Akanksha Puri reacts to trolls: ಒಂದು ಫ್ಯಾಷನ್ ಪ್ರಯೋಗ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಆಕಾಂಕ್ಷಾ ಪುರಿ ಮಹಾರಾಷ್ಟ್ರದ ಸಾಂಪ್ರದಾಯಿಕ 'ಪೈಥಾನಿ' ಸೀರೆಗೆ ಬಿಕಿನಿ ಬ್ಲೌಸ್ ತೊಟ್ಟು ರಾಂಪ್ ವಾಕ್ ಮಾಡಿದ್ದರು. ಇದು ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬಾಲಿವುಡ್, ಕಿರುತೆರೆ ಮತ್ತು ಭೋಜಪುರಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ ಸದ್ಯ ತಮ್ಮ ಉಡುಪಿನ ಕಾರಣಕ್ಕೆ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ 'ಬಾಂಬೆ ಟೈಮ್ಸ್ ಫ್ಯಾಷನ್ ವೀಕ್'ನಲ್ಲಿ ಆಕಾಂಕ್ಷಾ ಅವರು ಮಹಾರಾಷ್ಟ್ರದ ಹೆಮ್ಮೆಯ ಪೈಥಾನಿ (Paithani) ಸೀರೆಯನ್ನು ಉಟ್ಟು ರ‍್ಯಾಂಪ್ ವಾಕ್ ಮಾಡಿದ್ದರು. ಆದರೆ ಈ ಸೀರೆಯ ಜೊತೆಗೆ ಅವರು ಬಿಕಿನಿ ಶೈಲಿಯ ಬ್ಲೌಸ್ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
25
ವಿವಾದಕ್ಕೆ ಕಾರಣವೇನು?
ಪೈಥಾನಿ ಸೀರೆಯನ್ನು ಮಹಾರಾಷ್ಟ್ರದ 'ಮಹಾವಸ್ತ್ರ' ಮತ್ತು ಅತ್ಯಂತ ಪವಿತ್ರ ಹಾಗೂ ಸಾಂಪ್ರದಾಯಿಕ ಉಡುಗೆ ಎಂದು ಪರಿಗಣಿಸಲಾಗುತ್ತದೆ. ಆಕಾಂಕ್ಷಾ ಅವರು ಇದಕ್ಕೆ ಬಿಕಿನಿ ಬ್ಲೌಸ್ ತೊಡುವ ಮೂಲಕ ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
35
ಟ್ರೋಲರ್ಸ್‌ಗೆ ಆಕಾಂಕ್ಷಾ ಪುರಿ ನೀಡಿದ ಉತ್ತರ
ತನ್ನ ಮೇಲಿನ ಆರೋಪಗಳಿಗೆ ನೇರ ಉತ್ತರ ನೀಡಿರುವ ಆಕಾಂಕ್ಷಾ ಪುರಿ ಹೀಗೆ ಹೇಳಿದ್ದಾರೆ.. "ಫ್ಯಾಷನ್ ವೀಕ್‌ನಲ್ಲಿ ನಾನು ಧರಿಸಿದ್ದ ಈ ಉಡುಪು ಸಂಪೂರ್ಣವಾಗಿ ಹಿರಿಯ ಡಿಸೈನರ್ ರೋಹಿತ್ ವರ್ಮಾ ಅವರ ಪರಿಕಲ್ಪನೆಯಾಗಿತ್ತು. ಇದರಲ್ಲಿ ನನ್ನ ವೈಯಕ್ತಿಕ ಹಸ್ತಕ್ಷೇಪವೇನೂ ಇರಲಿಲ್ಲ" ಎಂದಿದ್ದಾರೆ.
"ರೋಹಿತ್ ವರ್ಮಾ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಈ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ ಎಂದರೆ ಖಂಡಿತವಾಗಿಯೂ ಅದರ ಹಿಂದೆ ಒಂದು ಸ್ಪಷ್ಟವಾದ ಆಲೋಚನೆ ಇರುತ್ತದೆ. ಒಬ್ಬ ಕಲಾವಿದೆಯಾಗಿ ನಾನು ಅವರ ದೃಷ್ಟಿಕೋನವನ್ನು ಗೌರವಿಸಿ, ಪೂರ್ಣ ಆತ್ಮವಿಶ್ವಾಸದಿಂದ ಆ ಉಡುಪನ್ನು ಧರಿಸಿದ್ದೇನೆ. ಟೀಕೆಗಳ ನಡುವೆಯೂ ಅನೇಕರು ಈ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ ಎಂದು ಆಕಾಂಕ್ಷಾ ತಿಳಿಸಿದ್ದಾರೆ.
55
ಆಕಾಂಕ್ಷಾ ಪುರಿ ಮುಂದಿನ ಪ್ರಾಜೆಕ್ಟ್ಸ್
ಸದ್ಯ ಆಕಾಂಕ್ಷಾ ಪುರಿ ಮತ್ತು ಅಶ್ಮಿತ್ ಪಟೇಲ್ ಅಭಿನಯದ 'ಸಾಡಿ ಫರ್ಮಾಯಿಶ್' ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಅವರು ಭೋಜಪುರಿ ಸೂಪರ್ ಸ್ಟಾರ್ ಖೇಸರಿ ಲಾಲ್ ಯಾದವ್ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.