ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?

Published : Feb 07, 2026, 09:20 AM IST

ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ಮೋಸ ಮಾಡಿದ್ದರು. ಕಾರ್ ಕೊಡುತ್ತೇನೆ ಎಂದು ಮಾತು ತಪ್ಪಿದ್ದರು. ಇದರಿಂದ ಬೇಸರಗೊಂಡ ಚಿರಂಜೀವಿಗೆ, ಅವರ ತಂದೆ ಮರೆಯಲಾಗದ ಉಡುಗೊರೆ ನೀಡಿದ್ದರು.

PREV
16
ಯಾವುದೇ ಹಿನ್ನೆಲೆಯಿಲ್ಲದೇ ಬಂದು ಮೆಗಾ ಸ್ಟಾರ್ ಆದ ಚಿರಂಜೀವಿ
ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದ ಚಿರಂಜೀವಿ, ಇಂದು 'ಮೆಗಾ' ಎಂಬ ಮಹಾವೃಕ್ಷವಾಗಿ ಬೆಳೆದಿದ್ದಾರೆ. ಈಗ ಮೆಗಾ ಕುಟುಂಬದಲ್ಲಿ ಸುಮಾರು ಹತ್ತು ಮಂದಿ ಹೀರೋಗಳಿದ್ದಾರೆ. ಇತ್ತೀಚೆಗೆ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಮೂಲಕ ಇಂಡಸ್ಟ್ರಿ ಹಿಟ್ ನೀಡಿದ ಅವರು, ನಿರ್ದೇಶಕ ಅನಿಲ್ ರವಿಪುಡಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
26
ಚಿರಂಜೀವಿಗೆ ಕಾರಿನ ಜತೆ ಹಲವಾರು ನೆನಪುಗಳಿವೆ
ಚಿರಂಜೀವಿ ಜೀವನದಲ್ಲಿ ಕಾರಿಗೆ ವಿಶೇಷ ಸ್ಥಾನವಿದೆ. ಅದರ ಹಿಂದೆ ಮರೆಯಲಾಗದ ನೆನಪುಗಳಿವೆ. 1978ರಲ್ಲಿ ನಟರಾದ ಚಿರು, 'ಪುನಾದಿ ರಾಳ್ಳು' ಮೊದಲ ಚಿತ್ರವಾದರೂ 'ಪ್ರಾಣಂ ಖರೀದು' ಮೊದಲು ಬಿಡುಗಡೆಯಾಯಿತು. ಆ ನಂತರ ಒಂದೇ ವರ್ಷದಲ್ಲಿ ಎಂಟು ಸಿನಿಮಾಗಳನ್ನು ಮಾಡಿದ್ದರು. ಆದರೆ ಮೊದಲ ಕಾರು ಖರೀದಿಸಿದ್ದರ ಹಿಂದೆ ಒಂದು ಮೋಸದ ಕಥೆಯಿದೆ.
36
1979ರಲ್ಲಿ ಚಿರು 'ಐ ಲವ್ ಯೂ' ಚಿತ್ರದಲ್ಲಿ ನಟಿಸಿದ್ದ ಚಿರು
1979ರಲ್ಲಿ ಚಿರು 'ಐ ಲವ್ ಯೂ' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ನಿರ್ಮಾಪಕ ನಾರಾಯಣ ಬಳಿ ಫಿಯೆಟ್ ಕಾರು ಇತ್ತು. ಅದನ್ನು ನೋಡಿ ಚಿರಂಜೀವಿ ಇಷ್ಟಪಟ್ಟಿದ್ದರು. ನಿನ್ನ ನಟನೆ ಇಷ್ಟವಾದರೆ ಈ ಕಾರನ್ನು ನಿನಗೆ ಗಿಫ್ಟ್ ಕೊಡುತ್ತೇನೆ ಎಂದು ನಿರ್ಮಾಪಕ ಹೇಳಿದ್ದರು. ಆದರೆ ಸಿನಿಮಾ ರಿಲೀಸ್ ಆದ ಮೇಲೆ ನಿರ್ಮಾಪಕ ಮಾತು ತಪ್ಪಿದರು. ಇದರಿಂದ ಚಿರಂಜೀವಿ ತುಂಬಾ ನಿರಾಶೆಗೊಂಡಿದ್ದರು.
46
ಮಗನಿಗೆ ಹೊಚ್ಚಹೊಸ ಫಿಯೆಟ್ ಕಾರು ಗಿಫ್ಟ್ ನೀಡಿದ ಚಿರಂಜೀವಿ ತಂದೆ
ಮಗನ ಬೇಸರ ನೋಡಿದ ತಂದೆ ವೆಂಕಟರಾವ್, ತಮ್ಮ ಸ್ವಂತ ಹಣದಿಂದ ಹೊಚ್ಚಹೊಸ ಫಿಯೆಟ್ ಕಾರು ಖರೀದಿಸಿ ಉಡುಗೊರೆಯಾಗಿ ನೀಡಿದರು. ಅದೇ ಚಿರಂಜೀವಿಯ ಮೊದಲ ಕಾರು. ಪತ್ನಿ ಸುರೇಖಾ ಜೊತೆ ಚೆನ್ನೈ ಬೀದಿಗಳಲ್ಲಿ ಇದೇ ಕಾರಿನಲ್ಲಿ ಸುತ್ತಾಡಿದ್ದರಂತೆ. ನಂತರ ಮಾರುತಿ 800 ಕಾರು ಖರೀದಿಸಿದರು. ಟಾಲಿವುಡ್‌ನಲ್ಲಿ ಆ ಕಾರು ಖರೀದಿಸಿದ ಮೊದಲ ವ್ಯಕ್ತಿ ತಾನೇ ಎಂದು ಚಿರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
56
ಚಿರಂಜೀವಿ ಬಳಿ ಹಲವು ಕಾರು ಕಲೆಕ್ಷನ್‌ಗಳಿವೆ

ನಂತರ ಚಿರಂಜೀವಿ ಲ್ಯಾಂಡ್ ಕ್ರೂಸರ್, ಮರ್ಸಿಡಿಸ್ ಬೆಂಝ್, ಟೊಯೊಟಾ ಸೆರಾದಂತಹ ಕಾರುಗಳನ್ನು ಖರೀದಿಸಿದರು. ಸದ್ಯ ಅವರ ಬಳಿ ಬೆಂಝ್, ಬಿಎಂಡಬ್ಲ್ಯು, ರೋಲ್ಸ್ ರಾಯ್ಸ್ ಕಾರುಗಳಿವೆ. 

66
ವಿಶ್ವಂಭರ ಚಿತ್ರಕ್ಕೆ ಸಜ್ಜಾಗುತ್ತಿರುವ ಚಿರಂಜೀವಿ

ಇತ್ತೀಚೆಗೆ 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಮೂಲಕ ಸುಮಾರು 300 ಕೋಟಿ ರೂ. ಗಳಿಸಿ ಇಂಡಸ್ಟ್ರಿ ಹಿಟ್ ನೀಡಿದರು. ಸದ್ಯ ಅವರು ಬಾಬಿ ನಿರ್ದೇಶನದ 'ವಿಶ್ವಂಭರ' ಚಿತ್ರಕ್ಕಾಗಿ ಸಿದ್ಧರಾಗುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories