ಆ ನಟನಿಂದ ಬ್ರಹ್ಮಾನಂದಂ ಕೆರಿಯರ್ ಕ್ಲೋಸ್? ಎಲ್ಲ ಮುಗೀತು ಅಂದ್ಕೊಂಡಿದ್ದಾಗ ನಡೆದಿದ್ದೇನು?

Published : Apr 19, 2026, 09:46 AM IST

ಒಬ್ಬ ನಟನಿಂದಾಗಿ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರ ಕೆರಿಯರ್​ ಬಹುತೇಕ ಮುಗಿದೇ ಹೋಗಿತ್ತು. ಆ ನಟನ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಾನಂದಂ ಹೇಳಿದ ಮಾತುಗಳು ಈಗ ವೈರಲ್ ಆಗಿವೆ. ಯಾರದು ಆ ನಟ? ಈ ಫೋಟೋ ಸ್ಟೋರಿಯಲ್ಲಿದೆ ಮಾಹಿತಿ.

PREV
15
ಬ್ರಹ್ಮಾನಂದಂ ಬಾಲಿವುಡ್‌ನ ನಂಬರ್ 1 ಹಾಸ್ಯ ನಟ
ಬಹಳ ಕಾಲ ಟಾಲಿವುಡ್‌ನಲ್ಲಿ ಬ್ರಹ್ಮಾನಂದಂ ನಂಬರ್ 1 ಹಾಸ್ಯನಟರಾಗಿ ಮಿಂಚಿದ್ರು. ಕೇವಲ ಬ್ರಹ್ಮಾನಂದಂ ಕಾಮಿಡಿಗೋಸ್ಕರವೇ ಗೆದ್ದ ಸಿನಿಮಾಗಳಿವೆ. ಬೆಳ್ಳಿತೆರೆ ಮೇಲೆ ಬ್ರಹ್ಮಾನಂದಂ ಕಾಣಿಸಿಕೊಂಡರೆ ಸಾಕು, ಸ್ಟಾರ್ ಹೀರೋಗಳಷ್ಟೇ ರೆಸ್ಪಾನ್ಸ್ ಸಿಗುತ್ತಿತ್ತು. ಸಂದರ್ಶನವೊಂದರಲ್ಲಿ ತ್ರಿವಿಕ್ರಮ್, 'ಒಂದೇ ಸೆಕೆಂಡ್‌ನಲ್ಲಿ ಬ್ರಹ್ಮಾನಂದಂ ನೂರಾರು ಹಾವಭಾವಗಳನ್ನು ತೋರಿಸಬಲ್ಲರು' ಎಂದು ಹೊಗಳಿದ್ದರು.
25
ಬ್ರಹ್ಮಾನಂದಂ ಕೆರಿಯರ್ ಕ್ಲೋಸ್ ಭೀತಿ?
ಆದರೆ, ಅಂತಹ ಬ್ರಹ್ಮಾನಂದಂ ಕೂಡ ಒಂದು ಸಮಯದಲ್ಲಿ ತಮ್ಮ ಕೆರಿಯರ್ ಮುಗಿದೇ ಹೋಯ್ತು ಎಂದು ಹೆದರಿದ್ದರು. ಅದೂ ಕೂಡ ಇನ್ನೊಬ್ಬ ಹಾಸ್ಯನಟನಿಂದ. ಆತ ಬೇರಾರೂ ಅಲ್ಲ, ಸುನೀಲ್. ಬ್ರಹ್ಮಾನಂದಂ ಹವಾ ಇದ್ದ ದಿನಗಳಲ್ಲೇ ಸುನೀಲ್ ಹಾಸ್ಯನಟನಾಗಿ ಮಿಂಚಲು ಆರಂಭಿಸಿದರು. ಒಂದು ಹಂತದಲ್ಲಿ ಸುನೀಲ್ ಅವರ ಕಾಮಿಡಿ ಪಂಚ್‌ಗಳು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಸೆಳೆದವು. ಇದರಿಂದ ಅವರಿಗೆ ಸ್ಟಾರ್ ಕಾಮಿಡಿಯನ್ ಪಟ್ಟ ಸಿಕ್ಕಿತು.
35
ಅನಿರೀಕ್ಷಿತವಾಗಿ ಹೀರೋ ಆಗಿ ಬಡ್ತಿ ಪಡೆದ ಸುನೀಲ್
