ತೆಲುಗು, ತಮಿಳು ಚಿತ್ರರಂಗದಲ್ಲಿ ಫ್ಯಾನ್ ಫೇವರಿಟ್ ಆಗಿರುವ ನಟಿ ತ್ರಿಶಾ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಒಂದು ದಿನದ ಹಿಂದೆ ಅವರೇ ಮಾಡಿರುವ ಒಂದು ಟ್ವೀಟ್.
ತ್ರಿಶಾ ಈ ಟ್ವೀಟ್ ಮಾಡಿದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಮೇಡಮ್ ನೀವು ನಟಿಯಲ್ಲ, ಪುರಾತತ್ವ ಇಲಾಖೆಯಲ್ಲಿ ಕೆಲಸದಲ್ಲಿರಬೇಕು ಎಂದು ಹೇಳಿದ್ದಾರೆ.
ಅಷ್ಟಕ್ಕೂ ತ್ರಿಶಾ ಮಾಡಿರುವ ಆ ಟ್ವೀಟ್‌ನಲ್ಲಿ ಅಂಥದ್ದೇನಿದೆ. ಅನ್ನೋದು ನಿಮ್ಮ ಕುತೂಹಲವಾಗಿರಬಹುದು. ಅವರು ಮಾಡಿರುವ ಟ್ವೀಟ್‌ಗಿಂತ, ಅವರು ಆ ಟ್ವೀಟ್‌ಅನ್ನು ಹುಡುಕಿದ್ದು ಹೇಗೆ ಅನ್ನೋದು ಅಭಿಮಾನಿಗಳು ಕುತೂಹಲವಾಗಿದೆ.
ಟ್ವೀಟ್‌ನ ವಿಶೇಷ ಏನೆಂದರೆ, ನಟಿ ತ್ರಿಶಾ ಬರೋಬ್ಬರಿ 10 ವರ್ಷಗಳ ಹಿಂದಿನ ಒಂದು ಟ್ವೀಟ್‌ಗೆ ಕಳೆದ ಭಾನುವಾರ ರಿಪ್ಲೈ ನೀಡಿದ್ದಾರೆ.
ನಿರ್ದೇಶಕ ಸೆಲ್ವರಾಘವನ್ 2013ರ ಜುಲೈ 13 ರಂದು ಒಂದು ಟ್ವೀಟ್ ಮಾಡಿದ್ದರು. ಬಹಳ ದಿನಗಳ ಬಳಿಕ ನಾನು 'ಎಎಂಎವಿ' ಚಿತ್ರವನ್ನು ನೋಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವಾಗ ವೆಂಕಿ ಹಾಗೂ ತ್ರಿಶಾ ಜೊತೆ ಅದ್ಭುತ ಕ್ಷಣವನ್ನು ಕಳೆದಿದ್ದೆ. ಈಗ ಅದರ ಸೀಕ್ವೆಲ್ ಮಾಡೋದಿದ್ರೂ ಅದಕ್ಕೆ ನಾನು ಸೈ ಎಂದು ಬರೆದುಕೊಂಡಿದ್ದರು.
ಎಎಂಎವಿ ಅಂದರೆ, ಆದವರಿ ಮಾತಲಕು ಅರ್ಥಲೆ ವೆರುಲೆ ಸಿನಿಮಾ. 2007ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಮಾಯಿ ಮಾಡಿತ್ತು. ಆ ಸಮಯದಲ್ಲಿಯೇ 30 ಕೋಟಿ ಕಲೆಕ್ಷನ್ ಮಾಡಿತ್ತು.
ಇದೇ ಚಿತ್ರವನ್ನು ತಮಿಳಿನಲ್ಲಿ ಯಾರಿಡೀ ನೀ ಮೋಹಿನಿ ಎನ್ನುವ ಹೆಸರಿನಲ್ಲಿ ಧನುಷ್ ಹಾಗೂ ನಯನತಾರಾ ಜೊತೆ ಸೆಲ್ವರಾಘವನ್ ರಿಮೇಕ್ ಮಾಡಿದ್ದರು. ತಮಿಳಿನಲ್ಲೂ ಚಿತ್ರ ಸೂಪರ್‌ಹಿಟ್ ಆಗಿತ್ತು.
