ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಹೊರಟ ವೇಳೆ ಅಭಿಮಾನಿಯೊಬ್ಬ ಕೊಟ್ಟ ಕಾಂಪ್ಲಿಮೆಂಟ್ಸ್‌ಗೆ ನಟಿ ಹೇಳಿದ್ದೇನು? ನೀವೇ ನೋಡಿ
ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಲು ತಮ್ಮ ಮನೆಯಿಂದ ಹೊರಟಿದ್ದರು. ಈ ವೇಳೆ ನಡೆದ ಒಂದು ತಮಾಷೆಯ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
26
ಹೂವು ಸೂಪರ್ ಎಂದ ಅಭಿಮಾನಿ
ಸೀರೆ ಉಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು ಕಾರು ಹತ್ತಲು ಹೋಗುತ್ತಿದ್ದ ಕೀರ್ತಿ ಅವರಿಗೆ, 'ಹೂವು ಸೂಪರ್ ಆಗಿದೆ' ಅಂತ ಅಭಿಮಾನಿಯೊಬ್ಬರು ಹೇಳಿದರು.
36
ಮುದ್ದಾಗಿ ರಿಪ್ಲೆ ಕೊಟ್ಟ ಕೀರ್ತಿ
ಇದನ್ನು ಕೇಳಿದ ಕೀರ್ತಿ, 'ಹೂವು ಚೆನ್ನಾಗಿದ್ಯಾ? ನನ್ನ ಲುಕ್ ಹೇಗಿದೆ ಅಂತ ಹೇಳೋ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ಮುದ್ದಾದ ಪ್ರತಿಕ್ರಿಯೆಯ ವಿಡಿಯೋಗೆ ನೆಟ್ಟಿಗರು ಮನಸೋತಿದ್ದಾರೆ.
ಆದಮ್ ದಾಸನ್ ನಿರ್ದೇಶನದ 'ಪಾಂಬು ಸಟ್ಟೈ' (2017) ಚಿತ್ರದ ನಟನೆಗಾಗಿ ಕೀರ್ತಿಗೆ ಈ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇದು ಅವರ ಮೊದಲ ರಾಜ್ಯ ಪ್ರಶಸ್ತಿಯಾಗಿದೆ.
56
ತಮಿಳುನಾಡು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕೀರ್ತಿ ಸುರೇಶ್
ಪ್ರಶಸ್ತಿ ಸ್ವೀಕರಿಸಿದ ನಂತರ ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ: "ನನ್ನ ಮೊದಲ ರಾಜ್ಯ ಪ್ರಶಸ್ತಿ ನೀಡಿದ ತಮಿಳುನಾಡು ಸರ್ಕಾರಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಈ ಅವಕಾಶ ನೀಡಿದ ನಿರ್ದೇಶಕರಿಗೆ, ಸದಾ ಬೆಂಬಲವಾಗಿ ನಿಂತ ಸಹೋದ್ಯೋಗಿಗಳು, ತಂತ್ರಜ್ಞರು ಮತ್ತು ನನ್ನ ತಂಡಕ್ಕೆ ಧನ್ಯವಾದ. ಹಾಗೆಯೇ, ಪ್ರಶಸ್ತಿ ಗೆದ್ದ ಎಲ್ಲರಿಗೂ ನನ್ನ ಪ್ರೀತಿ ಮತ್ತು ಅಭಿನಂದನೆಗಳು."
66
ರಿವಾಲ್ವರ್ ರೀಟಾ ಕೀರ್ತಿ ಕಡೆಯ ಸಿನಿಮಾ
ಜೆ.ಕೆ. ಚಂದ್ರು ನಿರ್ದೇಶನದ 'ರಿವಾಲ್ವರ್ ರೀಟಾ' ಕೀರ್ತಿ ನಟನೆಯ ಕೊನೆಯ ಚಿತ್ರವಾಗಿತ್ತು. ಈ ವರ್ಷ ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಅವರ ಹಲವು ಚಿತ್ರಗಳು ಬಿಡುಗಡೆಯಾಗಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.