ಗೀತಾ ಸಿಂಗ್‌ರನ್ನ ಅಳಿಸಿದ ನರೇಶ್
''ಈ ಸಿನಿಮಾ ಹೇಗೆ ಬರುತ್ತೋ ಅಂತ ಟೆನ್ಷನ್‌ನಿಂದ ನಾನು ಪ್ರಿವ್ಯೂಗೂ ಹೋಗ್ಲಿಲ್ಲ. ಆದರೆ ಹಿಟ್ ಆಯ್ತು ಅಂತ ಗೊತ್ತಾಗಿ ಖುಷಿ ಆಯ್ತು. ನನ್ನ ಪಾತ್ರಕ್ಕೆ ಬಂದ ಪ್ರತಿಕ್ರಿಯೆ ಅಷ್ಟಿಷ್ಟಲ್ಲ. ತುಂಬಾ ಜನ ನಮ್ಮ ಮನೆಯಲ್ಲಿ ನಡೆಯೋದನ್ನೇ ಸಿನಿಮಾ ಮಾಡಿದ್ದೀರ ಅಂದ್ರು. ಒಬ್ಬರು, ನನ್ನ ಗಂಡ ಅಲ್ಲರಿ ನರೇಶ್ ತರ, ನಾನು ನಿಮ್ಮ ತರ ಇದ್ದೀನಿ, ನೋಡಿ ಅಂತ ಕೇಳಿದ್ರು. ಈ ಸಿನಿಮಾವನ್ನ ಒಂದು ಥಿಯೇಟರ್‌ನಲ್ಲಿ ನೋಡೋಕೆ ಟೀಮ್ ಹೋಗಿದ್ವಿ. ನನ್ನ ಪಕ್ಕ ಗಿರಿಬಾಬು ಸರ್ ಕೂತಿದ್ರು. ಮುಂದೆ ನರೇಶ್ ಇದ್ರು. ಸಿನಿಮಾ ನೋಡಿ ಗಿರಿಬಾಬು ಸರ್, ಸೂಪರ್ ಮಾಡಿದ್ದೀಯ, ನಿನಗೆ ಸರಿಸಾಟಿ ಇಲ್ಲ ಅಂದ್ರು. ಸಿನಿಮಾ ಮುಗಿದ ಮೇಲೆ ನರೇಶ್ ಎದ್ದು ಚಪ್ಪಾಳೆ ತಟ್ಟಿ, ಈ ಸಿನಿಮಾದಿಂದ ನನಗಿಂತ ನಿನಗೆ ಹೆಚ್ಚು ಹೆಸರು, ಫ್ಯಾನ್ಸ್ ಬರ್ತಾರೆ ಅಂದ್ರು. ಆ ಮಾತಿಗೆ ನನಗೆ ಕಣ್ಣಲ್ಲಿ ನೀರು ಬಂತು.'' ಹೀಗೆ ಕಿತಕಿತಲು ಸಿನಿಮಾದಿಂದ ಹೀರೋಯಿನ್ ಆದ ಗೀತಾ, ಆಮೇಲೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ್ರು. ಆದರೆ ಸ್ಟಾರ್ ಆಗೋಕೆ ಆಗ್ಲಿಲ್ಲ.