Bigg Boss 19: ಈ ನಟನ ಅದೃಷ್ಟವನ್ನೇ ಬದಲಾಯಿಸಿದ ಆ ಒಂದು ಧಾರಾವಾಹಿ!

Published : Aug 24, 2025, 05:15 PM IST

ಕಳೆದ ಕೆಲವು ವರ್ಷಗಳಿಂದ ಈ ನಟ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಸದ್ಯ  ಬಿಗ್ ಬಾಸ್ ಮನೆಯನ್ನು ಶೇಕ್ ಮಾಡಲು ಬರುತ್ತಿದ್ದಾರೆ.

PREV
16

ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 19' ಗಾಗಿ ಕಾಯುತ್ತಿದ್ದ ಕಾಲ ಕೊನೆಗೂ ಮುಗಿದಿದೆ. ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ ಇಂದು ಅಂದರೆ ಆಗಸ್ಟ್ 24 ರಂದು ನಡೆಯಲಿದ್ದು, ಈ ಬಾರಿ ಪ್ರಸಿದ್ಧ ಕಿರುತೆರೆ ನಟ ಗೌರವ್ ಖನ್ನಾ ಮನೆಯನ್ನು ಶೇಕ್ ಮಾಡಲು ಬರುತ್ತಿದ್ದಾರೆ.

26

ಗೌರವ್ ಖನ್ನಾ ಜರ್ನಿ ಆರಂಭವಾದದ್ದು ಸಣ್ಣ ಪಾತ್ರಗಳಿಂದ. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಕಿರುತೆರೆಯಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. 2004 ರಲ್ಲಿ 'ಸ್ಟುಡಿಯೋ ಒನ್'ಶೋ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೌರವ್ ಖನ್ನಾ, ನಂತರ 'ಕುಂಕುಮ್', 'ಭಾಭಿ', 'ಅರ್ಧಾಂಗಿನಿ' ಮತ್ತು 'ಸಂತನ್' ನಂತಹ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು.

36

ಗೌರವ್ ಖನ್ನಾ ಮೊದಲ ಬಾರಿಗೆ 'ಮೇರಿ ಡೋಲಿ ತೇರೆ ಅಂಗ್ನಾ'ದಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಇದಾದ ನಂತರ, ಅವರು ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು, ಆದರೆ ಅವರಿಗೆ ನಿಜವಾದ ಮನ್ನಣೆ ಸಿಕ್ಕಿದ್ದು 'ಅನುಪಮಾ' ಧಾರವಾಹಿಯಿಂದ. ಈ ಧಾರಾವಾಹಿಯಲ್ಲಿ ಅವರು ಅನುಜ್ ಕಪಾಡಿಯಾ ಪಾತ್ರದಿಂದಾಗಿ ಪ್ರತಿ ಮನೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು ಮತ್ತು ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದರು.

46

'ಅನುಪಮಾ'ದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಗೌರವ್ ಖನ್ನಾ 2024 ರಲ್ಲಿ ಧಾರಾವಾಹಿಯಿಂದ ಹೊರಬಂದರು. ಇದಾದ ನಂತರ, ಅವರು 'ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ' ಎಂಬ ಅಡುಗೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಟ್ರೋಫಿಯನ್ನು ಗೆದ್ದರು. ಕಳೆದ ಕೆಲವು ವರ್ಷಗಳಿಂದ ಗೌರವ್ ಖನ್ನಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

56

'ಬಿಗ್ ಬಾಸ್ 19' ನಲ್ಲಿ ಗೌರವ್ ಖನ್ನಾ ಏನು ಮಾಡುತ್ತಾರೆ ಮತ್ತು ಪ್ರೇಕ್ಷಕರ ಹೃದಯಗಳನ್ನು ಗೆಲ್ಲುವಲ್ಲಿ ಅವರು ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

66

'ಬಿಗ್ ಬಾಸ್ 19' ನ ಪ್ರಥಮ ಪ್ರದರ್ಶನವು ಇಂದು ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮತ್ತು ರಾತ್ರಿ 10:30 ಕ್ಕೆ ಹಿಂದಿ ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories