ಮಹಿಳೆಯರೇ ನಿಮ್ಮಿಷ್ಟದ ಕಾಂಡೋಮ್ ನೀವೇ ಖರೀದಿಸಿ ಎಂದ ಬಾಲಿವುಡ್ ನಟಿ

First Published | May 25, 2024, 12:14 PM IST

ತಮ್ಮ ವಿಶೇಷ ಪಾತ್ರಗಳ ಮೂಲಕವೇ ಮನೆ ಮಾತಾಗಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇದೀಗ  ತಮ್ಮ ಜಾಹೀರಾತಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಕಾಂಡೋಮ್ ಕಂಪನಿಯೊಂದರ ಜಾಹೀರಾತಿನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಸಿನಿಮಾ ಹಾಗೂ ಓಟಿಟಿಯಲ್ಲಿ ಕಾಣಿಸಿಕೊಳ್ಳುವ ರಾಧಿಕಾ ಆಪ್ಟೆ ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. ಸಿನಿಮಾ ಮತ್ತು ವೆಬ್‌ಸಿರೀಸ್‌ನಲ್ಲಿ ಬ್ಯುಸಿಯಾಗಿರುವ ನಟಿ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದೀಗ ರಾಧಿಕಾ ಆಪ್ಟೆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಇದರ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾಹೀರಾತಿನ ಜೊತೆಯಲ್ಲಿ ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಕುರಿತು ಕೆಲ ಮಾಹಿತಿಯನ್ನು ರಾಧಿಕಾ ಆಪ್ಟೆ ನೀಡಿದ್ದಾರೆ. ಮಹಿಳೆಯರೇ ನಿಮ್ಮಿಷ್ಟದ ಕಾಂಡೋಮ್ ನೀವೇ ಖರೀದಿಸಿ ಎಂದು ರಾಧಿಕಾ ಆಪ್ಟೆ ಮಹಿಳೆಯರಿಗೆ ಕರೆ ನೀಡಿದ್ದಾರೆ.

Tap to resize

ಕಾಂಡೋಮ್ ಎಂಬ ಪದ ಕೇಳಿದ್ರೆ ಈಗಲೂ ಜನರು ಮುಜುಗರಕ್ಕೆ ಒಳಗಾಗುತ್ತಾರೆ. ಮಹಿಳೆಯರು ಕಾಂಡೋಮ್ ಖರೀದಿಯ ನಿರ್ಧಾರವನ್ನು ತಮ್ಮ ಸಂಗಾತಿಯ ವಿವೇಚನೆಗೆ ಬಿಡುತ್ತಿರೋದು ಯಾಕೆ? ಈ ವಿಷಯದಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿರುತ್ತೆ ಎಂದು ಯಾರಿಗೂ ಯಾಕೆ ಅನ್ನಿಸಲ್ಲ ಎಂದು ರಾಧಿಕಾ ಆಪ್ಟೆ ಪ್ರಶ್ನೆ ಮಾಡಿದ್ದಾರೆ. 

ಯಾಕೆ ನಮಗೆ ಇದು ಬೇಕು ಅನ್ನಿಸಲ್ಲವಾ? ಕಾಂಡೋಮ್ ನಾವು ಫೀಲ್ ಮಾಡುತ್ತೇವೆ. ಹಾಗಾಗಿ ಕಾಂಡೋಮ್ ಖರೀದಿಯಲ್ಲಿಯೂ ನಮ್ಮ ನಿರ್ಧಾರ ಮುಖ್ಯವಾಗಿರುತ್ತದೆ. ಈ ವಿಷಯದಲ್ಲಿ ಮಹಿಳೆಯರೇ ಬೇರೆಯವರ ನಿರ್ಧಾರದ ಮೇಲೆ ನೀವು ಅವಲಂಬಿತರಾಗಬೇಡಿ. ನೀವೇ ಹೋಗಿ ನಿಮ್ಮಿಷ್ಟದ ಕಾಂಡೋಮ್ ಖರೀದಿಸಬೇಕು ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಓಟಿಟಿ ಪ್ಲಾಟ್‌ಫಾರಂನ ಒಂದು ಪ್ರೊಜೆಕ್ಟ್ ಬಗ್ಗೆ ಸರಿ ಸುಮಾರು 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. ಓಟಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬಿ-ಟೌನ್ ನಟಿಯಾಗಿದ್ದಾರೆ.
 

ನಟನೆ ಜೊತೆ ಮಾಡೆಲಿಂಗ್‌ನಲ್ಲಿಯೂ ರಾಧಿಕಾ ಆಪ್ಟೆ ಕೆಲಸ ಮಾಡಿಕೊಂಡಿದ್ದಾರೆ. ರಾಧಿಕಾ ನಿವ್ವಳ ಆಸ್ತಿ ಮೌಲ್ಯ 66 ಕೋಟಿ ರೂಪಾಯಿಗೂ ಅಧಿಕ ಎಂದು ವರದಿಯಾಗಿದೆ. ಮುಂಬೈ ಮತ್ತು ಲಂಡನ್‌ನಲ್ಲಿಯೂ ಲಕ್ಷುರಿಯಾದ ಮನೆಯನ್ನು ರಾಧಿಕಾ ಆಪ್ಟೆ ಹೊಂದಿದ್ದಾರೆ.

ಬದ್ಲಾಪುರ, ಹಂಟರ್, ಮಾಂಜಿ, ಫೋಬಿಯಾ, ಪರ್ಚಡ್, ಲಸ್ಟ್ ಸ್ಟೋರಿಸ್, ರಾತ್ ಅಕೇಲಿ ಹೈ, ಮೋನಿಕಾ, ಓ ಮೈ  ಡಾರ್ಲಿಂಗ್, ಎ ಕಾಲ್ ಆಫ್ ಸ್ಪೈ ಪ್ರಾಜೆಕ್ಟ್‌ಗಳಲ್ಲಿ ರಾಧಿಕಾ ಆಪ್ಟೆ ಕೆಲಸ ಮಾಡಿದ್ದಾರೆ. ರಾಧಿಕಾ ಆಪ್ಟೆ ನಿರ್ದೇಶಕರ ನಟಿ ಎಂದು ಗುರುತಿಸಿಕೊಳ್ಳುತ್ತಾರೆ.

Latest Videos

click me!