Karna Serial ನಿಧಿಗೆ ಡಬಲ್​ ಧಮಾಕಾ: ಒಂದೇ ಬಾರಿ ಎರಡೆರಡು ಅವಾರ್ಡ್​ ಪಡೆದ ಭವ್ಯಾ ಗೌಡ

Published : Jun 02, 2026, 07:32 PM IST

ಕರ್ಣ ಸೀರಿಯಲ್‌ನಲ್ಲಿ ಕರ್ಣನೊಂದಿಗೆ ನಿಧಿ ಪಾತ್ರಧಾರಿ ಭವ್ಯಾ ಗೌಡರ ಮದುವೆಯಾಗಿದೆ. ಇತ್ತೀಚೆಗೆ SITSA ಅವಾರ್ಡ್ಸ್ 2026ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಚಿತ್ತಾರ ಅವಾರ್ಡ್​ ಪಡೆದ ಇವರು,   ಮಾಹಿತಿ ಹಂಚಿಕೊಂಡಿದ್ದಾರೆ.

PREV
16
ಕರ್ಣನ ಜೊತೆ ಮದುವೆ

ಭವ್ಯಾ ಗೌಡ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್ (Karna Serial) ನಿಧಿ ಎಂದಾಕ್ಷಣ ಸೀರಿಯಲ್ ಪ್ರಿಯರ ಕಣ್ಣುಗಳು ಅರಳುತ್ತವೆ. ಇತ್ತ ಕರ್ಣ ಸೀರಿಯಲ್‌ನಲ್ಲಿ ಅಂತೂ ಕರ್ಣನ ಜೊತೆ ನಿಧಿಯ ಮದುವೆಯಾಗಿದೆ. ನಿಧಿ ಕನಸು ನನಸಾಗಿದೆ.

26
ಎರಡು ಅವಾರ್ಡ್

ಅದೇ ಇನ್ನೊಂದೆಡೆ, ನಟಿ ಭವ್ಯಾ ಗೌಡ ಅವರು, SITSA (South Indian Television and Social Media) ಅವಾರ್ಡ್ಸ್ 2026ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2026 ರಲ್ಲಿ ಪ್ರಾಮಿಸಿಂಗ್ ಸ್ಟಾರ್ ಫೀಮೇಲ್ ಪ್ರಶಸ್ತಿ ಗೆದಿದ್ದಾರೆ.

36
‌ಧನ್ಯವಾದ ಸಲ್ಲಿಸಿರೋ ನಟಿ

ಕಿರುತೆರೆ ಮತ್ತು ಸಾಮಾಜಿಕ ಮಾಧ್ಯಮ ರಂಗದಲ್ಲಿನ ಜನಪ್ರಿಯತೆಗಾಗಿ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿ ಭವ್ಯಾ ಅವರಿಗೆ ಸಿಕ್ಕಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ತಿಳಿಸಿರುವ ನಟಿ, ತಮ್ಮ ನಟನೆ, ತಂಡ ಮತ್ತು ವೀಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

46
ನಟಿಯ ಕುರಿತು

ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್​ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು 'ಗೀತಾ' ಸೀರಿಯಲ್​ನಲ್ಲಿ ನಟಿಸಿದ್ದರು. 'ಬಿಗ್‌ಬಾಸ್ ಕನ್ನಡ ಸೀಸನ್ 11' ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.

56
ಸ್ಯಾಂಡಲ್​ವುಡ್​ಗೂ ಎಂಟ್ರಿ

ನಟಿ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.

66
ಬಹು ವರ್ಷಗಳ ಕ್ರಶ್​

ಅಷ್ಟಕ್ಕೂ ಭವ್ಯಾ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್‌ ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್‌ ಸುವರ್ಣ ನ್ಯೂಸ್‌ ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹೇಳಿದ್ದರು. ಅವರು ಯಾರು ಎನ್ನುವುದು ಇನ್ನಷ್ಟೇ ರಿವೀಲ್​ ಆಗಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories