7. ಚರ್ಮಕ್ಕೆ ಪೋಷಣೆ ಕೊಡುವ ಆಹಾರ ಸೇವಿಸಿ
ಹೊರಗಿನಿಂದ ಮಾಡುವ ಕೇರ್ ಜೊತೆಗೆ, ಒಳಗಿನಿಂದ ಕೇರ್ ತಗೊಳ್ಳೋದೂ ಮುಖ್ಯ. ಹಣ್ಣು, ತರಕಾರಿ, ಬೀಜಗಳು, ಒಮೆಗಾ-3 ಫ್ಯಾಟಿ ಆಸಿಡ್ಸ್, ವಿಟಮಿನ್ ಇರುವ ಆಹಾರ ಸೇವಿಸಿದ್ರೆ ಚರ್ಮ ನೈಸರ್ಗಿಕವಾಗಿ ಹೊಳೆಯುತ್ತೆ. ಅವಕಾಡೊ, ಬಾದಾಮಿ, ಕಲ್ಲಂಗಡಿ, ಬೆರ್ರಿಸ್ ಚರ್ಮಕ್ಕೆ ಒಳ್ಳೆಯದು.
8. ನಿದ್ದೆಗೆ ಪ್ರಾಮುಖ್ಯತೆ ಕೊಡಿ..
ನಿದ್ದೆ ಸರಿಯಾಗಿಲ್ಲ ಅಂದ್ರೆ..ಮುಖದ ಮೇಲೆ ಆಯಾಸ, ಕಪ್ಪು ವರ್ತುಲಗಳು, ಚರ್ಮದ ಕಲ್ಮಶಗಳು ಕಾಣಿಸುತ್ತೆ. ರಾತ್ರಿ 7–8 ಗಂಟೆ ಚೆನ್ನಾಗಿ ನಿದ್ದೆ ಮಾಡಿದ್ರೆ ಚರ್ಮಕ್ಕೆ ಚೈತನ್ಯ ಬರುತ್ತೆ. ನಿದ್ದೆಯಲ್ಲಿ ದೇಹ, ಚರ್ಮ ರಿಪೇರಿ ಆಗುತ್ತೆ. ಇದು ನೈಸರ್ಗಿಕ ರೀಚಾರ್ಜ್ ಟೈಮ್.
9. ಒತ್ತಡ ನಿಯಂತ್ರಿಸಿ
ಹೆಚ್ಚು ಒತ್ತಡ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತೆ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತೆ. ಧ್ಯಾನ, ಪ್ರಾಣಾಯಾಮ, ಯೋಗ ಮಾನಸಿಕ ಶಾಂತಿ ಕೊಡುತ್ತೆ. ದಿನಕ್ಕೆ ಕನಿಷ್ಠ 10 ನಿಮಿಷ ಧ್ಯಾನ ಮಾಡಿದ್ರೆ ಚರ್ಮದ ಮೇಲೆ ನೆಗೆಟಿವ್ ಪರಿಣಾಮ ಕಡಿಮೆಯಾಗುತ್ತೆ. ನಿಯಮಿತವಾಗಿ ಯೋಗ, ಧ್ಯಾನ ಮಾಡಿದ್ರೆ.. ಮನಸ್ಸಿಗೆ ನೆಮ್ಮದಿ ಸಿಗುತ್ತೆ. ಹಾಡು ಕೇಳೋದ್ರಿಂದಲೂ ಒತ್ತಡ ಕಡಿಮೆಯಾಗುತ್ತೆ. ಇಷ್ಟಪಟ್ಟವರ ಜೊತೆ ಮಾತಾಡಿದ್ರೂ ಒತ್ತಡ ಕಡಿಮೆಯಾಗುತ್ತೆ.