ಡೈಲಾಗ್ ಕಿಂಗ್ ಮೋಹನ್ ಬಾಬು ತಮ್ಮ ಮುಂಗೋಪದಿಂದಾಗಿ ಕರಿಯರ್‌ನ ಆರಂಭದಲ್ಲಿ ಒಂದು ದೊಡ್ಡ ಹಿಟ್ ಸಿನಿಮಾವನ್ನು ಕಳೆದುಕೊಂಡಿದ್ದರು. ಆ ಸಿನಿಮಾದಿಂದ ಅವರನ್ನು ತೆಗೆದು ಮೆಗಾಸ್ಟಾರ್ ಚಿರಂಜೀವಿಯನ್ನು ಹಾಕಿಕೊಳ್ಳಲಾಗಿತ್ತು. ಅಷ್ಟಕ್ಕೂ ಆ ಸಿನಿಮಾ ಯಾವುದು? ಆ ಘಟನೆ ನಡೆದಿದ್ದು ಹೇಗೆ? ಇಲ್ಲಿದೆ ವಿವರ.
45 ವರ್ಷಗಳ ಸಿನಿ ಜೀವನದಲ್ಲಿ 500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರೋ ಮೋಹನ್ ಬಾಬು
ಟಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬೆಳೆದ ನಟರಲ್ಲಿ ಮೋಹನ್ ಬಾಬು ಕೂಡ ಒಬ್ಬರು. ಅವರು ಹೀರೋ ಆಗಬೇಕೆಂದು ಚಿತ್ರರಂಗಕ್ಕೆ ಬಂದರೂ, ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರು. ಅವಕಾಶಗಳಿಗಾಗಿ ಅಲೆದಾಡಿದ ನಂತರ, ಖಳನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿದ ನಂತರ, ಹೀರೋ ಆಗಿ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದರು. 45 ವರ್ಷಗಳ ವೃತ್ತಿಜೀವನದಲ್ಲಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ, ನಿರ್ಮಾಪಕ, ಉದ್ಯಮಿ ಹಾಗೂ ರಾಜಕಾರಣಿಯಾಗಿಯೂ ಯಶಸ್ಸು ಕಂಡಿದ್ದಾರೆ. ಚಿತ್ರರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಮೋಹನ್ ಬಾಬುಗೆ ಯಾವಾಗಲೂ ಪೈಪೋಟಿ ಇತ್ತು.
26
ಮೋಹನ್‌ಬಾಬು ಮುಂಗೋಪದಿಂದ ಕೈತಪ್ಪಿದ ಬ್ಲಾಕ್ ಬಸ್ಟರ್ ಸಿನಿಮಾ
ಚಿರಂಜೀವಿ ಮತ್ತು ಮೋಹನ್ ಬಾಬು ನಡುವೆ ಹಲವು ವಿಚಾರಗಳಲ್ಲಿ ಸ್ಪರ್ಧೆಯ ವಾತಾವರಣವಿತ್ತು. ಕೆಲವೊಮ್ಮೆ ಇಬ್ಬರ ನಡುವೆ ಸಂಘರ್ಷವೂ ನಡೆಯುತ್ತಿತ್ತು. ಮೋಹನ್ ಬಾಬು ಅವರ ಮುಂಗೋಪದಿಂದಾಗಿ, ಒಂದು ಸುವರ್ಣಾವಕಾಶ ಚಿರಂಜೀವಿ ಪಾಲಾಗಿತ್ತು. ವಿಶೇಷವೆಂದರೆ, ಮೋಹನ್ ಬಾಬು ಆ ಸಿನಿಮಾದ ಶೂಟಿಂಗ್‌ನಲ್ಲಿ ಸ್ವಲ್ಪ ಭಾಗವಹಿಸಿದ ನಂತರ ಅವರನ್ನು ಚಿತ್ರದಿಂದ ತೆಗೆದುಹಾಕಿ, ಚಿರಂಜೀವಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?
36
'ಇಂಟಿಗುಟ್ಟು' ಸಿನಿಮಾ
ಖ್ಯಾತ ನಿರ್ದೇಶಕ ಕೆ. ಬಾಪಯ್ಯ ಅವರ ನಿರ್ದೇಶನದಲ್ಲಿ 'ಇಂಟಿಗುಟ್ಟು' ಸಿನಿಮಾ 1984ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಚಿರಂಜೀವಿ ಮತ್ತು ಸುಹಾಸಿನಿ ನಟಿಸಿದ್ದು, ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಈ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಮೋಹನ್ ಬಾಬು. ಒಂದು ದಿನ ಮೋಹನ್ ಬಾಬು ಶೂಟಿಂಗ್‌ಗೆ ಹೋದಾಗ, ನಿರ್ದೇಶಕರು ಕೈಕಾಲ ಸತ್ಯನಾರಾಯಣ ಅವರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಸತ್ಯನಾರಾಯಣ ಅವರಿಗೆ ಜ್ವರವಿದ್ದ ಕಾರಣ, ಅವರ ಭಾಗವನ್ನು ಬೇಗ ಮುಗಿಸಿ ಕಳುಹಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದರು. ಹೀಗಾಗಿ ಮೋಹನ್ ಬಾಬುಗೆ ಸ್ವಲ್ಪ ಹೊತ್ತು ಕಾಯಲು ಹೇಳಿದರು.
ಆದರೆ, 'ನನ್ನನ್ನೇ ಕಾಯಿಸುತ್ತೀರಾ?' ಎಂದು ಕೋಪಗೊಂಡ ಮೋಹನ್ ಬಾಬು, 'ನಾನು ಹೊರಟು ಹೋಗುತ್ತೇನೆ' ಎಂದು ಬೆದರಿಕೆ ಹಾಕಿದರಂತೆ. ಇದಕ್ಕೆ ತಲೆಕೆಡಿಸಿಕೊಳ್ಳದ ನಿರ್ದೇಶಕರು 'ಸರಿ' ಎಂದರು. ಮೋಹನ್ ಬಾಬು ಕೋಪದಿಂದ ಹೊರನಡೆದ ಮರುದಿನವೇ, 'ನೀವು ನಾಳೆಯಿಂದ ಬರಬೇಡಿ, ಬೇರೆ ಹೀರೋನ ಹಾಕಿಕೊಂಡಿದ್ದೇವೆ' ಎಂದು ನಿರ್ದೇಶಕರು ಅವರಿಗೆ ಸುದ್ದಿ ಕಳುಹಿಸಿದರು. ಈ ವಿಚಾರವನ್ನು ಸ್ವತಃ ನಿರ್ದೇಶಕ ಬಾಪಯ್ಯ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
56
ಮೆಗಾ ಮತ್ತು ಮಂಚು ಕುಟುಂಬಗಳ ನಡುವಿನ ಮುಸುಕಿನ ಗುದ್ದಾಟ
ಟಾಲಿವುಡ್‌ನಲ್ಲಿ ಮೆಗಾ ಮತ್ತು ಮಂಚು ಕುಟುಂಬಗಳ ನಡುವೆ ಸ್ನೇಹ ಕಂಡರೂ, ತೆರೆಮರೆಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ಕಲೆಕ್ಷನ್ ಕಿಂಗ್ ಮೋಹನ್ ಬಾಬು ಹಲವು ಸಂದರ್ಭಗಳಲ್ಲಿ ಸ್ನೇಹಿತರಂತೆ ಕಂಡರೂ, ಇಬ್ಬರ ನಡುವಿನ ವಿವಾದಗಳು ಆಗಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಸಿನಿಮಾಗಳ ಪೈಪೋಟಿ ಮಾತ್ರವಲ್ಲದೆ, ಚಿತ್ರರಂಗದ ಹಲವು ವಿಚಾರಗಳಲ್ಲಿ ಇವರ ನಡುವಿನ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದವು.
66
90ರ ದಶಕದಿಂದಲೂ ಚಿರು-ಮೋಹನ್ ಬಾಬು ನಡುವೆ ಪೈಪೋಟಿ
90ರ ದಶಕದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ನಾಗಾಲೋಟವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. 'ಖೈದಿ' ಸಿನಿಮಾದ ನಂತರ ಅವರು ಸತತ ಯಶಸ್ಸಿನೊಂದಿಗೆ ಮುನ್ನುಗ್ಗಿದರು. ಅದರಲ್ಲೂ ಕೋದಂಡರಾಮಿ ರೆಡ್ಡಿ ನಿರ್ದೇಶನದಲ್ಲಿ ಬಂದ ಚಿರಂಜೀವಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದವು. 'ಗ್ಯಾಂಗ್ ಲೀಡರ್', 'ಮುತ್ತಾ ಮೇಸ್ತ್ರಿ'ಯಂತಹ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಆ ಸಮಯದಲ್ಲಿ ಮೋಹನ್ ಬಾಬು ಕೂಡ ಸ್ಟಾರ್ ಹೀರೋ ಆಗಿದ್ದರು. ಅವರೂ ಹಿಟ್ ಸಿನಿಮಾಗಳನ್ನು ನೀಡಿದರೂ, ಚಿರಂಜೀವಿ ಅವರ ರೇಂಜ್ ತಲುಪಲು ಸಾಧ್ಯವಾಗಲಿಲ್ಲ. ಇಬ್ಬರ ನಡುವಿನ ಈ ಪೈಪೋಟಿ ಅಂದಿನಿಂದ ಇಂದಿನವರೆಗೂ ಮುಂದುವರಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.