ಕಾರು ಕ್ರೇಜ್ಗೆ ಹೆಸರುವಾಸಿಯಾದ ನಟ ಕಿಚ್ಚ ಸುದೀಪ್ ತಮ್ಮ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಮತ್ತೊಂದು ಹೊಸ ಸೇರ್ಪಡೆ ಮಾಡಿದ್ದಾರೆ. ಇತ್ತೀಚೆಗೆ 6.5 ಕೋಟಿ ಮೌಲ್ಯದ ಕ್ಯಾರವಾನ್ ಖರೀದಿಸಿದ್ದ ಅವರು, ಇದೀಗ ಪರಿಸರಸ್ನೇಹಿ ಮಹೀಂದ್ರಾ BE 6 ಎಲೆಕ್ಟ್ರಿಕ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರ ಕಾರಿನ ಕ್ರೇಜ್ ಅವರ ಅಭಿಮಾನಿಗಳಿಗೆ ತಿಳಿದದ್ದೇ. ಇವರು ತಮ್ಮ ಸ್ಟೈಲಿಶ್ ಲುಕ್ ಮಾತ್ರವಲ್ಲದೇ ಐಷಾರಾಮಿ ಲಕ್ಷುರಿ ಕಾರಿನ ಕಲೆಕ್ಷನ್ಗೂ ಫೇಮಸ್. ಇದಾಗಲೇ ಈ ಬಗ್ಗೆ ನಟ ಹೇಳಿಕೊಂಡಿತ್ತು ಉಂಟು. ತಮಗೆ ಕಾಲೇಜು ದಿನಗಳಿಂದಲೇ ಬೈಕ್, ಕಾರು ಕ್ರೇಜ್ ಇರುವುದಾಗಿ ನಟ ಹೇಳಿದ್ದರು. ಇದೇ ಕಾರಣಕ್ಕೆ ಅವರ ಮನೆಯಲ್ಲಿ ಲಕ್ಷದಿಂದ ಹಿಡಿದು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳಿವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
26
6.5 ಕೋಟಿ ಕ್ಯಾರವಾನ್
ಅಂದಹಾಗೆ, ಇತ್ತೀಚೆಗಷ್ಟೇ ಸುದೀಪ್ ಅವರು 6.5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕ್ಯಾರವಾನ್ ಖರೀದಿ ಮಾಡಿದ್ದರು. ಇದರ ಬೆನ್ನಲ್ಲೇ ಪರಿಸರಸ್ನೇಹಿಯಾಗ ಹೊರಟಿರುವ ಸುದೀಪ್ ಅವರು, ಲಕ್ಷುರಿ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. ಮಹೀಂದ್ರಾ ಕಂಪೆನಿಯ ಎಲೆಕ್ಟ್ರಿಕ್ ಎಸ್‌ಯುವಿ 'BE 6' ಕಾರನ್ನು ಖರೀದಿ ಮಾಡಿದ್ದಾರೆ.
36
ಸುದೀಪ್ ಅನಾವರಣ
ತಮ್ಮ ಹೊಚ್ಚ ಹೊಸ ಕಾರನ್ನು ಇದೀಗ ಸುದೀಪ್ ಅನಾವರಣಗೊಳಿಸಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮಹೀಂದ್ರಾ ಸಂಸ್ಥೆಯ ಸಿಬ್ಬಂದಿ ಸುದೀಪ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ, ಹೊಸ ಪ್ರಯಾಣಕ್ಕೆ ಶುಭ ಹಾರೈಸಿದರು.
ಸುದೀಪ್ ಖರೀದಿಸಿರುವ ಮಹೀಂದ್ರಾ BE 6 ಅತ್ಯಂತ ವಿಶಿಷ್ಟ ಹಾಗೂ ಸ್ಪೋರ್ಟ್ಸ್ ಡಿಸೈನ್ ಹೊಂದಿರುವ ಈ ಕಾರು ನೋಡಲು ಬಹಳ ಆಕರ್ಷಕವಾಗಿದೆ. ಅತ್ಯಧಿಕ ಮೈಲೇಜ್ ಕೊಡುವ ಮತ್ತು ಐಷಾರಾಮಿಯಿಂದ ಕೂಡಿದ್ದು, ಇದರ ಬೆಲೆ ಬರೋಬ್ಬರಿ 35 ಲಕ್ಷ ರೂಪಾಯಿ ಆಗಿದೆ. ಮಹೀಂದ್ರಾ BE 6 ಕಾರಿನ ಆನ್ ರೋಡ್ ಬೆಲೆ ಬೆಂಗಳೂರಿನಲ್ಲಿ 20 ಲಕ್ಷ ರೂಪಾಯಿ ಇಂದ ಹಿಡಿದು 33 ಲಕ್ಷ ರೂಪಾಯಿವರೆಗೂ ಇದೆ.
56
ವಿಶಿಷ್ಟ ಕಾರು
ಈ ಕಾರು ಆಕರ್ಷಕ ಹಾಗೂ ಏರೋಡೈನಾಮಿಕ್ ವಿನ್ಯಾಸ ಹೊಂದಿದೆ. ಸ್ಪೋರ್ಟಿ ಮತ್ತು ಪ್ರೀಮಿಯಂ ಇಂಟೀರಿಯರ್, ಅತ್ಯುತ್ತಮ ಡ್ರೈವಿಂಗ್ ರೇಂಜ್, ವೇಗದ ಚಾರ್ಜಿಂಗ್ ಸೌಲಭ್ಯ, ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳೇ ಈ ಕಾರಿನ ಹೈಲೈಟ್. ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಅತ್ಯಾಧುನಿಕ ವಿನ್ಯಾಸದ ಕಾರಣದಿಂದ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಈಗ ಸುದೀಪ್ ಅವರ ಅಂಗಳಕ್ಕೆ ಬಂದಿದೆ.
66
ಎಷ್ಟು ಕಾರುಗಳಿವೆ?
ಈಗಾಗಲೇ ಸುದೀಪ್ ಬಳಿ ಲ್ಯಾಂಬೋರ್ಗಿನಿ, ವೋಲ್ವೋ, ಜೀಪ್, ಟೊಯೋಟಾ ವೆಲ್ಫೈರ್ ಸೇರಿ 7 ಐಷಾರಾಮಿ ಕಾರುಗಳಿದ್ದವು. ಈಗ ಮಹೀಂದ್ರಾ ಬಿಇ 6 ಟಾಪ್ ಮಾಡೆಲ್ ಕಿಚ್ಚನ ಕಲೆಕ್ಷನ್ಗೆ ಸೇರ್ಪಡೆಯಾಗಿದ್ದು, ಇದು ಸೇರಿ 8 ಐಷಾರಾಮಿ ಕಾರುಗಳು ಸುದೀಪ್ ಮನೆಯಲ್ಲಿವೆ. ಅಂದಹಾಗೆ ಸುದೀಪ್ ಅವರು ಶೀಘ್ರದಲ್ಲಿ ಬಿಗ್ಬಾಸ್ 13ನೇ ಸೀಸನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.