ಚಟಕ್ಕೋಸ್ಕರ ಲವ್ ಮಾಡ್ಬೇಡಿ, ಮನಸ್ಸಿಂದ ಪ್ರೀತಿ ಮಾಡಿ: ಕಣ್ಣೀರು ಹಾಕುತ್ತ ಸಂಜು ಬಸಯ್ಯ ಹೀಗೆ ಹೇಳಿದ್ಯಾಕೆ?

First Published | Sep 14, 2023, 12:30 AM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದೆ ಪಲ್ಲವಿ ಬಳ್ಳಾರಿ ಅವರನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಸಂಜು ಬಸಯ್ಯ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿ ನಂತರ ಆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಇತ್ತೀಚೆಗೆ ಹಂಚಿಕೊಂಡಿದ್ದರು.
 

ಜೋಡಿ ನಂ 1 ವೇದಿಕೆ ಮೇಲೆ ಸಂಜು ಬಸಯ್ಯ ಹಾಗೂ ಪಲ್ಲವಿ ಗಮನ ಸೆಳೆಯುತ್ತಿದ್ದಾರೆ. 'ಸಿಂಗಪೂರ್‌ನಲ್ಲಿ ರಾಜಾ ಕುಳ್ಳ' ಚಿತ್ರದ ಬೆಳ್ಳಿಯ ರಾಜಾ ಬಾರೋ..ಕುಳ್ಳರ ರಾಜಾ ಬಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೇ ಸಮಯದಲ್ಲಿ ತಾವಿಬ್ಬರೂ ಪ್ರೀತಿಯಲ್ಲಿದ್ದಾಗ ಅನುಭವಿಸಿದ ನೋವನ್ನು ಈ ಅಪರೂಪದ ಜೋಡಿ ಹಂಚಿಕೊಂಡಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದೆ ಪಲ್ಲವಿ ಬಳ್ಳಾರಿ ಅವರನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಸಂಜು ಬಸಯ್ಯ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿ ನಂತರ ಆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಇತ್ತೀಚೆಗೆ ಹಂಚಿಕೊಂಡಿದ್ದರು.

Tap to resize

ಸಂಜು ಬಸಯ್ಯ ಹಾಗೂ ಪಲ್ಲವಿ ಜೋಡಿ ನೋಡಿ ಶುಭ ಕೋರಿದವರು ಕೆಲವೇ ಕೆಲವು ಮಂದಿ. ಉಳಿದವರು ಅವರ ಕಾಲೆಳೆದಿದ್ದೇ ಹೆಚ್ಚು. ಸಂಜು ಬಸಯ್ಯ ಅವರಿಗಿಂತ ಪಲ್ಲವಿ ಎತ್ತರ ಇರುವುದು ಇದಕ್ಕೆ ಕಾರಣ. ಇದೇ ವಿಚಾರ ಜೋಡಿ ನಂ 1 ಕಾರ್ಯಕ್ರಮದಲ್ಲಿ ಕೂಡಾ ಪ್ರಸ್ತಾಪವಾಗಿದೆ. 

ನನಗೆ 7ನೇ ವಯಸ್ಸಿನಲ್ಲಿದ್ದಾಗ ನಾನು ಕುಳ್ಳ ಅಂತ ಗೊತ್ತಾಯ್ತು. ಜನರೆಲ್ಲ ನಮ್ಮ ತಂದೆಗೆ ನಿನ್ನ ಮಗನಿಗೆ ನೀನೆ ಅವನ ಹೊಟ್ಟೆ ಹೊರೆಯಬೇಕು ಅಂತ ಹೇಳಿದರು. ಆದರೆ ನಾನು ಚಿಕ್ಕ ವಯಸ್ಸಿಗೆ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿ ಹಣ ಗಳಿಸೋಕೆ ಆರಂಭಿಸಿದೆ. 

ರೈತರಿಗೆ ಹೆಣ್ಣು ಸಿಗಲ್ಲ, ನನಗೆ ಯಾರು ಹೆಣ್ಣು ಕೊಡ್ತಾರೆ ಅಂತ ಅಂದುಕೊಂಡಿದ್ದೆ. ಪಲ್ಲವಿ ನನಗೆ ಸಿಗ್ತಾಳಾ ಇಲ್ವಾ ಅಂತ ಅಂದುಕೊಂಡಿದ್ದೆ. ಸ್ನೇಹಿತರೆಲ್ಲ ನಮ್ಮ ಮುಂದೆ ನಿಮ್ಮ ಜೋಡಿ ಚೆನ್ನಾಗಿದೆ ಅಂತ ಹೇಳಿದ್ರೆ, ಹಿಂದಿನಿಂದ ಇವನಿಂದ ಅವಳು ಏನು ಸುಖ ಪಡೆಯುತ್ತಾಳೆ ಅಂತ ಮಾತನಾಡಿದ್ರು. 

ಜನರು ತುಂಬ ಹೀಯಾಳಿಸಿ ಮಾತನಾಡಿದ್ರು. ನಾನು ಈ ವೇದಿಕೆ ಮೇಲೆ ನಿಲ್ಲಲು ನನ್ನ ತಂದೆ ಹಾಗೂ ಪಲ್ಲವಿ ಕಾರಣ. ನಾನು ಪಲ್ಲವಿಯನ್ನು ಅರ್ಥ ಮಾಡಿಕೊಂಡಿದ್ದೀನಿ, ಅವಳು ನನ್ನ ಅರ್ಥ ಮಾಡಿಕೊಂಡಿದ್ದಾಳೆ. ದಯವಿಟ್ಟು ಯಾರೂ ಚಟಕ್ಕೋಸ್ಕರ ಪ್ರೀತಿ ಮಾಡಬೇಡಿ, ಮನಸ್ಸಿನಿಂದ ಪ್ರೀತಿ ಮಾಡಿ ಎಂದು ಸಂಜು ಬಸಯ್ಯ ಹೇಳಿದ್ದಾರೆ.

ನಾನು ನಾಟಕಗಳನ್ನು ಮಾಡುತ್ತಿದ್ದೆ, ಆರ್ಕೆಸ್ಟ್ರಾದಲ್ಲಿ ಭಾಗವಹಿಸುತ್ತಿದ್ದೆ. ಆಗ ನನಗೆ ಸಂಜು ಬಸಯ್ಯ ಅವರು ಪರಿಚಯ ಆಯ್ತು. ಸಂಜು ಅವರನ್ನು ನೋಡಿ ನಾನು ನನಗಿಂತ ಚಿಕ್ಕವರು ಅನ್ಕೊಂಡಿದ್ದೆ, ಆಮೇಲೆ ಅವರು ನನಗಿಂತ 6 ತಿಂಗಳು ದೊಡ್ಡವರು ಅಂತ ಗೊತ್ತಾಯ್ತು. 

ಆರಂಭದಲ್ಲಿ ನಾನು, ಸಂಜು ಸ್ನೇಹಿತರಾಗಿದ್ದೆವು, ನಾನು ಏನೇ ಕಷ್ಟ ಸುಖ ಇದ್ದರೂ ಅವರ ಬಳಿ ಹೇಳ್ತಿದ್ದೆ, ಅವರು ನನಗೆ ಮೆಸೇಜ್ ಮಾಡ್ತಿದ್ರು, ವಿಡಿಯೋ ಕಾಲ್ ಮಾಡ್ತಿದ್ರು. ಆಮೇಲೆ ಒಂದಿನ ಅವರು ನನಗೆ ಪ್ರೇಮ ನಿವೇದನೆ ಮಾಡಿದರು. ನಾನು ಮೂರು ದಿನ ಬಿಟ್ಟು ಉತ್ತರ ಕೊಟ್ಟೆ ಎಂದು ಹೇಳಿದ್ದಾರೆ ಪಲ್ಲವಿ.

Latest Videos

click me!