ಭಾರತದ 10 ಫೇಮಸ್ ಎಜುಕೇಷನಲ್ ಇನ್ಫ್ಲುಯೆನ್ಸರ್ಸ್ ಇವರು!
ಭಾರತದ ಟಾಪ್ ಎಜುಕೇಷನಲ್ ಇನ್ಫ್ಲುಯೆನ್ಸರ್ಸ್: ಭಾರತದ ಕೆಲ ಫೇಮಸ್ ಟೀಚರ್ಸ್ ಬಗ್ಗೆ ತಿಳ್ಕೊಳ್ಳಿ! ಇವರು ತಮ್ಮ ಟೀಚಿಂಗ್ ಸ್ಟೈಲ್ಗೆ ಫೇಮಸ್ಸು. ಅನೇಕರ ಭವಿಷ್ಯ ಬೆಳಗಿದ್ದಾರೆ. ಲಕ್ಷಗಟ್ಟಲೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಭಾರತದ ಟಾಪ್ ಎಜುಕೇಷನಲ್ ಇನ್ಫ್ಲುಯೆನ್ಸರ್ಸ್: ಭಾರತದ ಕೆಲ ಫೇಮಸ್ ಟೀಚರ್ಸ್ ಬಗ್ಗೆ ತಿಳ್ಕೊಳ್ಳಿ! ಇವರು ತಮ್ಮ ಟೀಚಿಂಗ್ ಸ್ಟೈಲ್ಗೆ ಫೇಮಸ್ಸು. ಅನೇಕರ ಭವಿಷ್ಯ ಬೆಳಗಿದ್ದಾರೆ. ಲಕ್ಷಗಟ್ಟಲೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಖಾನ್ ಸರ್
ಖಾನ್ ಸರ್ ಫೇಮಸ್ ಟೀಚರ್. ಖಾನ್ ಸರ್ಗೆ ಯೂಟ್ಯೂಬ್ನಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ! ಫೈಜಲ್ ಖಾನ್ ಬಿಹಾರದ ಪಾಟ್ನಾದಲ್ಲಿ ನೆಲೆಸಿರುವ ಭಾರತೀಯ ಶಿಕ್ಷಕ ಮತ್ತುಯೂಟ್ಯೂಬರ್. ಭಾರತದಲ್ಲಿ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ
ಅಲಖ್ ಪಾಂಡೆ (ಫಿಸಿಕ್ಸ್ ವಾಲಾ)
ಫಿಸಿಕ್ಸ್ನಲ್ಲಿ ಇವರ ಟೀಚಿಂಗ್ ಸ್ಟೈಲ್ ಸೂಪರ್. ಅಲಖ್ ಪಾಂಡೆ ಯೂಟ್ಯೂಬ್ ಮತ್ತೆ ಇನ್ಸ್ಟಾಗ್ರಾಮ್ನಲ್ಲಿ ಫುಲ್ ಫೇಮಸ್ಸು! ಅಲಖ್ ಪಾಂಡೆ ಭಾರತದ ಪ್ರಮುಖ, ಅತ್ಯಂತ ಕೈಗೆಟುಕುವ ಎಜು-ಟೆಕ್ ವೇದಿಕೆಯಾದ PW ನ ಸ್ಥಾಪಕರು ಮತ್ತು CEO ಆಗಿದ್ದಾರೆ.
ದಾಖಲಾತಿ ವಯೋಮಿತಿ ಗೊಂದಲ: ಶಿಕ್ಷಣ ಸಚಿವರೇ ಇದೆಂಥಾ ವರ್ತನೆ? ಬೇಜವಾಬ್ದಾರಿ ಮಾತು!
ಅಂಕುರ್ ವಾರಿಕೂ
ಅಂಕುರ್ ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಿಂದ ಜನಗಳ ಮಧ್ಯೆ ಫೇಮಸ್ ಆಗಿದ್ದಾರೆ. ಅಂಕುರ್ ವಾರಿಕೂ ಒಬ್ಬ ಉದ್ಯಮಿ ಮತ್ತು ಕಂಟೆಂಟ್ ಕ್ರಿಯೇಟರ್, ಯಶಸ್ಸು ಮತ್ತು ವೈಫಲ್ಯ, ಹಣ ಮತ್ತು ಹೂಡಿಕೆ, ಸ್ವಯಂ ಅರಿವು ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಅವರ ಆಳವಾದ, ಹಾಸ್ಯಮಯ ಮತ್ತು ಪ್ರಾಮಾಣಿಕ ಆಲೋಚನೆಗಳು ಹಂಚಿಕೊಳ್ಳುತ್ತಾರೆ. ವೆಬ್‌ವೇಡಾ ಎಂಬ ಕಂಪೆನಿ ಸ್ಥಾಪಿಸಿದ್ದಯ ಇದು ಯುವ ವೃತ್ತಿಪರರಿಗೆ ಉದ್ಯಮಶೀಲತೆ, ವೃತ್ತಿಜೀವನದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಮೀಸಲಿಡಲಾಗಿದೆ.
ದೀಕ್ಷಾ ಅರೋರಾ
ದೀಕ್ಷಾ ಅರೋರಾ ಇಂಟರ್ವ್ಯೂಗೆ ಪ್ರಿಪೇರ್ ಆಗೋಕೆ ಮತ್ತೆ ರೆಸ್ಯೂಮ್ ಮಾಡೋಕೆ ಹೆಲ್ಪ್ ಮಾಡ್ತಾರೆ. ಓರ್ವ ಕೋಚ್ ಮತ್ತು ಮೋಟಿವೇಷನಲ್ ಸ್ಪೀಕರ್ ಕೂಡ ಹೌದು. ಸಾವಿರಾರು ಜನರನ್ನು ಇಂಟರ್ವ್ಯೂಗೆ ತಯಾರಿ ಮಾಡಿದ್ದಾರೆ.
76 ವರ್ಷ ಹಳೆಯ ಕರ್ನಾಟಕ ವಿವಿಗೆ ಆರ್ಥಿಕ ಸಂಕಷ್ಟ: 416 ಬೋಧಕ, 849 ಬೋಧಕೇತರ ಹುದ್ದೆ ಖಾಲಿ
ಡಾ. ಅರವಿಂದ್ ಅರೋರಾ (A2 ಸರ್)
ಸೈನ್ಸ್ನಲ್ಲಿ ಇವರ ಪಾಠಕ್ಕೆ ಫೇಮಸ್. ಡಾ. ಅರೋರಾ ಯೂಟ್ಯೂಬ್ನಲ್ಲಿ ಇಂಟರಾಕ್ಟಿವ್ ಕಂಟೆಂಟ್ ಮೂಲಕ ಸ್ಟೂಡೆಂಟ್ಸ್ಗೆ ಕನೆಕ್ಟ್ ಆಗ್ತಾರೆ. ಡಾ ಅರವಿಂದ್ ಅರೋರಾ ಅವರು ಶಿಕ್ಷಣ ತಜ್ಞರಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚು ಮಾರಾಟವಾದ ಪುಸ್ತಕಗಳ ಲೇಖಕರಾಗಿದ್ದಾರೆ.
ರಚನಾ ಫಡ್ಕೆ ರಾಣಡೆ
ರಚನಾ ಫಡ್ಕೆ ರಾಣಡೆ ಚಾರ್ಟರ್ಡ್ ಅಕೌಂಟೆಂಟ್ ಮಕ್ಕಳಿಗೆ ಪಾಠ ಮಾಡ್ತಾರೆ. ಇವರು ಇನ್ವೆಸ್ಟ್ಮೆಂಟ್ ಬಗ್ಗೆ ಹೇಳಿಕೊಡ್ತಾರೆ. ಪುಣೆ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಯೂಟ್ಯೂಬರ್ ಆಗಿದ್ದು, ಆಡಿಟಿಂಗ್ ಕ್ಷೇತ್ರದಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಅನುಭವವನ್ನು ಹೊಂದಿದ್ದಾರೆ.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್: ತಿಂಗಳಿಗೆ 5,000 ರೂ, ಮಾರ್ಚ್ 31ರೊಳಗೆ ಅಪ್ಲೈ ಮಾಡಿ!
ಅನುಷ್ಕಾ ರಾಥೋಡ್ ಫೈನಾನ್ಸ್ ಎಕ್ಸ್ಪರ್ಟ್ ಅಂತಾ ಫೇಮಸ್ ಆಗಿದ್ದಾರೆ. 2024 ರ 30 ವರ್ಷದೊಳಗಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ವ್ಯವಹಾರ, ಷೇರುಮಾರುಕಟ್ಟೆ , ಬಿಸಿನೆಸ್ ಬಗ್ಗೆ ಮಾಹಿತಿ ನೀಡುತ್ತಾರೆ.
ಪ್ರಶಾಂತ್ ಕಿರಡ್: ಪ್ರಶಾಂತ್ ಕಿರಡ್ ಟೀಚರ್ ಮತ್ತೆ ಎಜುಕೇಟರ್. ಇವರ ಹತ್ರ ತುಂಬಾ ಕೋಚಿಂಗ್ ಸೆಂಟರ್ಗಳಿವೆ. ಎಕ್ಸಾಮ್ಗೆ ಪ್ರಿಪೇರ್ ಆಗೋಕೆ ಹೆಲ್ಪ್ ಮಾಡ್ತಾರೆ.
ವರುಣ್ ಮಾಯಾ: ವರುಣ್ ಮಾಯಾ ಕಮ್ಯುನಿಕೇಷನ್ ಮತ್ತೆ ಸಾಫ್ಟ್ ಸ್ಕಿಲ್ಸ್ನಲ್ಲಿ ಗುರು ಅಂತಾ ಫೇಮಸ್. ಇವರು ಸ್ಟೂಡೆಂಟ್ಸ್ಗೆ ಪ್ರಾಕ್ಟಿಕಲ್ ಅಡ್ವೈಸ್ ಕೊಡ್ತಾರೆ.
ವಿಜೇಂದ್ರ ಚೌಹಾಣ್:
ವಿಜೇಂದ್ರ ಚೌಹಾಣ್ ಎಜುಕೇಟರ್. ಇವರು ದೃಷ್ಟಿ ಐಎಎಸ್ ಕೋಚಿಂಗ್ ಇನ್ಸ್ಟಿಟ್ಯೂಟ್ನ ಮಾಕ್ ಇಂಟರ್ವ್ಯೂ ಪ್ಯಾನೆಲ್ನಲ್ಲೂ ಇದ್ದಾರೆ.