ಆ್ಯಕ್ಟಿಂಗ್, ಡೈಲಾಗ್ ಬಂದರೆ ಸಾಕು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಎಲ್ಲವೂ ಒಂದೇ ಅಂದುಕೊಳ್ಳುವವರೇ ಹೆಚ್ಚು. ಆದರೆ ಒಂದೇ ಒಂದು ಡೈಲಾಗ್ ಸೀರಿಯಲ್‌ನಲ್ಲಿ ಹೇಗಿರುತ್ತೆ, ಸಿನಿಮಾದಲ್ಲಿ ಹೇಗಿರುತ್ತದೆ ಎನ್ನುವ ಬಗ್ಗೆ ಹೇಳಿದ್ದಾರೆ ನಟಿ ಅಂಕಿತಾ ಅಮರ್.
ಸೀರಿಯಲ್ ಕಲಾವಿದರು ಸಿನಿಮಾಕ್ಕೆ ಬರುವುದು ಇದೆ. ಅದೇ ರೀತಿ ಸಿನಿಮಾದಲ್ಲಿ ಮಿಂಚಿದವರು ಕಿರುತೆರೆಗೂ ಬರಬಹುದು. ಆ್ಯಕ್ಟಿಂಗ್ ಬಂದರೆ ಸಾಕು, ಡೈಲಾಗ್ ಎಲ್ಲವೂ ಅವರಿಗೆ ಬಂದೇ ಇರುತ್ತದೆ. ಅವೆಲ್ಲವೂ ಒಂದೇ ರೀತಿ ಇರುತ್ತದೆಯಲ್ಲವೆ ಎಂದು ಬಹುತೇಕ ಮಂದಿ ಅಂದುಕೊಂಡಿರಬಹುದು. ಆದರೆ ನಿಜಕ್ಕೂ ಅದು ಹಾಗಲ್ಲ. ಒಂದೇ ಡೈಲಾಗ್ ಸೀರಿಯಲ್‌ನಲ್ಲಿ ಹೇಳುವ ಸ್ಟೈಲೇ ಬೇರೆ, ಕಿರುತೆರೆಯಲ್ಲಿ ಹೇಳುವ ಸ್ಟೈಲೇ ಬೇರೆ.
28
ಕೆಜಿಎಫ್ ಡೈಲಾಗ್ ಹೇಳಿದ ನಟಿ
ಇದೀಗ ನಟಿ ಅಂಕಿತಾ ಅಮರ್ (Ankita Amar) ಅವರು ಕೆಜಿಎಫ್ ಚಿತ್ರದ ಒಂದು ಡೈಲಾಗ್ ಅನ್ನು ಸೀರಿಯಲ್ ಮತ್ತು ಸಿನಿಮಾ ಸ್ಟೈಲ್ನಲ್ಲಿ ಹೇಳಿ ತೋರಿಸಿದ್ದಾರೆ. 'ನಾನು ಯಾವುದೋ 10 ಜನರನ್ನು ಹೊಡೆದು ಡಾನ್ ಆಗಿಲ್ಲ ಕಣೊ, ನಾನು ಹೊಡೆದಿರೋ ಹತ್ತೂ ಜನನೂ ಡಾನೇ' ಎನ್ನುವ ಡೈಲಾಗ್ ಅನ್ನು ಅಂಕಿತಾ ಅವರು ಹೇಳಿ ತೋರಿಸಿದ್ದಾರೆ. ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಈ ಡೈಲಾಗ್ ಹೇಗೆ ಬದಲಾಗುತ್ತದೆ ಎನ್ನುವುದನ್ನು ಅವರ ಬಾಯಲ್ಲೇ ಕೇಳಿದರೆ ಚೆಂದ. (ಅದರ ವಿಡಿಯೋ ಅನ್ನು ಕೊನೆಯಲ್ಲಿ ಶೇರ್ ಮಾಡಲಾಗಿದೆ.)
38
ಮೀರಾ ಎಂದೇ ಖ್ಯಾತಿ
ಇನ್ನು ನಟಿ ಅಂಕಿತಾ ಅಮರ್ ಕುರಿತು ಹೇಳುವುದಾದರೆ, ಪ್ರೇಕ್ಷಕರ ಪ್ರೀತಿಯ ಮೀರಾ ಎಂದೇ ಖ್ಯಾತಿ ಪಡೆದಿದ್ದಾರೆ ಇವರು. ನಟಿ ಮಾತ್ರವಲ್ಲದೇ ಖ್ಯಾತ ನಿರೂಪಕಿ ಕೂಡ. ಅಷ್ಟೇ ಅಲ್ಲದೇ ಈಕೆ ಗಾಯಕಿ ಮತ್ತು ನೃತ್ಯಾಂಗನೆ. ‘ನಮ್ಮನೆ ಯುವರಾಣಿ’ ಸೀರಿಯಲ್‌ನಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ಜನಪ್ರಿಯತೆ ಗಳಿಸಿದರು. ಇದಾದ ಮೇಲೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಮೂಲತಃ ಮೈಸೂರಿನವರಾದ ಅಂಕಿತಾ ಓದಿದ್ದು ಎಂಬಿಬಿಎಸ್, ಆದರೆ ಆಯ್ಕೆ ಮಾಡಿಕೊಂಡಿರುವುದು ಬಣ್ಣದ ಲೋಕವನ್ನು.
ಕೆಲವು ದಿನಗಳ ಹಿಂದೆ ನಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದರು. ಅಷ್ಟಕ್ಕೂ ನಟಿಯ ಫ್ಯಾನ್ಸ್ ಅವರ ಮದುವೆಯ ಸುದ್ದಿಗಾಗಿ ಕಾಯ್ತಾ ಇದ್ದಾರೆ. ನಟಿಯ ಮದುವೆಯ ಬಗ್ಗೆ ಅವರಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಗಳು ತಲೆ ಕೆಡಿಸಿಕೊಂಡಂತಿದೆ. ಅದಕ್ಕೆ ಉತ್ತರಿಸಿರೋ ನಟಿ ಅಂಕಿತಾ, ಹೊಸದಾಗಿ ಮದುವೆಯಾಗಿರುವ ನಿರೂಪಕಿಯನ್ನೇ ಉದ್ದೇಶಿಸಿ, ನಿಮ್ಮದು ಈಗಷ್ಟೇ ಮದ್ವೆಯಾಗಿದೆಯಲ್ವಾ, ಇನ್ನೊಂದು ಐದು ವರ್ಷ ಹೀಗೆ ಹೊಸದಾಗಿ ಮದುವೆಯಾದವರನ್ನು ನೋಡಿ, ನೀವೆಲ್ಲಾ ಹೇಗೆ ಇದ್ದೀರಾ ಎಂದು ತಿಳಿದ ಮೇಲೆ ಮದುವೆಯಾಗುತ್ತೇನೆ ಎಂದು ಚಟಾಕಿ ಹಾರಿಸಿದ್ದಾರೆ! ನಿಮ್ಮ ಮದುವೆ ವರ್ಕ್ಔಟ್ ಆದ್ರೆ ನಾನು ಆಗ್ತೇನೆ ಎಂದು ನಾಚಿಕೊಂಡಿದ್ದರು.
58
ನೃತ್ಯಗಾತಿ ಕೂಡ
ಇನ್ನು ನಟಿ ಕುರಿತು ಹೇಳುವುದಾದರೆ, ಈಕೆ ಖ್ಯಾತ ನೃತ್ಯಗಾರ್ತಿ ಕೂಡ. ಈ ಹಿಂದೆ ಕೃಷ್ಣನ ಭಜನೆಗೆ ನೃತ್ಯ ಮಾಡುವ ಮೂಲಕ ಎಲ್ಲರ ಮನಸೂರೆಗೊಂಡಿದ್ದರು ಅಂಕಿತಾ. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ವೇಳೆ, ಭಜನೆಗೆ ಡ್ಯಾನ್ಸ್ ಮಾಡುವ ಮೂಲಕ ಸೈ ಎನ್ನಿಸಿಕೊಂಡವರು. ಜಯ ಜಯ ರಾಮ, ಜಾನಕಿ ಪ್ರೇಮ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದರು. ನೂರಾರು ಮಹಿಳೆಯರು ದಾರಿಯುದ್ದಕ್ಕೂ ಭಜನೆ ಮಾಡುತ್ತಾ ಸಾಗುತ್ತಿದ್ದರೆ, ನಟಿ ಅಂಕಿತಾ ಎದುರಿನಲ್ಲಿ ಈ ಭಜನೆಗೆ ಗೆ ಹೆಜ್ಜೆ ಹಾಕುತ್ತಾ ಸಾಗಿದ್ದರು.
68
ನಟಿ ಸಿನಿ ಪಯಣ
ಇನ್ನು ನಟಿಯ ಒಂದಿಷ್ಟು ಸಿನಿ ಪಯಣದ ಕುರಿತು ಹೇಳುವುದಾದರೆ, ‘ಅಬಜದಬ’ ಸಿನಿಮಾ ಮೂಲಕ ಅಂಕಿತಾ ಬೆಳ್ಳಿತೆರೆ ಪ್ರವೇಶ ಮಾಡಿದ್ದರು. ಅದಿನ್ನೂ ಬಿಡುಗಡೆಯಾಗಿಲ್ಲ. ಆದರೂ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆಯ ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ಈಗ ‘ರಂಗು ರಗಳೆ’ ಹೀಗೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಶೈಲಿಯ ಸಿನಿಮಾವಾಗಿದ್ದು, ಮೂವರು ನಾಯಕರಿದ್ದಾರೆ.
78
ಬಣ್ಣದ ಲೋಕದ ಬಗ್ಗೆ ನಟಿ
ಈ ಹಿಂದೆ ತಮ್ಮ ಬಣ್ಣದ ಲೋಕದ ಕುರಿತು ಮಾಧ್ಯಮದ ಎದುರು ಮಾತನಾಡಿದ್ದ ಅಂಕಿತಾ ಅವರು, ಮಲ್ಟಿ ಟಾಸ್ಕ್ ಎಂದರೆ ನನಗಿಷ್ಟ. ಕಲೆ ಸರಸ್ವತಿಯ ರೂಪ. ಆದ್ದರಿಂದ ನಿರೂಪಣೆಯ ಅವಕಾಶ ಬಂದಾಗ ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ಶಾಲಾ, ಕಾಲೇಜು ದಿನಗಳಿಂದಲೂ ನನಗೆ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಒಲವು ಹೆಚ್ಚು. ಅದರಲ್ಲಿ ಭಾಗವಹಿಸಿಲ್ಲ ಎಂದರೆ ಓದಲು ಆಸಕ್ತಿಯೇ ಬರುತ್ತಿರಲಿಲ್ಲ ಎಂದಿದ್ದರು.
88
ನೃತ್ಯದಲ್ಲಿಯೂ ಸಕ್ರಿಯ
ಕೇವಲ ನಟನೆ ಮಾತ್ರವಲ್ಲದೆ, ಎಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಆಸೆ. ನೃತ್ಯ, ಗಾಯನ, ಹಿನ್ನೆಲೆ ಧ್ವನಿಯಲ್ಲಿ ಈಗಾಗಲೇ ಸಕ್ರಿಯಳಾಗಿದ್ದೇನೆ. ಸದ್ಯಕ್ಕೆ ಸುಗಮ ಸಂಗೀತ ಕಲಿಯುತ್ತಿದ್ದೇನೆ. ನೃತ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ ಎಂದಿದ್ದರು ಅಂಕಿತಾ.