The Right Stuff
ದ ರೈಟ್ ಸ್ಟಫ್(1983): ಫಿಲಿಪ್ ಕೌಫ್‌ಮನ್ 1979ರಲ್ಲಿ ಇದೇ ಹೆಸರಲ್ಲಿ ಬಂದ ಪುಸ್ತಕವನ್ನೇ ಸಿನಿಮಾವನ್ನಾಗಿ ಮಾಡಿದ್ದರು. ಅಮೆರಿಕದ ಮೊಟ್ಟಮೊದಲ ಮಾನವ ಸಹಿತ ಗಗನಯಾನದ 7 ಮಂದಿ ಸೇನಾ ಪೈಲಟ್‌ಗಳ ಕುರಿತಾಗಿ ಚಿತ್ರ ಮೂಡಿಬಂದಿದೆ. ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ವಿಫಲವಾದರೂ, 8 ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು, 4ರಲ್ಲಿ ಗಲುವು ಕಂಡಿತ್ತು. ಅಮೇಜಾನ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದು.
For All Mankind
ಫಾರ್ ಆಲ್ ಮ್ಯಾನ್‌ಕೈಂಡ್ (1989): ನಾಸಾದ ದೃಶ್ಯಾವಳಿಗಳನ್ನು ಬಳಸಿಕೊಂಡು ತೆರೆಗೆ ಬಂದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಸ್ಪೇಸ್ ರೇಸ್ ಅನ್ನೋದು ಕೊನೆಯೇ ಆಗದಿದ್ದರೆ, ಅದರಿಂದಾಗುವ ಪರಿಣಾಮವೇನು ಅನ್ನೋದನ್ನು ಇದರಲ್ಲಿ ವಿವರಿಸಲಾಗಿದೆ. ಅದರೊಂದಿಗೆ ಅಮೆರಿಕದ ಅಪೊಲೊ ಸಾಹಸಗಳನ್ನು ವಿವರಿಸಲಾಗಿದೆ. ಅಮೇಜಾನ್‌ನಲ್ಲಿ ಈ ಚಿತ್ರವಿದೆ.
Apollo 13
ಅಪೊಲೋ 13 (1995): ಟಾಮ್ ಹಾಂಕ್ಸ್ ನಟನೆಯ ಚಿತ್ರ. ಕಮಾಂಡರ್ ಜಿಮ್ ಲೊವೆಲ್ ಪಾತ್ರಕ್ಕೆ ಜೀವ ತುಂಬಿದ್ದರು. ಚಂದ್ರ ಯೋಜನೆಯಲ್ಲಿ ಹಾದಿಯಲ್ಲಿ ಆದ ತಾಂತ್ರಿಕ ಸಮಸ್ಯೆ ಅದರಿಂದ ಜೀವಕ್ಕೆ ಅಪಾಯವಾಗುವಾಗ, ಅವರು ಭೂಮಿಗೆ ಹಿಂತಿರುಗಿ ಬರುವ ಕಥೆ ಹೊಂದಿದೆ. ಅಮೇಜಾನ್ ಹಾಗೂ ಯೂಟ್ಯೂಬ್‌ನಲ್ಲಿ ಈ ಚಿತ್ರವಿದೆ.
Hidden Figures
ಹಿಡನ್ ಫಿಗರ್ಸ್ (2016): ನಾಸಾದ ವಿಜ್ಞಾನಿಗಳು ಎಂದರೆ ಬರೀ ಬಿಳಿ ಬಣ್ಣದವರು ಎನ್ನುವ ಕಲ್ಪನೆಗಳನ್ನು ಅಳಿಸಿಹಾಕಿದಂತ ಸಿನಿಮಾ. ನಾಸಾದ ಆರಂಭಿಕ ಯೋಜನೆಗಳಲ್ಲಿ ಕೆಲಸ ಮಾಡಿದ್ದ ಮೂವರು ಕಪ್ಪು ವರ್ಣೀಯ ಇಂಜಿನಿಯರ್‌ಗಳ ಕಥೆ ಸಿನಿಮಾದ ಜೀವಾಳ. ಅಮೇಜಾನ್‌ನಲ್ಲಿ ಈ ಚಿತ್ರವಿದೆ.
The Last Man on the Moon
ದ ಲಾಸ್ಟ್ ಮ್ಯಾನ್ ಆನ್ ದ ಮೂನ್ (2016): ಅಮೆರಿಕದ ಕೊನೆಯ ಅಪೊಲೊ ಮಿಷನ್‌ನ ಕುರಿತಾದ ಚಿತ್ರ ಇದು. ಈ ಯೋಜನೆ ಮಿಷನ್ ಕಮಾಂಡರ್ ಎಗ್ಯುನ್ ಸೆರನ್ ಅವರ ಜೀವನವನ್ನು ಹೇಗೆ ಬದಲಿಸಿತು ಎನ್ನುವ ಕಥೆ ಹೊಂದಿದೆ. ಚಂದ್ರ ಕಾರ್ಯಾಚರಣೆಗೆ ಅಮೆರಿಕ ಸುರಿಯುತ್ತಿರುವ ಹಣದ ಬಗ್ಗೆ ಬಹುದೊಡ್ಡ ಆಕ್ಷೇಪಗಳು ವ್ಯಕ್ತವಾದ ಅಂಶಗಳನ್ನೂ ಇದು ಹೊಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ನೋಡಬಹುದು.
The Farthest
ದಿ ಫಾರ್ತೆಸ್ಟ್ (2017): 1977ರಲ್ಲಿ ನಾಸಾ ಎರಡು ಗಾಢಾಂತರಿಕ್ಷ ನೌಕೆಗಳಾದ ವೋಯೆಜರ್-1 ಹಾಗೂ ವೋಯೆಜರ್-2ಅನ್ನು ಉಡಾವಣೆ ಮಾಡಿತ್ತು. 70ರ ದಶಕದಲ್ಲಿ ಅಮೆರಿಕದ ಇಂಜಿನಿಯರಿಂಗ್ ಅದ್ಭುತ ವೊಯೇಜರ್ ನೌಕೆ. ಇಂದು ಈ ಎರಡೂ ನೌಕೆಗಳು ನಾವು ನಿರೀಕ್ಷೆಯೇ ಮಾಡದಷ್ಟು ದೂರಕ್ಕೆ ಸಾಗಿವೆ. ಅದರ ಕುರಿತಾದ ಸಿನಿಮಾ ಇದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿದೆ.
The Mars Generation
ದ ಮಾರ್ಸ್ ಜನರೇಷನ್ (2017): ಮಾನವ ಸಹಿತ ಬಾಹ್ಯಾಕಾಶ ಪರಿಶೋಧನೆಯ ಕಥೆ. ಈ ಸಾಕ್ಷ್ಯಚಿತ್ರದಲ್ಲಿ ಮುಂದಿನ ಯುಗದ ಬಾಹ್ಯಾಕಾಶದ ಕುತೂಹಲ ಹೊಂದಿರುವ ಹುಡುಗರ ಕಥೆಯನ್ನು ಹೊಂದಿದೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.
Salyut 7
ಸಲ್ಯುತ್ 7 (2017): ರಷ್ಯಾದ ಚಿತ್ರ ಇದಾಗಿದೆ. ಬಾಹ್ಯಾಕಾಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುವ ಕಥೆಯನ್ನು ಇದು ಒಳಗೊಂಡಿದೆ. ರಷ್ಯಾದ ಸ್ಪೇಸ್ ಪ್ರೋಗ್ರಾಮ್ ಬಗ್ಗೆ ಬಂದಿರುವ ಕೆಲವೇ ಕೆಲವು ಬಿಗ್ ಬಜೆಟ್ ಸಿನಿಮಾ ಇದಾಗಿದೆ.
Mercury 13
ಮರ್ಕ್ಯುರಿ 13 (2018): "ಮರ್ಕ್ಯುರಿ 13" ಸಾಕ್ಷ್ಯಚಿತ್ರವು ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಸಂಭಾವ್ಯ ಅಭ್ಯರ್ಥಿಗಳಾಗಿ ಪರೀಕ್ಷಿಸಲ್ಪಟ್ಟ ಮಹಿಳೆಯರ ಗುಂಪನ್ನು ಹೈಲೈಟ್ ಮಾಡುತ್ತದೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.
First Man
ಫರ್ಸ್ಟ್ ಮ್ಯಾನ್ (2018): ನೀಲ್ ಆರ್ಮ್‌ಸ್ಟ್ರಾಂಗ್‌ಅವರ ಅಪೊಲೊ 11 ಮಿಷನ್‌ನ ಕಥೆ. ಆರಂಭದಲ್ಲಿ ಬೋರ್ ಹೊಡೆಸಿದರೂ, ಕೊನೆಯಲ್ಲಿ ಚಂದ್ರನ ಮೇಳೆ ಆರ್ಮ್‌ಸ್ಟ್ರಾಂಗ್ ಇಳಿಯುವ ದೃಶ್ಯಗಳನ್ನು ಮನೋಜ್ಞವಾಗಿ ತೋರಿಸಲಾಗಿದೆ. ಅಮೆಜಾನ್‌ನಲ್ಲಿ ಈ ಚಿತ್ರವಿದೆ.
Apollo 11
ಅಪೊಲೊ 11 (2019): ಅಮೆರಿಕ 1969ರಲ್ಲಿ ಮಾಡಿದ ಚಂದ್ರಯಾನ ಹಾಗೂ ಚಂದ್ರನ ಮೇಲೆ ಮಾನವನ ಲ್ಯಾಂಡಿಂಗ್ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಆರ್ಮ್‌ಸ್ಟ್ರಾಂಗ್ ಅವರ ನೈಜ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಅಮೆಜಾನ್‌ನಲ್ಲಿ ಈ ಚಿತ್ರವಿದೆ.
Mission Mangal
ಮಿಷನ್ ಮಂಗಲ್ (2019): ಇನ್ನು ಭಾರತದ ಮಟ್ಟಿಗೆ ಮಿಷನ್ ಮಂಗಲ್ ಸಿನಿಮಾ. ಮಂಗಳನ ಕಕ್ಷೆಗೆ ಆರ್ಬಿಟರ್‌ಅನ್ನು ಸೇರಿಸಿದ ಕಥೆ ಇದು ಹೊಂದಿದ್ದು, ಹಾಟ್‌ಸ್ಟಾರ್‌ನಲ್ಲಿ ಈ ವಿತ್ರ ವೀಕ್ಷಿಸಬಹುದು.