ಬ್ರಹ್ಮಾನಂದಂ ನಂತರ ಆ ಸ್ಥಾನ ಸುನೀಲ್ ಅವರದ್ದೇ ಎಂದು ಎಲ್ಲರೂ ಭಾವಿಸಿದ್ದರು. ಆಗಲೇ ಸುನೀಲ್ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡರು. ಅವರು ಹೀರೋ ಆಗಿ ಯು-ಟರ್ನ್ ಪಡೆದರು. ಹಾಸ್ಯ ಪಾತ್ರಗಳಿಗೆ ಗುಡ್‌ಬೈ ಹೇಳಿ ನಾಯಕನಾಗಿ ಸಿನಿಮಾ ಮಾಡಲು ಶುರು ಮಾಡಿದರು. ಕೆಲಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಎರಡು-ಮೂರು ಹಿಟ್ ಸಿನಿಮಾಗಳನ್ನೂ ಕೊಟ್ಟರು. ಇನ್ನು ಸುನೀಲ್ ಹೀರೋ ಆಗಿ ಸೆಟಲ್ ಆಗ್ತಾರೆ ಎನ್ನುವಾಗಲೇ, ಸರಣಿ ಸೋಲುಗಳು ಎದುರಾದವು.
45
ಹಾಸ್ಯನಟನಾಗಿ ಡಾಮೀನೇಟ್ ಮಾಡಿದ್ದ ಸುನೀಲ್‌
ಇದರಿಂದಾಗಿ ಸುನೀಲ್ ಮತ್ತೆ ಹಾಸ್ಯ ಚಿತ್ರಗಳು ಮತ್ತು ಹಾಸ್ಯ ಪಾತ್ರಗಳನ್ನು ಮಾಡಲು ಆರಂಭಿಸಿದರು. ಈ ಬಗ್ಗೆ ಬ್ರಹ್ಮಾನಂದಂ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ಸುನೀಲ್ ಹಾಸ್ಯನಟನಾಗಿ ಸ್ವಲ್ಪ ಗ್ಯಾಪ್ ಕೊಟ್ಟರು. ಇಲ್ಲದಿದ್ದರೆ ನಾವೆಲ್ಲಾ ತಟ್ಟೆ-ಬಟ್ಟೆ ಕಟ್ಟಿಕೊಂಡು ಹೋಗಬೇಕಿತ್ತು' ಎಂದು ತಮಾಷೆಯಾಗಿ ಹೇಳಿದ್ದರು. ಸುನೀಲ್ ಹಾಸ್ಯನಟನಾಗಿ ಅಷ್ಟೊಂದು ಡಾಮಿನೇಟ್ ಮಾಡಿದ್ದರು ಎಂದು ಬ್ರಹ್ಮಾನಂದಂ ಪರೋಕ್ಷವಾಗಿ ಹೇಳಿದ್ದರು.
55
ಹೊಸ ನಟರಿಂದಾಗಿ ಬ್ರಹ್ಮಾನಂದಂ ಹವಾ ಕೊಂಚ ಕಡಿಮೆಯಾಗಿದೆ
'ಸುನೀಲ್ ದನದ ಹಾಗೆ ದುಡಿಯುತ್ತಾರೆ, ಅದಕ್ಕಾಗಿಯೇ ನಟನಾಗಿ ಬೆಳೆದಿದ್ದಾರೆ' ಎಂದು ಬ್ರಹ್ಮಾನಂದಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೊಸ ಹಾಸ್ಯನಟರು ಬಂದಿದ್ದರಿಂದ, ಟಾಲಿವುಡ್‌ನಲ್ಲಿ ಸದ್ಯ ಬ್ರಹ್ಮಾನಂದಂ ಹವಾ ಕಡಿಮೆಯಾಗಿದೆ. ಹಾಸ್ಯನಟರಾದ ಸತ್ಯ, ವೆನ್ನೆಲ ಕಿಶೋರ್ ಅವರಂತಹ ಕಲಾವಿದರು ಈಗ ಮಿಂಚುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories