ನಟಿ ಪೂನಮ್ ಪಾಂಡೆ ಗಟ್ಟಿ ನಿರ್ಧಾರ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ಅಭಿಮಾನಿಗಳು ಭೇಷ್ ಎಂದು ಹೇಳಿದ್ದಾರೆ. ಅವರು ಮಾಡಿದ್ದ ನಿರ್ಧಾರ ಕೇಳಿದರೆ ನೀವೂ ಕೂಡ ಮೆಚ್ಚುತ್ತೀರಿ.
ಮಾಲ್ಡೀವ್ಸ್ ಸರ್ಕಾರದ ಸಚಿವರು ಹಾಗೂ ಸದಸ್ಯರು ಭಾರತೀಯರು ಹಾಗೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಆಗಿದೆ. ಬರೀ ಬಾಯಿ ಮಾತಿನಲ್ಲಿ ಇದನ್ನು ಹೇಳುತ್ತಿಲ್ಲ. ಈಗಾಗಲೇ ಮಾಲ್ಡೀವ್ಸ್ ಟ್ರಿಪ್ ದೊಡ್ಡ ಪ್ರಮಾಣದಲ್ಲಿ ರದ್ದಾಗುತ್ತಿದೆ ಎಂದು ಟ್ರಾವೆಲ್ ವೆಬ್‌ಸೈಟ್‌ಗಳು ಮಾಹಿತಿ ನೀಡಿವೆ.
ಈಗಾಗಲೇ ಕೆಲವು ಸ್ಟಾರ್‌ಗಳು ತಮ್ಮ ಮಾಲ್ಡೀವ್ಸ್ ಟ್ರಿಪ್ ರದ್ದು ಮಾಡಿರುವ ಸಂಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಸಾಲಿಗೆ ಮಾದಕ ತಾರೆ ಪೂನಮ್ ಪಾಂಡೆ ಕೂಡ ಸೇರಿದ್ದಾರೆ. ತಮ್ಮ ಮುಂದಿನ ಶೂಟ್‌ಗಾಗಿ ತಾವು ಮಾಲ್ಡೀವ್ಸ್‌ಗೆ ಪ್ರಯಾಣ ಮಾಡಬೇಕಿತ್ತು. ಆದರೆ, ಅದನ್ನು ರದ್ದು ಮಾಡಿದ್ದೇನೆ ಎಂದು ಪೂನಮ್ ಪಾಂಡೆ ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾದಕ ಚಿತ್ರದೊಂದಿಗೆ ಅವರು ಇದನ್ನು ಹಂಚಿಕೊಂಡಿದ್ದಾರೆ. ಇನ್ನೆಂದೂ ತಾವು ಮಾಲ್ಡೀವ್ಸ್‌ಗೆ ಕಾಲಿಡೋದಿಲ್ಲ ಎಂದು ಬರೆದಿದ್ದಾರೆ.
ಮಾಲ್ಡೀವ್ಸ್ ಬದಲು ಇದೇ ಶೂಟ್‌ಅನ್ನು ಲಕ್ಷದ್ವೀಪದಲ್ಲಿ ಮಾಡಲಿದ್ದೇನೆ ಎಂದೂ ಪೂನಮ್ ಪಾಂಡೆ ಬರೆದುಕೊಂಡಿದ್ದು, ಈ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಈಗ ಮಾತ್ರವಲ್ಲ ಮುಂದೆಯೂ ಕೂಡ ಮಾಲ್ಡೀವ್ಸ್‌ನಲ್ಲಿ ನಾನು ಯಾವುದೇ ಶೂಟ್‌ಗಳನ್ನು ಇರಿಸಿಕೊಳ್ಳೋದಿಲ್ಲ ಎಂದು ಪೂನಮ್ ಪಾಂಡೆ ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಗಳು, ಇಲ್ಲಿಯವರೆಗೂ ನಾವು ನಿಮ್ಮ ಬಟ್ಟೆ ಮಾತ್ರ ಸಣ್ಣದು ಎಂದುಕೊಂಡಿದ್ದೆವು. ಆದರೆ, ನಮ್ಮ ಯೋಚನೆ ಸಣ್ಣದು ಎನ್ನುವುದು ಈಗ ಅರ್ಥವಾಗಿದೆ ಎಂದು ಬರೆದಿದ್ದಾರೆ.
ತಮ್ಮ ಪೋಸ್ಟ್‌ಅನ್ನು ಹಂಚಿಕೊಳ್ಳುವ ವೇಳೆ ಪೂನಮ್ ಪಾಂಡೆ ನೇಷನ್ ಫರ್ಸ್ಟ್ ಮತ್ತು ಎಕ್ಸ್‌ಪ್ಲೋರ್ ಇಂಡಿಯನ್ ಐಸ್ಲೆಂಡ್ ಎನ್ನುವ ಹ್ಯಾಶ್‌ಟ್ಯಾಗ್‌ಅನ್ನೂ ಅವರು ಬಳಸಿದ್ದಾರೆ.
ಅದರೊಂದಿಗೆ ತಮ್ಮ ಟ್ವೀಟ್‌ಅನ್ನು ಪ್ರಧಾನಮಂತ್ರಿಗಳ ಕಚೇರಿಗೂ ಟ್ಯಾಗ್ ಮಾಡುವ ಮೂಲಕ ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳ ಭಾರತ ದ್ವೇಷಕ್ಕೆ ಉತ್ತರ ನೀಡಿದ್ದಾರೆ.
ನಾನು ಮಾಲ್ಡೀವ್ಸ್‌ನಲ್ಲಿ ಶೂಟಿಂಗ್ ಮಾಡಲು ಇಷ್ಟಪಡುತ್ತೇನೆ, ಆದರೆ ನಾನು ಅಲ್ಲಿ ಮತ್ತೆ ಶೂಟ್ ಮಾಡುವುದಿಲ್ಲ. ನನ್ನ ಮುಂದಿನ ಚಿತ್ರೀಕರಣವನ್ನು ಮಾಲ್ಡೀವ್ಸ್‌ನಲ್ಲಿ ಚಿತ್ರೀಕರಿಸಲು ನನ್ನ ಟೀಮ್ ಇದ್ದವಾಗಿತ್ತು. ಆದರೆ, ಪ್ರಯಾಣ ಮಾಡೋದಿಲ್ಲ ಎಂದು ನಾನು ತಿಳಿಸಿದ್ದೇನೆ ಎಂದು ಪೂನಮ್ ಬರೆದಿದ್ದಾರೆ.
ಮಾಲ್ಡೀವ್ಸ್‌ನ ಬದಲು ಇದೇ ಶೂಟ್‌ಅನ್ನು ಲಕ್ಷದ್ವೀಪದಲ್ಲಿ ಮಾಡಲಿದ್ದೇನೆ. ನನ್ನ ಟೀಮ್ ಕೂಡ ಇದಕ್ಕೆ ಒಪ್ಪಿಕೊಂಡಿದೆ ಎಂದು ಪೂನಮ್ ಪಾಂಡೆ ಹೇಳಿದ್ದಾರೆ.
ಅದರೊಂದಿಗೆ ತಮ್ಮ ಟ್ರಾವೆಲ್ ಏಜೆಂಟ್ ಜೊತೆಗೆ ಈ ಕುರಿತಾಗಿ ಮಾತನಾಡಿರುವ ಸ್ಕ್ರೀನ್‌ಶಾಟ್‌ಅನ್ನು ಪೂನಮ್ ಪಾಂಡೆ ಹಂಚಿಕೊಂಡಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಚಿತ್ರಗಳನ್ನು ಪೋಸ್ಟ್ ಮಾಡಿದ ಬಳಿಕ ಮಾಲ್ಡೀವ್ಸ್ ಹಾಗೂ ಭಾರತದ ನಡುವೆ ತಿಕ್ಕಾಟ ಆರಂಭವಾಗಿದೆ.