ಈ ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಸೆಲ್ವರಾಘವ್ 2013ರಲ್ಲಿ ಮಾಡಿದ ಟ್ವೀಟ್‌ಗೆ ಭಾನುವಾರ ಉತ್ತರ ನೀಡಿರುವ ತ್ರಿಶಾ ಈ ಸಿನಿಮಾಗೆ ನಾನು ರೆಡಿ ಎಂದು ಸೆಲ್ವರಾಘವವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಅದರೊಂದಿಗೆ ಈ ಚಿತ್ರದ ಸೀಕ್ವೆಲ್ ಬರಬಹುದು ಎನ್ನುವ ಸೂಚನೆಯೂ ಜನರಿಗೆ ಸಿಕ್ಕಿದೆ. ಅದಕ್ಕಿತ ಹೆಚ್ಚಾಗಿ 10 ವರ್ಷದ ಹಿಂದಿನ ಟ್ವೀಟ್‌ಗೆ ತ್ರಿಶಾ ಹೇಗೆ ರಿಪ್ಲೈ ನೀಡಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಇದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬ, ಹುಡುಗಿಯರು ಒಕೆ ಅನ್ನೋದಕ್ಕೆ ತುಂಬಾ ಟೈಮ್ ತಗೋತಾರೆ ಅಂತಾ ಕೇಳಿದ್ದೆ, ಆದ್ರೆ 10 ವರ್ಷ ತಗೋತಾರೆ ಅಂತಾ ಈಗ್ಲೆ ಗೊತ್ತಾಗಿದ್ದು ಎಂದು ಬರೆದಿದ್ದಾರೆ.
ಇದನ್ನು ನೋಡಿದ ನಂತ್ರ ನಿಮಗಿಂತ ನನ್ನ ಲವ್ವರ್ ಪರ್ವಾಗಿಲ್ಲ ಅಂತಾ ಅನ್ನಿಸ್ತಿದೆ. ಕನಿಷ್ಠ ಆಕೆ 2 ದಿನಕ್ಕಾದ್ರೂ ಒಮ್ಮೆ ರಿಪ್ಲೈ ಮಾಡ್ತಾಳೆ ಎಂದು ಅಭಿಮಾನಿಯೊಬ್ಬ ಬರೆದಿದ್ದಾರೆ.
ಅದಾವರಿ ಮಾತಾಲುಕು ಅರ್ದಾಳು ವೆರುಲೆ ಚಿತ್ರವನ್ನು ಸೆಲ್ವರಾಘವನ್ ನಿರ್ದೇಶಿಸಿದ್ದಾರೆ. ಅದಾವರಿ ಮಾತಾಲುಕು ಅರ್ದಲು ವೆರುಲೆ ಚಿತ್ರ ತೆಲುಗಿನಲ್ಲಿ ದೊಡ್ಡ ಹಿಟ್ ಆಯಿತು. ವೆಂಕಟೇಶ್ ಮತ್ತು ತ್ರಿಷಾ ಮುಖ್ಯ ಪಾತ್ರಧಾರಿಯಾಗಿದ್ದರು.
ಪೊನ್ನಿಯನ್ ಸೆಲ್ವನ್ ಚಿತ್ರದ ದೊಡ್ಡ ಯಶಸ್ಸಿನ ಬಳಿಕ ತ್ರಿಶಾ ಮತ್ತೊಮ್ಮೆ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ತ್ರಿಶಾ ನಟಿಸಿರುವ ದ ರೋಡ್ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇದರಲ್ಲಿ ತ್ರಿಶಾ ಮೀರಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.
ದ ರೋಡ್ ಬೆನ್ನಲ್ಲಿಯೇ ಅವರ ಬಹುನಿರೀಕ್ಷಿತ ಚಿತ್ರ ಲಿಯೋ ಬಿಡುಗಡೆಯಾಗಲಿದೆ. ಇದರಲ್ಲಿ ಅವರು ಇಳಯದಳಪತಿ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದಾರೆ.