'ದಾಖಲೆಯೇ ಇಲ್ಲ' ಆರ್ಯನ್ ಖಾನ್ ಬಂಧನಕ್ಕೆ ರಮ್ಯಾ ಅನುಮಾನ!

Published : Oct 06, 2021, 06:42 PM IST

ಮುಂಬೈ(ಅ. 06)  ಹೈ ಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ (NCB) ಅಧಿಕಾರಿಗಳು ಪ್ರವಾಸಿಗರ ಸೋಗಿನಲ್ಲಿ ದಾಳಿ ಮಾಡಿ ಬಾಲಿವುಡ್ (Bollywood) ನಾಯಕ ಶಾರುಖ್ ಖಾನ್ ಪುತ್ರನ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದು ಗೊತ್ತೆ ಇದೆ. ಈ ನಡುವೆ ನಟಿ ರಮ್ಯಾ(Ramya) ದಿವ್ಯಾ ಸ್ಪಂದನ ಇದೇ ವಿಚಾರದ ಬಗ್ಗೆ  ಮಾತನಾಡಿದ್ದಾರೆ.

PREV
17
'ದಾಖಲೆಯೇ ಇಲ್ಲ' ಆರ್ಯನ್ ಖಾನ್ ಬಂಧನಕ್ಕೆ ರಮ್ಯಾ ಅನುಮಾನ!

ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ(Drug Case) ಬಾಲಿವುಡ್(Bollywood) ಹಾಗೂ ದೇಶವನ್ನೇ ಬೆಚ್ಚಿಬೀಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ(Cruise Drug bust) ನಡೆದ ರೇವ್ ಪಾರ್ಟಿಯಲ್ಲಿ ನಡೆದ NCB ಅಧಿಕಾರಿಗಳ ದಾಳಿ ಬಾಲಿವುಡ್ ಡ್ರಗ್ಸ್ ಕರಾಳ ಕತೆಯನ್ನು ಬಿಚ್ಚಿಟ್ಟಿತ್ತು. 

27

ಆರ್ಯನ್ ಖಾನ್ ಬಳಿ ಡ್ರಗ್ಸ್ ಇರಲಿಲ್ಲ. ಅವರು ಡ್ರಗ್ಸ್ ಸೇವನೆ ಮಾಡಿದ್ದರ ಬಗ್ಗೆ ದಾಖಲೆ ಇಲ್ಲ. ಆದರೂ ಅವರ ಬಂಧನವಾಗಿದೆ ಎಂದಿದ್ದಾರೆ.

37

ಇನ್ನೊಂದು ಕಡೆ  ಬಿಜೆಪಿ ಸಚಿವನ ಮಗನಿದ್ದಾರೆ. ಅವರು 4 ಜನ ರೈತರನ್ನು ಕೊಂದಿದ್ದಾರೆ. ಆದರೆ ಅವರ ಬಂಧನ ಆಗಿಲ್ಲ ಎಂದು ಉತ್ತರ ಪ್ರದೇಶದ ಘಟನೆಯನ್ನು ತಿಳಿಸಿದ್ದಾರೆ. 

47

ಹಿಂಸಾಚಾರದಲ್ಲಿ ಮೃತರಾದ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಪ್ರಿಯಾಂಕಾ ವಾದ್ರಾ ಅವರ ಬಂಧನ ಮಾಡುತ್ತೀರಿ. ಇದು ಹೊಸ ಭಾರತ ಅಧಿಕಾರದಲ್ಲಿ ಇರುವವರ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ! ಎಂದು ವ್ಯಂಗ್ಯವಾಡಿದ್ದಾರೆ. 

57

ವಿಚಾರಣೆ ವೇಳೆ ಆರ್ಯನ್ ನೀಡಿದ ಹೇಳಿಕೆ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಎನ್ ಸಿಬಿ ಹೇಳುತ್ತಿದೆ.  ಆದರೆ ಮಾಧ್ಯಮಗಳಲ್ಲಿ ಮಾತ್ರದಾ ಅವರು ಹಾಗೆ ಹೇಳಿದ್ದಾರೆ.. ಹೀಗೆ ಹೇಳಿದ್ದಾರೆ ಎಂಬ ಸುದ್ದಿಗಳು ಬರುತ್ತಲೇ ಇವೆ.

67

ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದರು. ಆರ್ಯನ್ ಖಾನ್ ಅತ್ತರು ಎಂಬ ಅರ್ಥದ ಸುದ್ದಿ ಹರಡುವುದರ ಹಿಂದೆ ಯಾರಿದ್ದಾರೆ ಎಂದು ಕೇಳಿದ್ದಾರೆ.

77

ಆರೋಪಿಗಳನ್ನು ಪ್ರಶ್ನೆ ಮಾಡುವಾಗ ಅಧಿಕಾರಿಗಳನ್ನು ಹೊರತುಪಡಿಸಿ ಅಲ್ಲಿ ಯಾರೂ ಇರುವುದಿಲ್ಲ. ಹಾಗಾದರೆ ಮಾಹಿತಿ ಹೇಗೆ ಸಿಕ್ಕಿತು? ಎಂದು ಪ್ರೆಶ್ನೆ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories