ಒಂದು ಹಂತದಲ್ಲಿ ಸೌಂದರ್ಯ ತನ್ನನ್ನು ಮೀರಿಸಿದ್ದಾರೆ ಎಂದು ರಮ್ಯಾ ಕೃಷ್ಣನ್ ಹೇಳಿಕೊಂಡಿದ್ದಾರೆ. ಅಂಥ ಸೌಂದರ್ಯ ನಾಯಕಿಯಾಗಿರುವ ಸಿನಿಮಾದಲ್ಲಿ ತಾನು ನೆಗೆಟಿವ್ ರೋಲ್‌ನಲ್ಲಿ ನಟಿಸಬಾರದು ಅಂದುಕೊಂಡಿದ್ದಾಗಿ ರಮ್ಯಾ ಕೃಷ್ಣನ್ ರಿವೀಲ್ ಮಾಡಿದ್ದಾರೆ.
ರಮ್ಯಾ ಕೃಷ್ಣನ್ ಹಿಂದೆ ಸೌತ್‌ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ಈಗಲೂ ಅವರು ಅದ್ಭುತವಾದ ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ಲಾಮರ್ ರೋಲ್ ಮಾಡಿದ ರಮ್ಯಾ ಕೃಷ್ಣನ್.. ನೆಗೆಟಿವ್ ರೋಲ್ ಮಾಡಲು ಸಹ ಹಿಂದೆ ಸರಿಯಲಿಲ್ಲ. ಅವರು ನೆಗೆಟಿವ್ ರೋಲ್‌ನಲ್ಲಿ ನಟಿಸಿದ ರಜನಿಕಾಂತ್‌ರ ನರಸಿಂಹ ಸಿನಿಮಾ ಕ್ಲಾಸಿಕ್ ಆಯ್ತು. ಅವರ ನೀಲಾಂಬರಿ ಪಾತ್ರ ಐಕಾನಿಕ್ ಆಗಿ ಉಳಿದಿದೆ.
25
ನೆಗೆಟಿವ್ ರೋಲ್‌ನಲ್ಲಿ ಅವಕಾಶ
ಮೊದಲು ತನಗೆ ನೀಲಾಂಬರಿ ರೋಲ್ ಮಾಡುವುದು ಇಷ್ಟವಿರಲಿಲ್ಲ ಎಂದು ರಮ್ಯಾ ಕೃಷ್ಣನ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅದಕ್ಕೆ ಕಾರಣ ಸೌಂದರ್ಯ ಎಂದಿದ್ದಾರೆ. ನರಸಿಂಹ ಸಿನಿಮಾದಲ್ಲಿ ಅವಕಾಶ ಬಂದಾಗ ನಂದು ನೆಗೆಟಿವ್ ರೋಲ್ ಅಂತ ಹೇಳಿದ್ರು. ನಿರ್ದೇಶಕರು ಎಷ್ಟೇ ಚೆನ್ನಾಗಿ ತೆಗೆದರೂ, ಬರಹಗಾರರು ಎಷ್ಟೇ ಚೆನ್ನಾಗಿ ಬರೆದರೂ, ನಾನು ಎಷ್ಟೇ ಚೆನ್ನಾಗಿ ನಟಿಸಿದರೂ ನೆಗೆಟಿವ್ ರೋಲ್ ಅಂದ್ರೆ ನೆಗೆಟಿವ್ ರೋಲೇ.
35
ಸೌಂದರ್ಯ ನನ್ನನ್ನು ಮೀರಿಸಿದಳು
ಅದೂ ಅಲ್ಲದೆ ಆ ಟೈಮ್‌ನಲ್ಲಿ ಸೌಂದರ್ಯ ನನ್ನನ್ನು ಮೀರಿಸುವಂಥ ಸಿನಿಮಾಗಳನ್ನು ಮಾಡುತ್ತಿದ್ದರು. ಅಮ್ಮೋರು ಸಿನಿಮಾದಿಂದ ಸೌಂದರ್ಯ ಬೆಳೆಯುವುದನ್ನು ನೋಡುತ್ತಿದ್ದೇನೆ. ಸ್ವಲ್ಪ ಕಾಲದಲ್ಲೇ ನನ್ನ ಕಣ್ಣೆದುರೇ ಬೆಳೆಯುತ್ತಾ ನನ್ನನ್ನು ಮೀರಿಸುವಂಥ ಸಿನಿಮಾಗಳನ್ನು ಮಾಡಿದರು. ತುಂಬಾ ಅದ್ಭುತವಾದ ಪಾತ್ರಗಳನ್ನು ಮಾಡಿದರು. ಹಾಗಿದ್ದಾಗ ಸೌಂದರ್ಯ ಹೀರೋಯಿನ್ ಆಗಿರುವ ಸಿನಿಮಾದಲ್ಲಿ ನಾನು ವಿಲನ್ ಆಗಿ ಮಾಡಬೇಕಾ ಅನ್ನೋ ಫೀಲಿಂಗ್ ನನಗಿತ್ತು. ಇಲ್ಲ ಎಂದು ಹೇಳಲಾರೆ.
ಆ ಫೀಲಿಂಗ್‌ನೊಂದಿಗೆ ಇಷ್ಟವಿಲ್ಲದೆ ಆ ಚಿತ್ರಕ್ಕೆ ಒಪ್ಪಿಕೊಂಡೆ. ಆದರೆ ಕ್ಯಾಮೆರಾ ಮುಂದೆ ಹೋದಾಗ ಮಾತ್ರ ನನ್ನ ಬೆಸ್ಟ್ ಕೊಟ್ಟೆ. ಈಗ ಎಲ್ಲರೂ ಅದನ್ನು ಐಕಾನಿಕ್ ರೋಲ್ ಅಂತಿದ್ದಾರೆ ಎಂದು ರಮ್ಯಾ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
55
ಬಾಹುಬಲಿ ಕೂಡ ರಿಜೆಕ್ಟ್ ಮಾಡಿದ್ದೆ
ಬಾಹುಬಲಿಯಲ್ಲಿ ಶಿವಗಾಮಿ ಪಾತ್ರ ಮಾಡುವಾಗಲೂ ಅದು ಐಕಾನಿಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಶೋಭುಗಾರು ಬಾಹುಬಲಿಗಾಗಿ ಫಸ್ಟ್ ಟೈಮ್ ನನಗೆ ಕಾಲ್ ಮಾಡಿದಾಗ ಸಿನಿಮಾದ ಬಗ್ಗೆ ನನಗೇನೂ ಗೊತ್ತಿರಲಿಲ್ಲ. 40 ದಿನಗಳ ಡೇಟ್ಸ್ ಬೇಕು ಅಂತ ಕೇಳಿದ್ರು. ಆ ಟೈಮ್‌ನಲ್ಲಿ ನಾನು ನನ್ನ ಮಗನೊಂದಿಗೆ, ಸೀರಿಯಲ್ಸ್ ಜೊತೆ ಬ್ಯುಸಿಯಾಗಿದ್ದೆ. ಆಗಲ್ಲ ಅಂತ ಹೇಳಿ ಫೋನ್ ಇಟ್ಟೆ. ಆಮೇಲೆ ರಾಜಮೌಳಿ ಇಂಡಿಯನ್ ಸಿನಿಮಾದಲ್ಲೇ ಅತಿದೊಡ್ಡ ಸಿನಿಮಾ ಮಾಡ್ತಿದ್ದಾರೆ ಅಂತ ಏನೇನೋ ಸುದ್ದಿಗಳು ಬಂತು. ಅವನ್ನು ನಮ್ಮಪ್ಪ ಚೆನ್ನಾಗಿ ಫಾಲೋ ಮಾಡ್ತಾರೆ. ಏನಮ್ಮ ನೀನು ರಾಜಮೌಳಿ ಸಿನಿಮಾ ಯಾಕೆ ಒಪ್ಪಿಕೊಳ್ಳಲಿಲ್ಲ ಅಂತ ಬೈದ್ರು. ಆಗ್ಲೇ ಶೋಭುಗಾರು ಮತ್ತೊಮ್ಮೆ ಫೋನ್ ಮಾಡಿ ಸಿನಿಮಾದ ಬಗ್ಗೆ ಹೇಳಿದ್ರು. ಹಾಗೆ ಶಿವಗಾಮಿ ಪಾತ್ರಕ್ಕೆ ತಾನು ಒಪ್ಪಿಕೊಂಡಿದ್ದಾಗಿ ರಮ್ಯಾ ಕೃಷ್ಣನ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.