Published : Jun 13, 2025, 10:00 AM ISTUpdated : Jun 17, 2025, 12:24 PM IST
Kavya Maran Relationship: ಸಂಗೀತ ನಿರ್ದೇಶಕನ ಹೆಸರು ಆಗಾಗ ಪ್ರೇಮ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳೋದು ಸಾಮಾನ್ಯ. ಈಗ ಕಾವ್ಯಾ ಮಾರನ್ ಜೊತೆ ಡೇಟಿಂಗ್ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಾಲಿವುಡ್‌ನ ಬ್ಯುಸಿ ಸಂಗೀತ ನಿರ್ದೇಶಕ ಅನಿರುದ್. ವಿಜಯ್, ರಜನಿ, ಕಮಲ್‌ರಂಥ ಸ್ಟಾರ್‌ಗಳಿಗೆ ಸಂಗೀತ ಕೊಡ್ತಾ ಇರೋ ಅನಿರುದ್, ಆಗಾಗ ಪ್ರೇಮ ವಿವಾದಗಳಲ್ಲೂ ಸಿಕ್ಕಿಹಾಕಿಕೊಳ್ಳೋದುಂಟು. ಈಗ ನಿರ್ಮಾಪಕ ಕಲಾನಿಧಿ ಮಾರನ್ ಮಗಳು ಕಾವ್ಯಾ ಮಾರನ್ ಜೊತೆ ಪ್ರೇಮ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ.
24
ಈ ಹಿಂದೆ ಅನಿರುದ್ ಮತ್ತು ನಟಿ ಕೀರ್ತಿ ಸುರೇಶ್ ಪ್ರೇಮಿಗಳು ಅಂತ ಸುದ್ದಿ ಹಬ್ಬಿತ್ತು. ಇಬ್ಬರ ಫೋಟೋನೇ ಕಾರಣ. ನೆಟ್ಟಿಗರು ಮದುವೆ ಆಗ್ತಾರೆ ಅಂತಲೂ ಮಾತಾಡಿಕೊಂಡ್ರು. ಆದ್ರೆ ಕೀರ್ತಿ ಸುರೇಶ್ ಪೇರೆಂಟ್ಸ್, ಇಬ್ರೂ ಫ್ರೆಂಡ್ಸ್ ಅಷ್ಟೇ, ಪ್ರೇಮ ವದಂತಿ ಸುಳ್ಳು ಅಂತ ಹೇಳಿ ತೆರೆ ಎಳೆದಿದ್ದರು.
34
ಅನಿರುದ್ ಸಂಗೀತದಲ್ಲಿ ಜೋನಿಟಾ ಗಾಂಧಿ ಸಾಕಷ್ಟು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ಗೆ ಫ್ಯಾನ್ಸ್ ಜಾಸ್ತಿ. ಜೊತೆಯಾಗಿ ತೆಗೆಸಿಕೊಂಡ ಫೋಟೋಗಳು ವೈರಲ್ ಆಗಿದ್ದರಿಂದ ಪ್ರೇಮ ಅಂತ ಸುದ್ದಿ ಹಬ್ಬಿತ್ತು. ಆದ್ರೆ ಇಬ್ಬರೂ ಕ್ಯಾರೆ ಅನ್ನದೆ ಕೆಲಸ ಮಾಡ್ತಿದ್ದಾರೆ. ಈಚೆಗೆ ಅನಿರುದ್ ಮ್ಯೂಸಿಕ್ ಶೋನಲ್ಲಿ ಜೋನಿಟಾ ಹಾಡಿದ್ರು.
ಅನಿರುದ್ ಮೊದಲು ಪ್ರೇಮದ ಬಲೆಯಲ್ಲಿ ಸಿಕ್ಕಿದ್ದು ಆಂಡ್ರಿಯಾ ಜೊತೆ. ಇಬ್ಬರ ಕ್ಲೋಸ್ ಫೋಟೋಗಳು ಲೀಕ್ ಆಗಿದ್ದರಿಂದ ಪ್ರೇಮ, ಬ್ರೇಕಪ್ ಎರಡೂ ಆಯ್ತು. ವಯಸ್ಸಿನ ಅಂತರವೇ ಕಾರಣ ಅಂತ ಅನಿರುದ್ ಹೇಳಿದ್ರು. ಆಂಡ್ರಿಯಾ, ಅನಿರುದ್‌ಗಿಂತ ಆರು ವರ್ಷ ದೊಡ್ಡವರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.