ರಶ್ಮಿಕಾ ಮಂದಣ್ಣ ಸಂಪರ್ಕಿಸಿದ ಡಿಸೈನರ್‌ಗಳೆಲ್ಲ ಸದ್ಯ ಚಾಲ್ತಿಯಲ್ಲಿರುವ ಐವರಿ ಬಣ್ಣ ಅಥವಾ ಕೆಂಪು ಬಣ್ಣದ ಉಡುಗೆ ಧರಿಸಲು ಸೂಚಿಸಿದ್ದರು. ಆದರೆ ಕೊಡಗಿನ ಬೆಡಗಿ ರಶ್ಮಿಕಾಗೆ ಕಿತ್ತಳೆ ಬಣ್ಣದ ಸೀರೆ ಉಡುವ ಆಸೆ ಇತ್ತು.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ವೆಡ್ಡಿಂಗ್ ರಿಂಗ್, ಮಂಗಳಸೂತ್ರವನ್ನು ಡಿಸೈನರ್ ಬಳಿ ವಿನ್ಯಾಸ ಮಾಡಿಸಿಕೊಳ್ಳುತ್ತಾರೆ. ಆದರೆ ಕೆಲವು ತಿಂಗಳ ಹಿಂದೆ ವಿವಾಹ ಮಾಡಿಕೊಂಡ ನಟಿ ರಶ್ಮಿಕಾ ಮಂದಣ್ಣ ತನ್ನ ಮಂಗಳಸೂತ್ರದ ಡಿಸೈನ್ ಅನ್ನು ಸ್ವತಃ ತಾವೇ ರೂಪಿಸಿದ್ದಾರೆ. ಈ ವಿಚಾರವನ್ನು ಅವರ ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
24
ತಲೆಯೇ ಕೆಡಿಸಿಕೊಳ್ಳಲಿಲ್ಲ
ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರಿಗೆ ಟ್ರೆಂಡ್ ಅನ್ನು ಫಾಲೋ ಮಾಡುವುದು ಬೇಕಿರಲಿಲ್ಲ. ಮದುವೆ ದಿನ ಹಾಕಬೇಕಾದ ಉಡುಗೆ, ಆಭರಣಗಳ ವಿಚಾರದಲ್ಲಿ ಅವರು ತಮ್ಮ ಇಷ್ಟವನ್ನು ನೋಡಿದರೇ ಹೊರತು ಟ್ರೆಂಡ್ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ.
34
ಡಿಸೈನರ್‌ಗಳೆಲ್ಲ ಮೂಗು ಮುರಿದರು
ರಶ್ಮಿಕಾ ಸಂಪರ್ಕಿಸಿದ ಡಿಸೈನರ್‌ಗಳೆಲ್ಲ ಸದ್ಯ ಚಾಲ್ತಿಯಲ್ಲಿರುವ ಐವರಿ ಬಣ್ಣ ಅಥವಾ ಕೆಂಪು ಬಣ್ಣದ ಉಡುಗೆ ಧರಿಸಲು ಸೂಚಿಸಿದ್ದರು. ಆದರೆ ಕೊಡಗಿನ ಬೆಡಗಿ ರಶ್ಮಿಕಾಗೆ ಕಿತ್ತಳೆ ಬಣ್ಣದ ಸೀರೆ ಉಡುವ ಆಸೆ ಇತ್ತು. ಆ ಬಣ್ಣಕ್ಕೆ ಡಿಸೈನರ್‌ಗಳೆಲ್ಲ ಮೂಗು ಮುರಿದರು. ಆದರೆ ರಶ್ಮಿಕಾ ನಿಲುವು ಸ್ಪಷ್ಟವಾಗಿತ್ತು. ಅವರ ಇಷ್ಟಕ್ಕೆ ತಕ್ಕಂತೆ ಡಿಸೈನ್ ಮಾಡುವವರನ್ನೇ ಹುಡುಕಿಕೊಂಡರು ಎಂದಿದ್ದಾರೆ.
ಮಂಗಳಸೂತ್ರದ ವಿಚಾರಕ್ಕೆ ಬಂದರೆ ತನ್ನ ಮಂಗಳಸೂತ್ರವನ್ನು ಡಿಸೈನ್ ಮಾಡಲು ರಶ್ಮಿಕಾ ಯಾವ ಡಿಸೈನರ್ ಅನ್ನೂ ಅವಲಂಬಿಸಲಿಲ್ಲ. ಬದಲಿಗೆ ತಾನೇ ಡಿಸೈನ್ ಮಾಡಿದರು. ರಶ್ಮಿಕಾ ಟೇಸ್ಟ್ ಎಷ್ಟು ವಿಭಿನ್ನ ಮತ್ತು ಅನನ್ಯ ಎಂದು ಅವರ ಮಂಗಳಸೂತ್ರ ನೋಡಿದರೇ ಗೊತ್ತಾಗುತ್ತದೆ ಎಂದೂ ಪ್ರಿಯಾ ಮಗಂತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.