ಅಭಿಮಾನಿಯ ಕಟ್ಟ ಕಡೆಯ ಆಸೆಯನ್ನೇ ಈಡೇರಿಸದ ನಟ ಯಶ್​: ಆದರೆ ಕೊಟ್ಟ ಕಾರಣಕ್ಕೆ ದೇಶವೇ ಫಿದಾ

Published : Aug 14, 2026, 04:25 PM IST

ಖ್ಯಾತ ರಿಯಾಲಿಟಿ ಶೋ 'ಆಪ್ ಕಿ ಅದಾಲತ್' ನಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ತಾವು ಏಕೆ ಹೋಗಲಿಲ್ಲ ಎನ್ನುವ ಪ್ರಶ್ನೆಗೆ ಯಶ್, ಒಂದು ವೇಳೆ ತಾನು ಹೋಗಿದ್ದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

PREV
16
ಟಾಕ್ಸಿಕ್​ ಹವಾ

ಸದ್ಯ ನಟ ಯಶ್​ ಅವರ ಟಾಕ್ಸಿಕ್​ ಚಿತ್ರ (Toxic Movie) ಬಿಡುಗಡೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಯಶ್​ ಅವರ ಸಾಲು ಸಾಲು ಚಿತ್ರದ ಯಶಸ್ಸಿನಿಂದಾಗಿ ಅವರು ಪ್ಯಾನ್​ ಇಂಡಿಯಾ ಮೀರಿದ ಸ್ಟಾರ್​ ಆಗಿ ಬೆಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಸುಪ್ರಸಿದ್ಧ ರಿಯಾಲಿಟಿ ಷೋ, ದಿ ರಜತ್​ ಶರ್ಮಾ ಷೋನಲ್ಲಿ ಯಶ್​ ಅವರಿಗೆ ಆಹ್ವಾನ ಬಂದಿದೆ. ಈ ಷೋನಲ್ಲಿ ಸಂದರ್ಶನ ಕೊಡುತ್ತಿರುವ ಮೊದಲ ಕನ್ನಡಿಗ ಎನ್ನುವ ಹೆಮ್ಮೆ ಇವರದ್ದು.

26
ದೇಶವೇ ಫಿದಾ

ಈ ಷೋನಲ್ಲಿ ಯಶ್​ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ಪ್ರಶ್ನೆಯನ್ನು ರಜತ್​ ಶರ್ಮಾ ಅವರು ಕೇಳಿದ್ದರು. ಅದಕ್ಕೆ ಯಶ್​ ಕೊಟ್ಟಿರುವ ಉತ್ತರಕ್ಕೆ ಇಡೀ ದೇಶವೇ ಫಿದಾ ಆಗಿದೆ.

36
ಅಭಿಮಾನಿಯ ಆತ್ಮಹತ್ಯೆ

ಅದೇನೆಂದರೆ, ನಟ ಯಶ್​ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರು. ನನ್ನ ಕೊನೆಯ ಆಸೆ ಎಂದರೆ, ನಟ ಯಶ್​ ಅವರು ನನ್ನ ಅಂತ್ಯಕ್ರಿಯೆಗೆ ಬರಬೇಕು ಎನ್ನುವ ಆಸೆ ಇಟ್ಟಿದ್ದ. ಯಶ್​ ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಬ್ಬರೂ ಬರಬೇಕು ಎಂದು ಸಾಯುವ ಮುನ್ನ ಮನವಿ ಮಾಡಿದ್ದರು. ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಹೋದರು, ಆದರೆ ಯಶ್​ ಹೋಗಲಿಲ್ಲ. ಇದಕ್ಕೆ ಕಾರಣವೇನು ಎಂದು ರಜತ್​ ಶರ್ಮಾ ಕೇಳಿದರು.

46
ಸಾವಿನ ಹಾದಿ

ಅದಕ್ಕೆ ಯಶ್​ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ಹೇಳಿದ್ದೇನೆಂದರೆ, ನಾನು ಒಂದು ವೇಳೆ ಅವರ ಅಂತ್ಯಕ್ರಿಯೆಗೆ ಹೋದರೆ ಅದು ಕೆಟ್ಟ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ. ಇದರಿಂದ ಪ್ರೇರೇಪಿತರಾಗಿ ಹಲವರು ಇದೇ ದಾರಿಯನ್ನು ಹಿಡಿಯಬಹುದು. ಕೊನೆಯ ಆಸೆ ಎಂದು ಹೇಳಿ ಸಾವಿನ ಹಾದಿ ತುಳಿಯಬಹುದು. ಇಂಥ ಪ್ರೇರಣೆಯನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ ಎಂದರು.

56
ಸಾಧನೆ ಮಾಡಲಿ

ಯಾರಾದರೂ ನಾನು ಇಂಥದ್ದೊಂದು ಸಾಧನೆ ಮಾಡುತ್ತೇನೆ. ಆಗ ಯಶ್​ ಅವರು ಬಂದು ನನ್ನನ್ನು ನೋಡಲಿ ಎಂದರೆ, ಖಂಡಿತವಾಗಿಯೂ ಆ ಸಾಧನೆ ಮಾಡಿದವರನ್ನು ನೋಡಿ ಶುಭ ಕೋರುತ್ತೇನೆ. ಅದು ಹಲವರಿಗೆ ಮಾದರಿಯಾಗುತ್ತದೆ. ಆದರೆ ಸಾವಿನ ಮಾದರಿ ಯಾರಿಗೂ ಆಗುವುದು ನನಗೆ ಇಷ್ಟವಿಲ್ಲ ಎಂದರು. ಈ ಉತ್ತರಕ್ಕೆ ಖುದ್ದು ರಜತ್​ ಶರ್ಮಾ ಅವರೇ ಶ್ಲಾಘನೆ ವ್ಯಕ್ತಪಡಿಸಿದರು.

66
ಏನಿದು 'ಆಪ್ ಕಿ ಅದಾಲತ್'

ಕೋರ್ಟ್​ ಮಾದರಿಯಲ್ಲೇ ಸೆಟ್‌ ಹಾಕಿ ನಡೆಸಲಾಗುವ ಈ ಸಂದರ್ಶನದಲ್ಲಿ, ಕಟಕಟೆಯಲ್ಲಿ ಕೇವಲ ಖ್ಯಾತನಾಮರನ್ನು ಮಾತ್ರ ಕೂರಿಸಲಾಗುತ್ತದೆ. ಓರ್ವ ನ್ಯಾಯಾಧೀಶರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಪತ್ರಕರ್ತ ರಜತ್ ಶರ್ಮಾ ಅವರು ವಕೀಲರಂತೆ ಪ್ರಶ್ನೆಗಳನ್ನು ಕೇಳುತ್ತಾ, ಸೆಲೆಬ್ರಿಟಿಗಳ ಜೀವನದ ಹೆಜ್ಜೆಗುರುತುಗಳನ್ನು ಅತ್ಯಂತ ಗೌರವಾನ್ವಿತವಾಗಿ ವಿಚಾರಣೆ ನಡೆಸುತ್ತಾರೆ. ಎಲ್ಲಾ ಆದ ಬಳಿಕ ಅವರು ಕೊಟ್ಟ ಉತ್ತರ ಕೇಳಿ ಜಡ್ಜ್​ ಆದವರು ಅವರ ಬಗ್ಗೆ ಅಂತಿಮ ತೀರ್ಪು ಕೊಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories