ತ್ರಿವಿಕ್ರಮ್‌, ವಂಗಾ ಚಿತ್ರಗಳನ್ನು ರಿಜೆಕ್ಟ್‌ ಮಾಡಿದ ಅಲ್ಲು ಅರ್ಜುನ್‌: ಪ್ರಶಾಂತ್‌ ನೀಲ್‌ಗೆ ಗ್ರೀನ್‌ ಸಿಗ್ನಲ್‌

Published : Jun 13, 2025, 09:38 AM IST

ಅತ್ತ ಪ್ರಶಾಂತ್‌ ನೀಲ್‌ ಭೇಟಿ ನಡೆದರೆ, ಇತ್ತ ಅಲ್ಲು ಅರ್ಜುನ್‌, ತ್ರಿವಿಕ್ರಮ್‌ ಶ್ರೀನಿವಾಸ್‌ ಹಾಗೂ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಚಿತ್ರಗಳನ್ನು ರಿಜೆಕ್ಟ್‌ ಮಾಡಿದ್ದಾರೆ.

PREV
15

ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಜತೆಯಾಗುತ್ತಿದ್ದಾರೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಹು ಕೋಟಿ ವೆಚ್ಚದ ಚಿತ್ರವೊಂದು ಸೆಟ್ಟೇರುತ್ತಿದೆ ಎಂಬುದು ಸದ್ಯದ ಟಾಲಿವುಡ್‌ನ ಬಿಗ್‌ ನ್ಯೂಸ್‌.

25

ಈ ಸುದ್ದಿ ಹುಟ್ಟಿಕೊಳ್ಳುವುದಕ್ಕೆ ಕಾರಣ ಎರಡು ದಿನಗಳ ಹಿಂದೆಯಷ್ಟೇ ಪ್ರಶಾಂತ್‌ ನೀಲ್‌ ಹೈದಾರಬಾದ್‌ನಲ್ಲಿರುವ ಗೀತಾ ಆರ್ಟ್ಸ್‌ ಅಫೀಸ್‌ಗೆ ಹೋಗಿದ್ದು. ಅತ್ತ ಪ್ರಶಾಂತ್‌ ನೀಲ್‌ ಭೇಟಿ ನಡೆದರೆ, ಇತ್ತ ಅಲ್ಲು ಅರ್ಜುನ್‌, ತ್ರಿವಿಕ್ರಮ್‌ ಶ್ರೀನಿವಾಸ್‌ ಹಾಗೂ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ಚಿತ್ರಗಳನ್ನು ರಿಜೆಕ್ಟ್‌ ಮಾಡಿದ್ದಾರೆ.

35

ಮಾತುಕತೆ ಹಂತದಲ್ಲಿದ್ದ ಸಂದೀಪ್‌ರೆಡ್ಡಿ ವಂಗಾ ಹಾಗೂ ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಸಿನಿಮಾಗಳಿಂದ ಹೊರ ಬಂದಿರುವ ಅಲ್ಲು ಅರ್ಜುನ್‌, ಪ್ರಶಾಂತ್‌ ನೀಲ್‌ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನಲಾಗಿದೆ.

45

ಅಲ್ಲು ಅರ್ಜುನ್‌ ಈಗ ತಮಿಳಿನ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಪ್ರಶಾಂತ್‌ ನೀಲ್‌, ಜೂ.ಎನ್‌ಟಿಆರ್‌ ನಟನೆಯ ಚಿತ್ರದ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಮಾಹಿತಿ ಪ್ರಕಾರ ಈ ಇಬ್ಬರು ತಮ್ಮ ಮುಂದಿರುವ ಈ ಎರಡೂ ಚಿತ್ರಗಳನ್ನು ಮುಗಿಸಿಕೊಂಡು ಜತೆಯಾಗಲಿದ್ದಾರೆ.

55

ಇನ್ನು ಜಾಗತಿಕ ಮಟ್ಟದಲ್ಲಿ AA22xA6 ಸಿನಿಮಾ ತಯಾರಾಗಲಿದೆ. ಅದಕ್ಕಾಗಿ ವಿದೇಶದ ತಂತ್ರಜ್ಞರು ಕೂಡ ತೆರೆಹಿಂದೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ತ್ರಿಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ.

Read more Photos on
click me!

Recommended Stories