ಮದುವೆಯಾಗೋಕೆ ಯಾರೂ ಸಿಗ್ತಾ ಇಲ್ಲ ಇನ್ನೂ ಸಿಂಗಲ್‌ ಎಂದ ಹಾಟ್‌ ನಟಿ, 'ಮನೆ ಮುಂದೆ ಕ್ಯೂ ನಿಲ್ಲೋದಾ..?' ಎಂದ ಹುಡುಗ್ರು!

Published : Oct 12, 2023, 08:02 PM IST

ಈಗಾಗಲೇ 31 ವರ್ಷವಾಗಿದೆ. ಮದುವೆಯಾಗೋಕೆ ಮನೆಯಿಂದ ಒತ್ತಡ ಬರುತ್ತಿದೆ. ಆದರೆ, ನನಗೆ ಬೇಕಾದಂಥ ಹುಡುಗನೇ ಸಿಗುತ್ತಿಲ್ಲ ಎಂದು ಹಾಟ್‌ ನಟಿಯೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

PREV
117
ಮದುವೆಯಾಗೋಕೆ ಯಾರೂ ಸಿಗ್ತಾ ಇಲ್ಲ ಇನ್ನೂ ಸಿಂಗಲ್‌ ಎಂದ ಹಾಟ್‌ ನಟಿ, 'ಮನೆ ಮುಂದೆ ಕ್ಯೂ ನಿಲ್ಲೋದಾ..?' ಎಂದ ಹುಡುಗ್ರು!

ನಟಿ ಮೃಣಾಲ್‌ ಠಾಕೂರ್‌ ಸಖತ್‌ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿರುವು ಮಾತು. 

217

ನಟ ದುಲ್ಖರ್‌ ಸಲ್ಮಾನ್‌ ಅವರೊಂದಿಗೆ ಸೀತಾರಾಮ ಚಿತ್ರದ ಮೂಲಕ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಮೃಣಾಲ್‌ ಠಾಕೂರ್‌, ತಮ್ಮ ಸಹಜ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.

317

ಸಹಜ ಅಭಿನಯದೊಂದಿಗೆ ಬೋಲ್ಡ್‌ ದೃಶ್ಯಗಳನ್ನು ಯಾವುದೇ ತಕರಾರು ಇಲ್ಲದೆ ಮೃಣಾಲ್‌ ಠಾಕೂರ್‌ ನಟಿಸುತ್ತಾರೆ. ಇನ್ನು ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಕೂಡ ಅಷ್ಟೇ ಮಾದಕವಾಗಿರುತ್ತದೆ.

417

ಇತ್ತೀಚೆಗೆ ತಮ್ಮ ಚಿತ್ರದ ಪ್ರಮೋಷನ್‌ಗಾಗಿ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದ ಅವರು ತಾವಿನ್ನೂ ಸಿಂಗಲ್‌ ಆಗಿರುವುದಾಗಿ ತಿಳಿಸಿದ್ದಾರೆ.

517

ಅದಲ್ಲದೆ, ತಮ್ಮ ಕುಟುಂಬದಲ್ಲಿ ಮದುವೆಯಾಗುವಂತೆ ಸಿಕ್ಕಾಪಟ್ಟೆ ಒತ್ತಾಯ ಮಾಡುತ್ತಿದ್ದಾರೆ ಎಂದೂ ತಿಳಿಸಿದ್ದು, ತಾವೂ ಕೂಡ ಹುಡುಗನ ಹುಡುಕಾಟದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

617

ಅವರು ತಮಾಷೆಯಾಗಿ ಈ ಮಾತು ಹೇಳಿದ್ದಾರೋ ಅಥವಾ ಸಿರಿಯಸ್ಸ್‌ ಆಗಿಯೇ ಹೇಳಿದ್ದಾರೋ ಎನ್ನುವುದು ಗೊತ್ತಿಲ್ಲ. ಆದರೆ, ಸ್ವತಃ ಮೃಣಾಲ್‌ ಠಾಕೂರ್‌ ಮಾತ್ರ ತಾವು ಇಷ್ಟಪಡುವ ಹುಡುಗ ಹೇಗಿರಬೇಕೂ ಎಂದೂ ತಿಳಿಸಿದ್ದಾಋಏ.

717

ಇನ್ನು ಮೃಣಾಲ್‌ ಠಾಕೂರ್‌ ಹೀಗೆ ಹೇಳುತ್ತಿದ್ದಂತೆ, ನಾಳೆ ಬೆಳಗ್ಗೆಯಿಂದ ನಿಮ್ಮ ಮನೆ ಎದುರು ಕ್ಯೂ ನಿಲ್ಲೋದಾ ಎಂದು ಹುಡುಗರು ತಮಾಷೆಯಾಗಿ ಮೃಣಾಲ್‌ ಠಾಕೂರ್‌ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡಿದ್ದಾರೆ.

817

ಆಂಖ್‌ ಮಚೋಲಿ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರಲು ಮೃಣಾಲ್‌ ಠಾಕೂರ್‌ ಸಿದ್ಧವಾಗಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ತಮ್ಮ ರಿಲೇಷನ್‌ಷಿಷ್‌ ಸ್ಟೇಟಸ್‌ ಬಗ್ಗೆ ಮಾತನಾಡಿದ್ದಾರೆ.

917

ಉಮೇಶ್‌ ಶುಕ್ಲಾ ನಿರ್ದೇಶನದ ಕಾಮಿಡಿ ಚಿತ್ರ ಆಂಖ್‌ ಮಚೋಲಿ, ಅಕ್ಟೋಬರ್‌ 27 ರಂದು ಬಿಡುಗಡೆಯಾಗಲಿದೆ.ಅಭಿಮನ್ಯು ದಾಸಾನಿ ಮತ್ತು ಪರೇಶ್ ರಾವಲ್ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

1017

ತಮ್ಮ ರಿಲೇಷನ್‌ಷಿಪ್‌ ಸ್ಟೇಟಸ್‌ ಬಗ್ಗೆ ಕೇಳಿದ ಪ್ರಶ್ನೆಗೆ 31 ವರ್ಷದ ನಟಿ ಯಾವುದೇ ಮುಜುಗರವಿಲ್ಲದೆ ಉತ್ತರ ನೀಡಿದರು. ನಾನಿನ್ನೂ ಸಿಂಗಲ್‌ ಆಗಿದ್ದೇನೆ. ನನಗೆ ಸೂಕ್ತವಾದ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ್ದಾರೆ.

1117

ನಿಮ್ಮ ಮನೆಯವರು ಕೂಡ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆಯೇ ಎಂದು ನಟಿಯನ್ನು ಕೇಳಿದಾಗ, "ಖಂಡಿತಾ ಒತ್ತಡವಿದೆ. ಆದರೆ, ಯಾರಾದರೂ ಹುಡುಗ ಸಿಗಬೇಕಲ್ಲ' ಎಂದು ಹೇಳಿದ್ದಾರೆ.

1217


ಆದರೆ, ಒಬ್ಬ ಹುಡುಗನನ್ನು ನಾನು ಹುಡುಕುತ್ತಿದ್ದೇನೆ. ಆತ ಕೀನು ರೀವ್ಸ್. ಈತ ನನಗೆ ಸಿಕ್ಕರೆ ಬಹಳ ಖುಷಿಯಾಗುತ್ತದೆ ಎಂದು ಮೃಣಾಲ್‌ ಠಾಕೂರ್‌ ನಕ್ಕಿದ್ದಾರೆ.

1317

ಕೀನು ರೀವ್ಸ್ ಕೆನಡಾದ ನಟ ಮತ್ತು ಸಂಗೀತಗಾರ. ದಿ ಮ್ಯಾಟ್ರಿಕ್ಸ್ ಎಂಬ ಸೈನ್ಸ್‌ ಫಿಕ್ಷನ್‌ ಸಿರೀಸ್‌ನಲ್ಲಿನ ಪಾತ್ರಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ.

1417

ಇದೇ ವೇಳೆ ತಮ್ಮ ಹಳೆಯ ರಿಲೇಷನ್‌ಷಿಪ್‌ ಬಗ್ಗೆಯೂ ಅವರು ಮಾತನಾಡಿದ್ದಾರೆ. ಹಿಂದೆ ನನಗೊಬ್ಬ ಬಾಯ್‌ಫ್ರೆಂಡ್‌ ಇದ್ದ. ಆದರೆ, ನನ್ನ ಹಠಮಾರಿ ಧೋರಣೆ ಕಂಡು ಆತ ಓಡಿ ಹೋದ ಎಂದು ಹೇಳಿದ್ದಾರೆ.

1517

ನನಗೆ ಹಠಮಾರಿ ಧೋರಣೆ ಇಷ್ಟವಾಗೋದಿಲ್ಲ ಎಂದು ಆತ ಪದೇ ಪದೇ ಹೇಳುತ್ತಿದ್ದ. ಅದಲ್ಲದೆ, ನಾನು ನಟಿಯಾಗಿರೋದು ಕೂಡ ಆತನಿಗೆ ಇಷ್ಟವಿರಲಿಲ್ಲ ಎಂದು ಮೃಣಾಲ್‌ ಠಾಕೂರ್‌ ಹೇಳಿದ್ದಾರೆ.

1617

ಆದರೆ, ನಾನು ಮಾತ್ರ ಅದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಹಾಗಂತ ಆತ ನನ್ನನ್ನು ಬಿಟ್ಟುಹೋಗಿದ್ದಕ್ಕೆ ಬೇಸರವಿಲ್ಲ. ಆತ ಬಹಳ ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದ. ಹಾಗಾಗಿ ಅವನು ಹೇಳಿದ್ದರೂ ಸರಿಯಿತ್ತು ಎಂದು ಮೃಣಾಲ್‌ ಹೇಳಿದ್ದಾರೆ.

 

1717

ಈ ವರ್ಷ ಮೃಣಾಲ್‌ ಠಾಕೂರ್‌ ಆಂಖ್‌ ಮಚೋಲಿ ಮಾತ್ರವಲ್ಲದೆ, ಪೂಜಾ ಮೇರಿ ಜಾನ್‌, ಪಿಪ್ಪಾ, ಹಾಯ್‌ ನಾನಾ ಚಿತ್ರಗಳಲ್ಲೂ ನಟಿಸಿದ್ದಾರೆ. ಹಾಯ್‌ ನಾನಾ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದು, ಮತ್ತೆರಡು ಚಿತ್ರಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

Read more Photos on
click me!

Recommended Stories