Actress Life: ಗರ್ಭಿಣಿಯಾಗಿದ್ದಾಗಲೇ ಎರಡನೇ ಮದುವೆಯಾದ ನಟಿ; ಕನ್ನಡ ಸಿನಿಮಾದಲ್ಲಿಯೂ ನಟನೆ

Published : Dec 02, 2025, 02:41 PM IST

ದಕ್ಷಿಣ ಭಾರತದ ಖ್ಯಾತ ನಟಿ ವೈಯಕ್ತಿಕ ಬದುಕಿನ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರ ಎರಡನೇ ಮದುವೆ, ಗರ್ಭಿಣಿಯಾಗಿದ್ದಾಗಿನ ವದಂತಿಗಳು ಮತ್ತು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಕುರಿತು ಇದರಲ್ಲಿ ವಿವರಿಸಲಾಗಿದೆ.

PREV
15
ದಕ್ಷಿಣ ಭಾರತದ ಖ್ಯಾತ ನಟಿ

ದಕ್ಷಿಣ ಭಾರತದ ಖ್ಯಾತ ನಟಿ ಗರ್ಭಿಣಿಯಾಗಿದ್ದಾಗಲೇ ಎರಡನೇ ಮದುವೆಯಾದ್ರು ಎಂಬ ಗಾಸಿಪ್ ಹರಿದಾಡಿತ್ತು. ಸದ್ಯ ಒಂದು ಮಗುವಿನ ತಾಯಿಯಾಗಿರುವ ಸ್ಟಾರ್ ನಟಿ, ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಜನಪ್ರಿಯ ಸಿನಿಮಾದಲ್ಲಿಯೂ ಈ ನಟಿ ನಟಿಸಿದ್ದಾರೆ.

25
ಕನ್ನಡ ಸಿನಿಮಾದಲ್ಲಿಯೂ ನಟನೆ

23ನೇ ಫೆಬ್ರವರಿ 2017ರಂದು ಬಿಡುಗಡೆಯಾದ ಕನ್ನಡ ಸಿನಿಮಾಗೆ ಎಸ್.ಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 26-36 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ನಾಯಕಿಯಾಗಿ ಈ ನಟಿ ನಟಿಸಿದ್ದರು. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದರು. ಯಾರು ಈ ನಟಿ ಎಂದು ನೋಡೋಣ ಬನ್ನಿ.

35
ಅಮಲಾ ಪೌಲ್

ಅಮಲಾ ಪೌಲ್ ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ 'ಸಿಂಧು ಸಮವೇಲಿ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಸಿಂಧು ಸಮವೇಲಿಯಲ್ಲಿ ಮೋಡಿ ಮಾಡಿದ ಅಮಲಾ ಪೌಲ್ ಅವರಿಗೆ ಕಾಲಿವುಡ್ ಸಾಲು ಸಾಲು ಅವಕಾಶಗಳನ್ನು ನೀಡಿತು. ಈ ವೇಳೆ ಎಎಲ್ ವಿಜಯ್ ಜೊತೆ ಅಮಲಾ ಹೆಸರು ಕೇಳಿ ಬಂದಿತ್ತು. 2014ರಲ್ಲಿ ವಿಜಯ್ ಜೊತೆ ಅಮಲಾ ಪೌಲ್ ಮದುವೆಯಾಯ್ತು.

45
ಗಂಡು ಮಗುವಿನ ತಾಯಿ

ಕೌಟುಂಬಿಕ ಕಲಹ ಹಿನ್ನೆಲೆ 2017 ರಲ್ಲಿ ವಿಚ್ಛೇದನ ಪಡೆದುಕೊಂಡು ಬೇರೆಯಾದರು. 2023ರಲ್ಲಿ ಉದ್ಯಮಿ ಜಗತ್ ದೇಸಾಯಿ ಎಂಬವರನ್ನು ಅಮಲಾಪೌಲ್ ಮದುವೆಯಾದರು. 11ನೇ ಜೂನ್ 2024ರಂದು ಅಮಲಾ ಪೌಲ್ ಗಂಡು ಮಗುವಿನ ತಾಯಿಯಾದರು.

ಇದನ್ನೂ ಓದಿ: Amala Paul's Son: ಕ್ರಿಶ್ಚಿಯನ್‌ ಧರ್ಮದಂತೆ ಮಗನಿಗೆ ದೀಕ್ಷಾಸ್ನಾನ ಮಾಡಿಸಿದ ಹೆಬ್ಬುಲಿ ಸಿನಿಮಾ ನಟಿ ಅಮಲಾ ಪೌಲ್;‌ Photos

55
ಗರ್ಭಿಣಿ

ಎರಡನೇ ಮದುವೆ ವೇಳೆ ಅಮಲಾ ಪೌಲ್ ಗರ್ಭಿಣಿಯಾಗಿದ್ದರು ಎಂಬ ವದಂತಿಗಳು ಕೇಳಿ ಬಂದಿದ್ದವು. ಮದುವೆ ಫೋಟೋದಲ್ಲಿ ಅಮಲಾ ಪೌಲ್ ಬೇಬಿ ಬಂಪ್ ಕಾಣಿಸುತ್ತಿತ್ತು. ನೀಲತಾಮರ, ವೀರಶೇಖರನ್,ಮೈನಾ, ಹೆಬ್ಬುಲಿ, ನಾಯಕ್, ಇದ್ದರಮ್ಮಾಯಿಲತೋ ಸೇರಿದಂತೆ ತಮಿಳು, ಮಲಯಾಳ, ಕನ್ನಡ, ತೆಲಗು ಮತ್ತು ಹಿಂದಿ ಸಿನಿಮಾಗಳಲ್ಲಿ ಅಮಲಾ ಪೌಲ್ ನಟಿಸಿದ್ದಾರೆ.

ಇದನ್ನೂ ಓದಿ : ಅವ್ನಿಗೆ ಸಿಕ್ಕಾಪಟ್ಟೆ ಅರ್ಜೆಂಟ್​ ಎನ್ನುತ್ತಲೇ ಮದ್ವೆಗೂ ಮುನ್ನ ಗರ್ಭಿಣಿಯಾದ ಗುಟ್ಟು ಬಿಚ್ಚಿಟ್ಟ ಹೆಬ್ಬುಲಿ ನಟಿ ಅಮಲಾ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories