ಎದೆ ತೆರೆದ ಕೆಂಪು ಉಡುಗೆಯಲ್ಲಿ ಅರೆಬರೆ ತೋರಿಸಿ ಬೇಸಿಗೆ ತಾಪ ಹೆಚ್ಚಿಸಿದ ದಿಶಾ ಪಟಾಣಿ

Published : Mar 13, 2024, 03:37 PM IST

ಬಾಲಿವುಡ್ ನಟಿ ದಿಶಾ ಪಟಾಣಿ ತಮ್ಮ ಯೋಧ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆ ಇಂಟರ್‌ನೆಟ್‌ನಲ್ಲೂ ತಮ್ಮ ಅರೆಬರೆ ತರೆದ ಹೃದಯದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ ಈ ನಟಿ.

PREV
110
ಎದೆ ತೆರೆದ ಕೆಂಪು ಉಡುಗೆಯಲ್ಲಿ ಅರೆಬರೆ ತೋರಿಸಿ ಬೇಸಿಗೆ ತಾಪ ಹೆಚ್ಚಿಸಿದ ದಿಶಾ ಪಟಾಣಿ

ಬಾಲಿವುಡ್ ನಟಿ ದಿಶಾ ಪಟಾಣಿ ತಮ್ಮ ಯೋಧ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆ ಇಂಟರ್‌ನೆಟ್‌ನಲ್ಲೂ ತಮ್ಮ ಅರೆಬರೆ ತರೆದ ಹೃದಯ ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ ಈ ನಟಿ.

210

ಸಂಪೂರ್ಣ ಬೆನ್ನು ಕಾಣಿಸುವ ಎದೆ ಮಧ್ಯೆ ತೆರೆದಿರುವ ಕೆಂಪು ಬಣ್ಣದ ಧಿರಿಸು ಧರಿಸಿರುವ ದಿಶಾ ಈ ಫೋಟೋಗಳಿಂದಲೇ ಬೇಸಿಗೆಯ ತಾಪ ಹೆಚ್ಚಿಸಿದ್ದು, ಕೆಂಪು ಮೆಣಸಿನಕಾಯಿಯಂತೆ ಕಾಣಿಸ್ತಿದ್ದಾರೆ. 

310

ಫ್ಯಾಷನ್ ವಿಷಯದಲ್ಲಿ ಸದಾ ಕ್ಲಾಸಿ ಆಗಿರುವ ನಟಿ ಕೆಜಿಎಫ್ ನಟಿ ಮೌನಿ ರಾಯ್ ಜೊತೆಗಿನ ಸ್ನೇಹಕ್ಕೆ ಬಹಳ  ಹೆಸರಾಗಿದ್ದು,  ಇಬ್ಬರು ಸದಾ ಜೊತೆಯಾಗಿ ಮೋಜು ಮಸ್ತಿಯಲ್ಲಿ ತೊಡಗಿರುವ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

410

ಇನ್ನು ಸಿನಿಮಾ ಪ್ರಮೋಷನ್‌ನ ವೀಡಿಯೋವೊಂದರಲ್ಲಿ ದಿಶಾ ಪಟಾಣಿ ತನ್ನ ಕೋ ಸ್ಟಾರ್ ಸಿದ್ಧಾರ್ಥ್‌ ಮಲ್ಹೋತ್ರಾರನ್ನು ದೂರ ತಳ್ಳಿ ಸಹನಟಿ ರಾಶಿ ಖನ್ನಾ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರು ವೆರೈಟಿ ಕಾಮೆಂಟ್ ಮಾಡ್ತಿದ್ದಾರೆ.

510

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ವೀಡಿಯೋದಲ್ಲಿ ಕಾಣಿಸುತ್ತಿರುವ ದಿಶಾ ಪಟಾಣಿ ವರ್ತನೆಗೆ ಸಹ ನಟ ಸಿದ್ಧಾರ್ಥ್ ಮಲ್ಹೋತ್ರಾ ಶಾಕ್‌ನಿಂದ ನೋಡುವುದನ್ನು ಕಾಣಬಹುದಾಗಿದೆ. 

610
Disha Patani

ವೀಡಿಯೋ ನೋಡಿದ ಕೆಲವರು ಇವರಿಬ್ಬರದ್ದು ಬೇರೇನೋ ನಡೆಯುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.  ದಿಶಾ ಸಿದ್ಧಾರ್ಥ್‌ಗಿಂತ ರಾಶಿ ಖನ್ನಾ ಜೊತೆ ಖುಷಿಯಾಗಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

710


ಈ ಹಿಂದೆ ಸಿನಿಮಾ ಪ್ರಮೋಷನ್‌ಗಾಗಿ ರಾಶಿ ಖನ್ನಾ ಕೈ ಹಿಡಿದು ಸಾಗಿದ್ದಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಸಖತ್ ಟ್ರೋಲ್ ಆಗಿದ್ದರು.  ಕೆಲವರು ಸಿದ್ಧಾರ್ಥ್ ಪತ್ನಿ ಕಿಯರಾ ಅವರನ್ನು ಉಲ್ಲೇಖಿಸಿ ಹೆಲೋ ಸಿದ್ಧ್ ಆಕೆ ಕಿಯರಾ ಅಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. 

810
Disha Patani

ಅಂದಹಾಗೆ ದಿಶಾ ಪಟಾಣಿ ಧರಿಸಿರುವ ಈ ಕೆಂಪು ಬಣ್ಣದ ಧಿರಿಸಿನ ಬೆಲೆ 23 ಸಾವಿರ ರೂಪಾಯಿಗಳು. ಈ ದುಬಾರಿ ಡ್ರೆಸ್ ಧರಿಸಿ ಬೇಸಿಗೆ ಬಿಸಿಲ ತಾಪವನ್ನು ದಿಶಾ ಹೆಚ್ಚಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

910

ತಮ್ಮ ಟೋನ್ಡ್ ದೇಹವನ್ನು ಸದಾ ತೋರಿಸಲು ಇಷ್ಟ ಪಡುವ ನಟಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೀಗೆ ಅರೆಬರೆ ತೋರಿಸುವ ಫೋಟೋಗಳನ್ನು ಪೋಸ್ಟ್ ಮಾಡ್ತಿರ್ತಾರೆ. 

1010
Disha Patani

ಈ ರೆಡ್‌ ಸಾಟಿನ್ ಡ್ರೆಸ್‌ನಲ್ಲಿ ಫೋಟೋ ಹಾಕಿದ ನಟಿ ಯಾವ ಫೋಟೋ ಹಾಕಬೇಕೆಂದು ನಿರ್ಧರಿಸಲಾಗಲಿಲ್ಲ ಸೋ ಎಲ್ಲಾ ಫೋಟೋ ಪೋಸ್ಟ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories