ಮಗುವಾಗಿ 2 ತಿಂಗಳಾಗಿಲ್ಲ, ಪ್ಯಾರಿಸ್‌ ಮದ್ವೇಲಿ ಉಪಾಸನಾ, ರಾಮ್ ಚರಣ್!

First Published | Sep 13, 2023, 5:37 PM IST

ಉಪಾಸನಾ ಕಾಮಿನೇನಿ ತಮ್ಮ ಪ್ರೀತಿಯ ಪತಿ ರಾಮ್ ಚರಣ್ ಅವರೊಂದಿಗೆ ಪ್ಯಾರಿಸ್ನಲ್ಲಿ ಸ್ನೇಹಿತರೊಬ್ಬರ ಮದುವೆಗೆ ತೆರಳಿದ್ದು, ಅಲ್ಲಿನ ಸಂಭ್ರಮದ ಫೋಟೋಗಳನ್ನು ಉಪಾಸನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ದಕ್ಷಿಣ ಭಾರತದ ನಟ, ತೆಲುಗು ಚಿತ್ರರಂಗದ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ (Ramcharan and Upasana Kamineni) ಸೆಪ್ಟೆಂಬರ್ 12, 2023 ರಂದು, ಪ್ಯಾರಿಸ್‌ನಲ್ಲಿ ಸ್ನೇಹಿತರೊಬ್ಬರ ಮದುವೆಗೆ ತೆರೆಳಿದ್ದು, ಅಲ್ಲಿನ ಸಂಭ್ರಮದ ಫೋಟೋಗಳನ್ನು ಉಪಾಸನಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಟಾಲಿವುಡ್‌ನ ಮೋಸ್ಟ್ ಲವೇಬಲ್ ಕಪಲ್ (lovable couple) ಎಂದೇ ಖ್ಯಾತರಾಗಿರುವ ಉಪಾಸನಾ ಮತ್ತು ರಾಮ್ ಚರಣ್ ಗೋಲ್ಡನ್ ಶೇಡ್ ಡ್ರೆಸ್ಸಿನಲ್ಲಿ ಪ್ಯಾರಿಸ್‌ನಲ್ಲಿ ಮಿಂಚುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಜೋಡಿಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 
 

Tap to resize

ಉಪಾಸನಾ ದುಪ್ಪಟ್ಟಾಗೆ ಜೋಡಿಯಾಗಿ ಭಾರಿ ಕಸೂತಿ ಇರುವ ಗೋಲ್ಡನ್ ಶೇಡ್ ಡ್ರೆಸ್ ನಲ್ಲಿ (golden shade dress) ತುಂಬಾ ಸುಂದರವಾಗಿ ಕಾಣುತ್ತಿದ್ದರೆ, ರಾಮ್ ತನ್ನ ಹೆಂಡತಿಗೆ ಮ್ಯಾಚ್ ಮಾಡಲು ಗೋಲ್ಡನ್ ಶೆರ್ವಾನಿ, ಸೂಟಿನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಸೂಕ್ಷ್ಮ ಮೇಕಪ್, ಸಿಗ್ನೇಚರ್ ಹೇರ್ ಸ್ಟೈಲ್, ಚಿನ್ನದ ಕಿವಿಯೋಲೆಗಳು ಮತ್ತು ಉಂಗುರಗಳೊಂದಿಗೆ ಉಪಾಸನಾ ಪರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಅದ್ದೂರಿ ಮದುವೆ ಸಂಭ್ರಮದಲ್ಲಿ ಸ್ನೇಹಿತರ ಜೊತೆಗಿನ ಪ್ಯಾರಿಸ್ ಫೋಟೋಗಳನ್ನು ಉಪಾಸನಾ ಶೇರ್ ಮಾಡಿದ್ದು, ಈ ಜೋಡಿಗಳು ಹೊಸದಾಗಿ ಮದುವೆಯಾದ ದಂಪತಿಯೊಂದಿಗೆ ಪೋಸ್ ನೀಡಿದ್ದಾರೆ. ಜೊತೆಗೆ ಉಪಾಸನಾ ತಮ್ಮ ಫ್ರೆಂಡ್ಸ್ ಜೊತೆ ಡಿನ್ನರ್ ಮಾಡುವ ಫೋಟೋ ಸಹ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಫ್ರೆಂಡ್ ಗೆ ಮದುವೆ ಶುಭ ಕೋರಿದ್ದಾರೆ. 
 

ಇತ್ತೀಚೆಗಷ್ಟೇ ತಾಯಿಯಾಗಿರುವ, ಉಪಾಸನಾ ತನ್ನ ತಾಯಿಯ ಕರ್ತವ್ಯಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು,  ಪ್ಯಾರಿಸ್‌ನಲ್ಲಿ ಪತಿಯೊಂದಿಗೆ ಸಮಯ  ಕಳೆಯುತ್ತಿರುವುದು ಕಂಡುಬಂದಿದೆ. ವಿದೇಶದಲ್ಲಿ ತನ್ನ ಗೆಳತಿಯರೊಂದಿಗೆ ಆನಂದಿಸುತ್ತಿರುವ ಮತ್ತೊಂದು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.  
 

ರಾಮ್ ಚರಣ್ ಮತ್ತು ಉಪಾಸನಾ ಜೂನ್ 20, 2023 ರಂದು ತಮ್ಮ ಪುಟ್ಟ ಮೆಗಾ ರಾಜಕುಮಾರಿಯನ್ನು ಸ್ವಾಗತಿಸಿದ್ದರು. ತಮ್ಮ ಮುದ್ದಾದ ಮಗುವಿಗೆ ದಂಪತಿ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರಿಟ್ಟರು. ಅಂದಿನಿಂದ, ಈ ಕ್ಯೂಟ್ ಕಪಲ್ಸ್ ತಮ್ಮ ಮಗಳೊಂದಿಗಿನ ಸಂತೋಷದ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. . 
 

ಪುಟ್ಟ ಮಗಳ ತಂದೆ -ತಾಯಿಯಾಗಿ ಪೋಷಕರ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೂ, ರಾಮ್ ಮತ್ತು ಉಪಾಸನಾ ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಸಹ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಪೂಜೆ, ಸೋಶಿಯಲ್ ವರ್ಕ್, ಮದುವೆ ಸಮಾರಂಭಗಳಿಗೆ ದಂಪತಿಗಳು ಹಾಜರಾಗಲು ಮರೆಯೋದಿಲ್ಲ. 
 

Latest Videos

click me!