಕೆಲವು ನಟಿಯರದ್ದು ಇದೇ ಗೋಳು.. ಕೆಲಸ ಮಾಡುವುದನ್ನು ಬಿಟ್ಟು ಲವ್, ಡೇಟಿಂಗ್, ಬ್ರೇಕಪ್ ಅಂತ ಸುದ್ದಿಯಾಗುತ್ತಾ ಇರುತ್ತಾರೆ. ಕೆಲವರಿಂದ ಅನುಕಂಪ, ಕೆಲವರಿಂದ ಮೆಚ್ಚುಗೆ ಹಲವರಿಂದ ತೆಗಳಿಕೆ ಸ್ವೀಕರಿಸುತ್ತಾ ಸದಾ ಸುದ್ದಿಯಲ್ಲಿರುವ ಜೀವನ ನಡೆಸುತ್ತಾರೆ. ಇಂಥವರ ಸುದ್ದಿಯಲ್ಲಿ ಅದೆಷ್ಟು ಸತ್ಯ ಇರುತ್ತೋ ಅದೆಷ್ಟು ಸುಳ್ಳು ಇರುತ್ತೋ ಯಾರಿಗೆ ಗೊತ್ತು?' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ತಮ್ಮ ಸಿನಿಮಾ ವೃತ್ತಿಯ ಜೊತೆಗೆ ಲವ್, ಡೇಟಿಂಗ್ ಹಾಗೂ ಬ್ರೇಕಪ್ ಮೂಲಕ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ ನಟಿ ಅನುಪಮಾ ಪರಮೇಶ್ವರನ್. ಸದ್ಯಕ್ಕೆ ಇದು ಸುದ್ದಿ.. ಮುಂದೆ ಇನ್ನೇನು ಕಾದಿದೆಯೋ ಏನೋ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories