Durandhar-2 ಸಕ್ಸಸ್​ ಬೆನ್ನಲ್ಲೇ ಕ್ಷಮೆ ಕೋರಿ ಕರ್ನಾಟಕ ಹೈಕೋರ್ಟ್​ಗೆ ನಟ ರಣವೀರ್ ಸಿಂಗ್​: ಆಗಿದ್ದೇನು?

Published : Apr 10, 2026, 08:08 PM IST

ಚಾವುಂಡಿ ದೈವವನ್ನು ಅನುಕರಿಸಿ ಅಪಹಾಸ್ಯ ಮಾಡಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಪರಿಷ್ಕೃತ ಅಫಿಡವಿಟ್ ಸಲ್ಲಿಸಿ, ‘ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.

PREV
16
ದುರಂಧರ್​-2 ಸಿನಿಮಾ ಸಕ್ಸಸ್​

ಬಾಲಿವುಡ್​ ಸ್ಟಾರ್​ ರಣವೀರ್​ ಸಿಂಗ್​ ಇದೀಗ ದುರಂಧರ್​-2 ಸಿನಿಮಾ ಸಕ್ಸಸ್​​ನಲ್ಲಿದ್ದಾರೆ. ಬಾಲಿವುಡ್​ ಸೇರಿದಂತೆ ಎಲ್ಲಾ ವುಡ್​ಗಳ ದಾಖಲೆಗಳನ್ನು ಉಡೀಸ್​ ಮಾಡಿ, ದುರಂಧರ್​ ಇನ್ನೂ ಮುನ್ನುಗ್ಗುತ್ತಲೇ ಸಾಗುತ್ತಿದೆ. ಇದನ್ನು ಪ್ರಪೋಗಂಡಾ ಸಿನಿಮಾ ಎಂದು ಗೋಳೋ ಎನ್ನುತ್ತ, ಟೀಕೆ ಮಾಡುತ್ತಿರುವ ನಡುವೆಯೇ, ಈ ಸಿನಿಮಾ ನೋಡಲು, ಪಾಕಿಸ್ತಾನಿಗಳೂ ಸೇರಿದಂತೆ ವಿವಿಧ ದೇಶಗಳ ಜನರೂ ಮುಗಿಬೀಳುತ್ತಿದ್ದಾರೆ. ಆದರೆ ಇದರ ನಡುವೆಯೇ ನಟ ರಣವೀರ್​ ಸಿಂಗ್​ ಇದೀಗ ಕರ್ನಾಟಕ ಹೈಕೋರ್ಟ್​ಗೆ ಕ್ಷಮಾಪಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ!

26
ಚಾವುಂಡಿ ದೈವ ಅನುಕರಿಸಿ ಅಪಹಾಸ್ಯ

ಅಷ್ಟಕ್ಕೂ ಈ ಕ್ಷಮಾಪಣೆ ಅರ್ಜಿಗೂ, ದುರಂಧರ್​ ಚಿತ್ರಕ್ಕೂ ಸಂಬಂಧವಿಲ್ಲ. ಆದರೆ, ರಣವೀರ್​ ಅವರು ಮಾಡಿರುವ ದೊಡ್ಡ ತಪ್ಪು ಎಂದರೆ, ಚಾವುಂಡಿ ದೈವ ಅನುಕರಿಸಿ ಅಪಹಾಸ್ಯ ಮಾಡಿರುವುದು ಅವರಿಗೆ ಮುಳುವಾಗಿದೆ. ಇದಾಗಲೇ ಈ ಬಗ್ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಹಿಂದೊಮ್ಮೆ ನಟ ಕನ್ನಡಿಗರೂ ಸೇರಿದಂತೆ ಕೋರ್ಟ್​ನಲ್ಲಿ ಎಲ್ಲರ ಕ್ಷಮೆಯನ್ನು ಕೋರಿದ್ದರು.

36
ಪರಿಷ್ಕೃತ ಕ್ಷಮೆಯಾಚನೆ

ಆದರೆ ಇದೀಗ, ಹಿಂದಿನ ಕ್ಷಮೆ ಪ್ರಾಮಾಣಿಕವಾಗಿಲ್ಲ ಎಂಬ ಆರೋಪ ಬಂದ ಕಾರಣದಿಂದ ಮತ್ತೊಮ್ಮೆ ಪರಿಷ್ಕೃತ ಕ್ಷಮೆಯಾಚಿಸಲು ಮತ್ತು ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ನಟನ ಪರ ವಕೀಲರು ಇಂದು ಹೈಕೋರ್ಟ್​ಗೆ ತಿಳಿಸಿದ್ದಾರೆ .ಹೊಸದಾಗಿ ಕ್ಷಮೆ ಕೇಳಲು ತಮ್ಮ ಕಕ್ಷಿದಾರರು ಸಿದ್ಧರಿದ್ದು, ದೇವಾಲಯಕ್ಕೂ ಭೇಟಿ ನೀಡುವುದಾಗಿ ವಕೀಲರು ಕೋರ್ಟ್​ಗೆ ಹೇಳಿದ್ದಾರೆ. ‘ಚಾವುಂಡಿ ದೈವ ಅನುಕರಿಸಿದ ಪ್ರಕರಣದಲ್ಲಿ ಪರಿಷ್ಕೃತ ಕ್ಷಮೆಯಾಚನಾ ಅಫಿಡವಿಟ್​ ಸಲ್ಲಿಸಲು ನಾನು ಸಿದ್ಧ. ಈ ಹಿಂದಿನ ಕ್ಷಮೆಯಾಚನೆ ಪ್ರಾಮಾಣಿಕವಾಗಿಲ್ಲ ಎಂಬ ಕಳವಳವನ್ನು ಇದು ದೂರ ಮಾಡುತ್ತದೆ’ ಎಂದು ಈಗ ಸಲ್ಲಿಸಿರುವ ಅಫಿಡೆವಿಟ್​ನಲ್ಲಿ ತಿಳಿಸಲಾಗಿದೆ.

46
ದೈವಾರಾಧಕರನ್ನು ನೋಯಿಸಿದ್ದೇನೆ

ನಾನು ದೈವಾರಾಧಕರನ್ನು ನೋಯಿಸಿದ್ದೇನೆ, ಆದರೆ ಮಿಮಿಕ್ರಿ ಮಾಡುವ ಸಮಯದಲ್ಲಿ ಇದು ಹೀಗೆ ಎಂದುನನಗೆ ತಿಳಿದರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು. ನನಗೆ ಈ ಸೂಕ್ಷ್ಮತೆಗಳ ಅರಿವು ಇರಲಿಲ್ಲ. ಆದರೆ ಕೊನೆಗೆ ನಾನು ಮಾಡಿರುವುದು ದೊಡ್ಡ ತಪ್ಪು ಎಂದು ತಿಳಿದಿದೆ. ಈ ಅಫಿಡವಿಟ್ ಮೂಲಕ ನಾನು ಮತ್ತೊಮ್ಮೆ ನನ್ನ ವಿಷಾದ ಹೊರಹಾಕುತ್ತೇನೆ. ಬೇಷರತ್ತ ಕ್ಷಮೆಯಾಚಿಸುತ್ತೇನೆ . ನನ್ನ ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸಲು ನಾನು ಶೀಘ್ರವೇ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ’ ಎಂದು ರಣವೀರ್ ಸಿಂಗ್ ಅಫಿಡವಿಟ್​​ನಲ್ಲಿ ತಿಳಿಸಿದ್ದಾರೆ.

56
ಏನಿದು ವಿವಾದ?

ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ‘ಕಾಂತಾರ ಚಾಪ್ಟರ್-1’ ಚಿತ್ರದ ಪಾತ್ರವೊಂದರ ಬಗ್ಗೆ ರಣವೀರ್ ಸಿಂಗ್ ನೀಡಿದ್ದ ಹೇಳಿಕೆ ದೈವಾರಾಧನೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪ್ರಶಾಂತ್ ಮೆತಾಲ್ ಎಂಬುವವರು ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು. ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು.

66
ಟ್ವೀಟ್ ಮೂಲಕ ಕ್ಷಮೆ ಕೇಳಿದ ರಣವೀರ್

ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ತಾವು ಕ್ಷಮೆ ಕೇಳುವುದಾಗಿ ರಣವೀರ್ ಸಿಂಗ್ ಈಗಾಗಲೇ ‘ಎಕ್ಸ್’ (ಟ್ವಿಟರ್) ಮೂಲಕ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನ್ಯಾಯಾಲಯಕ್ಕೂ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸುವುದಾಗಿ ರಣವೀರ್ ಪರ ವಕೀಲರು ತಿಳಿಸಿದ್ದಾರೆ. ಆದರೆ, ದೂರುದಾರ ಪ್ರಶಾಂತ್ ಮೆತಾಲ್ ಮಾತ್ರ ನಟನ ಕೇವಲ ಲಿಖಿತ ಕ್ಷಮೆಯಾಚನೆಗೆ ತೃಪ್ತರಾಗಿರಲಿಲ್ಲ. ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ನಡೆದ ವಿಚಾರಣೆ ವೇಳೆ ದೂರುದಾರರ ಪರ ವಕೀಲರು ಕಠಿಣ ಪಟ್ಟು ಹಿಡಿದರು. 'ನಟ ರಣವೀರ್ ಸಿಂಗ್ ಕೇವಲ ನ್ಯಾಯಾಲಯಕ್ಕೆ ಪೇಪರ್‌ನಲ್ಲಿ ಕ್ಷಮೆ ಸಲ್ಲಿಸಿದರೆ ಸಾಲದು. ಅವರಲ್ಲಿ ನೈಜ ಪಶ್ಚಾತ್ತಾಪ ಇರಬೇಕು. ಹೀಗಾಗಿ ಅವರು ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ದೈವದ ಮುಂದೆ ಕ್ಷಮೆ ಕೇಳಬೇಕು' ಎಂದು ಪ್ರಶಾಂತ್ ಮೆತಾಲ್ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories